ಪ್ರೀತಿ ಸ್ನೇಹ
ನಿಮ್ಮೀರ್ವರ ಕಂಪಿಗೆ
ಚೆಲುವ ಸೊಂಪಿಗೆ
ಜಗವೇ ತಲೆದೂಗಿದೆ….
ಒಂದು ಆರಾಧನೆ…
ಇನ್ನೊಂದು ಸಮರ್ಪಣೆ…
ಮೌನರಾಗ ಯಾನ ತಪವು
ಪ್ರೇಮಭಾವ ಗಾನ ಜಪವು
ಶಿವನ ಮನದ ಗುಡಿಗೆ ಅರ್ಪಣೆ…..
ಮುಡಿಗೇರಿ ಕುಣಿವ
ಕನಸು ಒಂದು…
ಅಡಿ ಸೇರಿ ಮಣಿವ
ಮನಸು ಒಂದು…
ಅಕ್ಕನಂತೆ ಅರಸುವ..
ರಾಧೆಯಂತೆ ಹರಸುವ
ಮೀರೆಯಂತೆ ಭಜಿಸುವ
ಮಲ್ಲಿಗೆ ಶಿವನ ಉಡಿಗೆ ಅರ್ಪಣೆ….
ಕೆಂಡದಂಥ ಕೋಪ
ತಣಿಸುವ ಕಂಪ ಕೆಂಡ ಸಂಪಿಗೆ..
ಮುನಿದ ಮನಸು ಸೆಳೆದು.
ಸ್ನೇಹ ಸೌರಭ ಬೀಸಿ
ಮಣಿಸುವ ತಂಪ ಶುಭ್ರ ಮಲ್ಲಿಗೆ…
ಭಕ್ತಿ ಭಾವ ಶಿವನ ಮಡಿಲಿಗೆ ಅರ್ಪಣೆ…..
ಸ್ನೇಹ ಪ್ರೀತಿ ಅರಳಿ
ಜೀವ ಭಾವದ ಗೆಲ್ಲು ಗೆಲ್ಲಿಗೆ…
ತಲೆದೂಗಿ ತಣಿವವು
ಓಡೋಡಿ ಬರುವವು
ಸ್ನೇಹದೊಲವ ಸೊಲ್ಲಿಗೆ….
ಭಾವ ಜೀವ ಶಿವನ ಪಾದಗಳಿಗೆ…ಅರ್ಪಣೆ..
,–ಇಂದಿರಾ ಮೋಟೆಬೆನ್ನೂರ. ಬೆಳಗಾವಿ.