ಎಳೆಯುತ್ತಾರೆ

ಎಳೆಯುತ್ತಾರೆ

ಎಳೆಯುತ್ತಾರೆ
ಪ್ರಜಾ ತೇರು
ಐದು ವರುಷಕೊಮ್ಮೆ
ಜಾತ್ರೆಯು
ಒಮ್ಮೆ ಅವರು
ಒಮ್ಮೆ ಇವರು
ಕೈ ತೆನೆ ಕಮಲ
ಕೆಸರು.
ಕೋಟಿ ನುಂಗಿದ
ಭ್ರಷ್ಟರಿವರು
ಟಿವಿ ಪತ್ರಿಕೆ
ಹಗ್ಗ ಬಿಗಿದು
ನ್ಯಾಯ ಕಾನೂನು
ಹರಕೆಯಿಂದ
ಬುದ್ಧ ಬಸವ ಗಾಂಧಿ
ಹೆಸರಲಿ
ತೇರ ಎಳೆಯುತ್ತಾರೆ
ಬಜೆಟ್ ಎಂಬ
ಕನಸು ಯೋಜನೆ
ಬಡವರ ಬಯಕೆಯ
ಪತಾಕೆ ಕಟ್ಟಿ
ಪುಡಿಗಾಸು ಚುರುಮುರಿ
ತೂರುತ ಎಳೆಯುತ್ತಾರೆ
ಪ್ರಜಾ ತೇರು
ದಶಕ ಉರುಳಿ
ದಿನವು ಕಳೆದವು
ಸತ್ಯ ಸಮತೆ ಕಾಣಲಿಲ್ಲ
ಕತ್ತಲಲ್ಲಿ ಕುರುಡರೆಲ್ಲರೂ
ಎಳೆಯುತ್ತಾರೆ
ಜನತೆ ತೇರು
ದೇಶ ನಾಡು
ಮಸಣ ಮಾಡಿ
ಎಳೆಯುತ್ತಾರೆ
ತೇರು
ನಾನು ನೀವು
ಕೂಡಿಕೊಂಡು
ಉಳಿಸ ಬೇಕು
ಜೀವ ಬೇರು

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!