ಮುಗುಳು ನಗೆ ಮಲ್ಲಿಗೆ
ನೀನರಳಿ ನಗುವೆ ಮೆಲ್ಲಗೆ
ಎದೆಯಾಳದ ಸೊಲ್ಲಿಗೆ..
ಸ್ನೇಹ ಪ್ರೀತಿಯ ಗೆಲ್ಲುಗೆಲ್ಲಿಗೆ
ನಿನ್ನದೇ ಕಿರುಗೆಜ್ಜೆಯ ನಾದವೆಲ್ಲೆಡೆ..
ಒಲವ ಹಾದಿಯ ತುಂಬ
ನಿನ್ನ ಹೆಜ್ಜೆ ಗುರುತುಗಳು…
ಚೆಲುವ ಬೀದಿಯ ತುಂಬ
ನಿನ್ನ ನಗೆ ಮಲ್ಲಿಗೆಯರಳು….
ಮುಗುಳುನಗೆ ಮಲ್ಲಿಗೆ
ಬಿರಿಯಬಾರದೇ ಒಮ್ಮೆ…
ನನ್ನ ಹೃದಯದ ಪುಟ್ಟ
ತೋಟದ ಹೂವಾಗು ಒಮ್ಮೆ…
ಮನ ಮನೆಯಂಗಳದಿ
ಸುಳಿದು ಸೂಸು ಘಮ್ಮನೆ
ಮುಗುಳು ನಗೆ ಮಲ್ಲಿಗೆ
ಬಂದಿಳಿದು ಬಿಡು ಸುಮ್ಮನೆ..,.
ಮುನಿಸೇಕೆ ನಗೆ ಮಲ್ಲಿಗೆ
ಸ್ನೇಹ ಪರಿಯಲ್ಲವೇ
ನನ್ನೊಲವೆ ನೀ ನಗೆ ಮಲ್ಲಿಗೆ
ಕನಸ ನನಸಾಗಿಸು ಬಂದಿಲ್ಲಿಗೆ
– ಇಂದಿರಾ ಮೋಟೆಬೆನ್ನೂರ. ಬೆಳಗಾವಿ