ಹರೇ ಶ್ರೀನಿವಾಸ 

29/2/2004ರಂದು ನಾನು

ನಿವೃತ್ತಿಹೊಂದಿ ಇಂದಿಗೆ
ಅಂದರೇ 29/2/2024. ನೇ
ದಿನಕ್ಕೆ ಇಪ್ಪತ್ತು ವರ್ಷಗಳು
ಪೂರ್ಣಗೊಂಡವು. ಈ ದಿಶೆ
ಯಲ್ಲಿ ಒಂದು ಪುಟ್ಟ ಕವನ
ನನ್ನ ಲೆಕ್ಕಣಿಕೆಯಿಂದ ಮೂಡಿ
ಬಂತು. ಅದನ್ನು ತಮ್ಮೆಲ್ಲರಿಗೂ
ತಿಳಿಸಲು ಸಂತೋಷವೆನಿಸುತ್ತದೆ
ಇದು ಸರಿಯೋ ತಪ್ಪೋ ನಾನರಿಯೆ.

ಹರೇ ಶ್ರೀನಿವಾಸ 

ನಲಿದವು ನುಲಿದವು
ದಿನಗಳು ವರುಷಗಳು
ಸುಖದಲಿ ನಲಿದವು
ದುಃಖದಲಿ ನುಲಿದವು

ಮನ ಕರಗುತಲಿ
ಮನ ಬೆಳೆಯುತಲಿ
ಮನ ಹರುಷದಲಿ
ಇಪ್ಪತ್ತು ವರುಷಗಳಲಿ

ನರಳಿದ ದಿನಗಳಿವು
ಅರಳಿದ ದಿನಗಳಿವು
ರಸ ವಿರಸದ ನೆನಹುಗಳಿವು
ಮರೆಸದ ಕುರುಹುಗಳಿವು

ನಾನೆಂತು ಮರೆಯಲಿ
ಈ ಸೌಭಾಗ್ಯವಿತ್ತವನ
ನೆನಸುತ ನೆನೆಸುತಲಿ
ಸಾಗುತಿಹೆ ನಾನು ಜೀವನದಲಿ.

ಕೃಷ್ಣ ಬೀಡಕರ.. ವಿಜಯಪುರ
29/02/2024.

Don`t copy text!