ಪ್ಯಾಕಿಂಗ್ ಉದ್ದಿಮೆಯಲ್ಲಿ ಯಶಸ್ವಿ ಮಹಿಳೆ ದಾನೇಶ್ವರಿ
ಕೆಲವು ಕೆಲಸಗಳು ಹೆಣ್ಣು ಮಕ್ಕಳಿಗೆ ಒಗ್ಗೊದೆ ಇಲ್ಲಾ ಬಿಡಿ. ಅದರಲ್ಲೂ ಭಾರದ ಕೆಲಸುಗಳೆಂದರೆ ಹೆಂಗಸರಿಂದ ಆಗೋದೇ ಇಲ್ಲಾ …ಎಂದು ಖಡಾಖಂಡಿತ ಹೇಳುವ ಹೇಳಿಕೆಗಳಿಗೆ ಇಂದಿಗೂ ಕಡಿಮೆ ಏನು ಇಲ್ಲಾ ಬಿಡಿ.
ಇಂತಹ ಹೇಳಿಕೆಗಳನ್ನು ಎಲ್ಲಾ ಸುಳ್ಳಾಗಿಸಿ ಪುರುಷರ ಸಮಕ್ಕೆ ನಿಂತು ಕೆಲಸ ಮಾಡುವ ಛಾತಿ ನಮ್ಮನಡುವೆ ಇರುವ ಸಹೋದರಿಯರಿಗೂ ಇದೆ ಅಂದ್ರೆ ನಂಬ್ತೀರಾ? ಏನು ನಂಬಲೇ ಬೇಕು!. ಅಂತಹ ಕೆಲಸದಲ್ಲಿ ತೊಡಗಿಕೊಂಡು ಇವತ್ತು ಅದನ್ನೆ ದೊಡ್ಡ ಉದ್ದಿಮೆಯನ್ನಾಗಿಸಿದ ಹೆಣ್ಣು ಮಗಳೊಬ್ಬಳ ಸಾಧನೆಯ ಯಶೋಗಾಥೆ ನಿಮ್ಮೆದುರು ತೆರೆದಿಡುತ್ತಿರುವೆ.
ಹಾಗಂತಾ ಯಾವುದೊ ಮಹಾನಗರದಿಂದ ಬಂದ ಆಧುನಿಕ ಮಹಿಳೆಯೆನಲ್ಲಾ ಈ ಸಾಧಕಿ. ಹಾಗಾದರೆ
ಅವರು ಯಾರು ಎಲ್ಲಿಯವರು ಅಂತಿರಾ,
ಅವರೆ ಶ್ರೀಮತಿ ದಾನೇಶ್ವರಿ ಸುರೇಶ್ ಪಡೇಕರ. ಮೂಲತಃ ಬೆಳಗಾವಿ ಜಿಲ್ಲೆ ಸಂಕೇಶ್ವರ ಪುಟ್ಟ ಊರಿನ ಕೆಳಮಧ್ಯಮ ವರ್ಗದ ಕುಟುಂಬ ಸುಭಾಸ ಭಿಮಪ್ಪಾ ಹಿಡದುಗ್ಗಿಯವರ ನಾಲ್ಕು ಹೆಣ್ಣುಮಕ್ಕಳಲ್ಲಿ ಎರಡನೇಯವರು ಇವರು.
ತಂದೆ ಸುಭಾಶ ಸಂಕೇಶ್ವರ ಶ್ರೀಮಠದ ಪೂಜ್ಯರ ಕಾರು ಚಾಲಕ ವೃತ್ತಿ ಯಲ್ಲಿದ್ದರೆ ತಾಯಿ ಪತಿಯ ನೆರಳಾಗಿ ನಡೆವ ಅಪ್ಪಟ ಗೃಹಿಣಿ.
ಇಂತಹ ಒಂದು ಸಾದಾ ಸರಳ ಕುಟುಂಬದ ಹೆಣ್ಣು ಮಗಳು ಇವತ್ತು ಬೆಳಗಾವಿ ಉದ್ದಿಮೆ ಕ್ಷೇತ್ರದಲ್ಲಿ ಯಲ್ಲಿ ಗುರುತಿಸುವ ಸಾಧನೆ ಮಾಡಿದ ಇವರ ಹಿಂದಿನ ಮಹಾನ್ ಶಕ್ತಿಯೆ ಛಲ ಹಠ. ನಾಲ್ಕು ಮಕ್ಕಳ ಕುಟುಂಬದ ನಿರ್ವಹಣೆ ತಂದೆಯ ಸಂಪಾದನೆಗೆ ಕೊಂಚ ಭಾರವೇ ಆದ ಅಂದಿನ ದಿನಗಳಲ್ಲಿ ಎಲ್ಲಾ ಮಕ್ಕಳ ಓದು ನಿರ್ವಹಣೆಗೆ ಹಣದ ಕೊರತೆ ಬಂದಾಗಲೆಲ್ಲಾ ದಾನೇಶ್ವರಿಯವರ ಛಲ ಸಿಡಿದೆಳುತ್ತಿತ್ತು.
ನಾಲ್ಕು ಮಕ್ಕಳನ್ನು ಶಾಲೆ ಸೇರಿಸಲು ಹೋದಾಗ ಎಷ್ಟೋ ಬಾರಿ ಶಾಲೆ ಫೀಜ್ ಕಟ್ಟಲು ಇವರು ತಂದೆ ಪರದಾಡುತ್ತಿದ್ದಾಗ ಅಲ್ಲಿದ್ದವರು ವ್ಯಂಗ್ಯವಾಗಿ ಇವರ ಪರಿಸ್ಥಿತಿ ಕಂಡು ನಗಾಡಿದ್ದು ಇವರ ಇಂದಿನ ಸಾಧನೆಗೆ ಅಂದು ಗಟ್ಟಿ ಬುನಾದಿ ಹಾಕಿತ್ತು.
ತಮ್ಮ ಬಡತನವ ಕಂಡು ನಕ್ಕವರ ಕಣ್ಣಳತೆಗೂ ಮೀರಿದ ಸಾಧನೆ ಮಾಡುವ ಬಲವಾದ ಹಠ ದಾನೇಶ್ವರಿಯವರ ರಕ್ತದೊಂದಿಗೆ ಬೆರೆತು ಹೋಯಿತು. ದೇವರು ಧರ್ಮ ಗುರು ಹಿರಿಯರಲ್ಲಿ ಅಪಾರ ನಂಬಿಕೆ ವಿಶ್ವಾಸ ಹೊಂದಿದ್ದ ತಂದೆ ಅವರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿ ಬೆಳೆಸಿದ್ದರು. ಅದರ ಫಲವಾಗಿಯೇ ದಾನೇಶ್ವರಿ ನ್ಯಾಯಮಾರ್ಗದಲ್ಲಿ ಬದುಕಿ ನೊಂದವರಿಗೆ ಹೆಗಲಿಗೆ ಹೆಗಲಾಗಿ ಸಹಾಯಮಾಡುವ ಮಾನವೀಯತೆಯನ್ನು ಮೈಗೂಡಿಸಿಕೊಂಡಿದ್ದಾರೆ.
ಎಲ್ಲಾ ಯಶಸ್ಸಿನ ಹಿಂದೆ ಪಡೆದ ಶಿಕ್ಷಣದ ಬೆಳಕು ಇದ್ದೆ ಇರುತ್ತದೆ. ದಾನೇಶ್ವರಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸಂಕೇಶ್ವರದ ಕನ್ನಡ ಮರಾಠಿ ಕಾನ್ವೆಂಟ್ ದಲ್ಲಿ ಕಲಿತರೆ ಆದರೂ ಮಾಧ್ಯಮಿಕ ಶಿಕ್ಷಣ ಪಡೆಯುವ ಸಮಯದಲ್ಲಿ ಶಾಲಾ ಶುಲ್ಕ ಭರಿಸಲು ಇವರ ತಂದೆಯವರಿಗೆ ಸಾಧ್ಯವಾಗಿದೆ ಓದಿನಲ್ಲಿ ಸದಾ ಮುಂದೆ ಇದ್ದ ಮಗಳನ್ನು ಸರ್ಕಾರಿ ಶಾಲೆ ಸೇರಿಸುವು ಅನಿವಾರ್ಯವಾಯಿತು.
ಆದರೆ ಆಟ ಪಾಠ ಪ್ರತಿಯೊಂದರಲ್ಲೂ ಮುಂದೆ ಇದ್ದ ಇವರನ್ನು ಗಮನಿಸಿದ ಶಾಲೆಯ ಛೇರಮನ್ ಶ್ರೀ ಎ ಬಿ ಪಾಟೀಲ್ ಅವರು ತಮ್ಮ ಶಾಲೆಯಲ್ಲಿ ಉಚಿತ ಓದಿಗೆ ಅವಕಾಶ ಮಾಡಿಕೊಟ್ಟರು. ಅದರ ಫಲವಾಗಿ ದಾನೇಶ್ವರಿ ಶೃಧ್ಧೆ ಇಂದ ಓದಿ 10 ನೇ ತರಗತಿಯಲ್ಲಿ ಶಾಲೆಯ ಆದರ್ಶ ವಿದ್ಯಾರ್ಥಿನಿ ಎಂಬ ಬಿರುದಿಗೆ ಪಾತ್ರರಾದರು.
ಮುಂದಿನ ಕಾಲೇಜ ಶಿಕ್ಷಣಕ್ಕೂ ಶ್ರೀಯುತ ಎ ಬಿ ಪಾಟೀಲ್ ಅವರಿಂದಲೇ ಸಹಾಯ ದೊರೆಯಿತು. ಈ ಉಚಿತ ಸೌಲಭ್ಯಗಳನ್ನು ಬಳಸಿಕೊಂಡು ,ಪರಿಶ್ರಮದಿಂದ ಓದಿ ವಿಜ್ಞಾನ ವಿಷಯದಲ್ಲಿ ಪದವಿ ಗಳಿಸಿದರು ದಾನೇಶ್ವರಿ. ನಂತರ ಬಿ ಬಿ ಎ ಪದವಿ ಶಿಕ್ಷಣ ಪಡೆಯುವಲ್ಲಿ ಗಡಿಂಗ್ಲಜ ಶಿವರಾಜ್ ಕಾಲೇಜದ ಮುಖ್ಯಸ್ಥರಾದ ಶ್ರೀ ಕಿಸಾನ್ ರಾವ್ ಕುರಾಡೆ ಧೋನಿ ಸಹಾಯ ಮಾಡಿದ್ದನ್ನು ದಾನೇಶ್ವರಿ ಸದಾ ಸ್ಮರಿಸುತ್ತಾರೆ.
ಜೊತೆಗೆ ತಮಗಿಂತ ಚಿಕ್ಕವರಾದ ಇಬ್ಬರ ತಂಗಿಯರಿಗೂ ಒಳ್ಳೆಯ ಶಿಕ್ಷಣ ಕೊಡಿಸುವಲ್ಲಿ ಯಶಸ್ವಿಯಾದರು.ಆದರೆ…ಹೆಚ್ಚಿಗೆ ಓದಿದ ಇವರ ಹಿರಿಯಕ್ಕನವರನ್ನು ಪಾಲಕರು ಬೇಗನೆ
ಮದುವೆ ಮಾಡಿಕೊಟ್ಟರು.
ಪದವಿ ಪಡೆದ ದಾನೇಶ್ವರಿ 2009ರಲ್ಲಿ ಉದ್ಯೋಗ ಅರಸಿ ಪುಣೆ ನಗರಕ್ಕೆ ಬಂದು ಅನೇಕ ಸಣ್ಣ ಸಣ್ಣ ಸಂಸ್ಥೆಗಳಲ್ಲಿ ತಮಗೆ ಸಾಧ್ಯ ಎನ್ನಿಸುವ ಎಲ್ಲಾಕೆಲಸಗಳನ್ನು ಮಾಡಿ ಸಂಪಾದಿಸಲು ತೊಡಗಿದರು.
ತಮ್ಮ ಈ ಪುಟ್ಟ ಸಂಪಾದನೆ ತಂದೆಯವರ ಭಾರವನ್ನು ಸ್ವಲ್ಪ ಹಗುರಗೊಳಸಬಹುದೆಂಬ ಆಶೆಭಾವ ಅವರದ್ದಾಗಿತ್ತು. ಪುಣೆ ನಗರದಲ್ಲಿ ಇವರ ಕಾರ್ಯನಿಷ್ಠೆಯನ್ನು ಗುರುತಿಸಿದ್ದು ಒಂದು ಪ್ಯಾಕಿಂಗ್ ಕಂಪನಿ ಇವರ ಈ ಶ್ರಮದ ಸಾಧನೆ ನೋಡಿದ್ದ ಪರಿಚಿತ ಅಲ್ಲಿ ಇವರು ,10.000 ರೂ ಸಂಬಳಕ್ಕೆಬೆಳಗಿನಿಂದ ರಾತ್ರಿ 10 ರ ವರೆಗೆ ಕೆಲಸಮಾಡಬೇಕಿತ್ತು.ಈ ಕೆಲಸದಲ್ಲಿ ಕಂಪನಿ ನಿರ್ವಹಣೆ ಹೊಸ ವಿಷಯಗಳನ್ನು ಕಲಿತು ನಂತರ ಕೆಲವೆ ದಿನಗಳಲ್ಲಿ ಸ್ವಂತ ಕಂಪನಿ ಪ್ರಾರಂಭಿಸುವ ಮಟ್ಟಿಗೆ ಅನುಭವ ಪಡೆದರು.
ಇಲ್ಲಿಂದ ಬದುಕಿನ ಮತ್ತೊಂದು ಅಧ್ಯಾಯ ಪ್ರಾರಂಭವಾಯಿತು.
ಇವರನ್ನು ಬಾಲ್ಯದಿಂದಲೂ ಬಲ್ಲ ಸಹಪಾಠಿ ಸುರೇಶ ಪಡೇಕರ ಅವರು ಇವರನ್ನು ಮೆಚ್ಚಿ ಮದುವೆಯಾಗಿದ್ದು ಇವರ ಬದುಕು ಬದಲಾಗಲು ಒಂದು ಮಹತ್ತರ ತಿರುವು ಆಯಿತು.
ಸತಿಪತಿಗಳೊಂರಾದ ಭಕ್ತಿ ಶಿವನಿಗೆ ಹಿತವಪ್ಪುವುದು ಎನ್ನುವ ಶರಣರ ನುಡಿಗಳಂತೆ ಸುರೇಶ್ ಹಾಗೂ ದಾನೇಶ್ವರಿ ಸತತ ಪರಿಶ್ರಮದಿಂದ ತಮ್ಮದೆ ಒಂದು ಸ್ವಂತ ಪ್ಯಾಕಿಂಗ್ ತಮ್ಮಉದ್ಯಮ 2019 ರಲ್ಲಿ ಪ್ರಾರಂಭಿಸಿದರು ಅದುವೆ ಸಾಯಿದೀಪ ಪ್ಯಾಕೆಜಿಂಗ ಕಂಪನಿ .ಅಂದು ಇವರು ಪ್ರಾರಂಭಿಸಿದೆ ಈ ಉದ್ದಿಮೆ ಇಂದು 20 ಕ್ಕೂ ಹೆಚ್ಚು ಕೆಲಸದವರು ಬದುಕುಕಟ್ಟಿಕೊಳಲು ಅವಕಾಶಮಾಡಿಕೊಟ್ಟಿದೆ. ಇದೆ ಕಂಪನಿಯ ಮತ್ತೊಂದು ವಿಭಾಗ ಹುಬ್ಬಳ್ಳಿಯಲ್ಲಿಯು ಪ್ರಾರಂಭಿಸಿದರು. ಇಲ್ಲಿಯೂ ಕೂಡಾ ಬಳಗದ ಹಾಗೂ ಹೊರ ಉದ್ಯೋಗಿಗಳಿಗೆ ಕೆಲಸಕೊಟ್ಟಿದ್ದಾರೆ.
ಪುಟ್ಟ ಸಸಿಯೊಂದು ತನ್ನ ಗಟ್ಟಿ ಬೇರನ್ನು ಭೂಮಿ ಆಳಕ್ಕೆ ಇಳಿಸಿ ಮರವಾಗಿ ಬೆಳೆಯುವಂತೆ ಇವರು ಪ್ರಾರಂಭಿಸಿದ ಈ ಉದ್ದಿಮೆ ತವರೂರು ಸಂಕೇಶ್ವರ ಹೊರ ರಾಜ್ಯ ಕೇರಳದಲ್ಲಿಯು ವಿಸ್ತಾರಗೊಂಡಿವೆ.
ಈ ಎಲ್ಲಾ ಬೆಳವಣಿಗೆಗಳ ಹಿಂದಿನ ಕಾಳಜಿ
ತಾವು ಅನುಭವಿಸಿದ ಬಡತನ ನೋವು ಅವಮಾನಗಳನ್ನು ಮತ್ತೆ ಯಾರೂ ಅನುಭವಿಸಬಾರೆಂಬ ಪ್ರಾಮಾಣಿಕ ಕಳಕಳಿ ಅವರದ್ದಾಗಿದೆ. ಈ ಕಾರಣದಿಂದ ತಮ್ಮ ಕಂಪನಿಯಲ್ಲಿ ಆದಷ್ಟು ಬೇಗ ಹೆಣ್ಣುಮಕ್ಕಳಿಗೆ ಉದ್ಯೋಗ ನೀಡುವುದರೊಂದಿಗೆ ಅವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತಿದ್ದಾರೆ.
ಬೆಳಗಾವಿ ನಗರದ ಉದ್ದಮಬಾಗ ಪ್ರದೇಶದಲ್ಲಿ ತಲೆ ಎತ್ತಿ ನಿಂತಿರುವ ಇವರ ಈ ಪ್ಯಾಕಿಂಗ್ ಕಂಪನಿಯಲ್ಲಿ ಇಂದು ನಗರದಲ್ಲಿ ಅಷ್ಟೇ ಅಲ್ಲದೆ ಹೊರ ಜಿಲ್ಲೆಗಳಲ್ಲಿಯು ಪ್ರಸಿದ್ಧಿ ಪಡೆದಿದೆ.
ಹೊರರಾಜ್ಯಗಳಿಗೆ ಹಾಗೂ ಹೊರದೇಶಗಳಿಗೆ ಕಳಿಸುವ ದೊಡ್ಡ ದೊಡ್ಡ ಮಶೀನ್ ಗಳನ್ನು ಅತ್ಯಂತ ಶಿಸ್ತಿನಿಂದ ಪ್ಯಾಕಿಂಗ್ ಮಾಡುವ ಕಾರ್ಯದಲ್ಲಿ ದಾನೇಶ್ವರಿ ಸ್ವಂತ ತಾವೆ ನಿಂತು ಈ ಕೆಲಸ ಮಾಡುವುದರೊಂದಿಗೆ ತಮ್ಮ ಕೆಲಸಗಾರರಿಗೆ ಮಾದರಿಯಾಗಿದ್ದಾರೆ.
ಮನೆಗೆದ್ದು ಮಾರು ಗೆಲ್ಲು ಎನ್ನುವ ಉಕ್ತಿಯಂತೆ ಸದಾ ಸತಿಯ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತಿರುವ ಪತಿ ಸುರೇಶ್ ಮುದ್ದಾದ ಎರಡು ಗಂಡು ಮಕ್ಕಳ ಸಂತೃಪ್ತ ಕುಟುಂಬ ಇವರದ್ದು.
ಸಮಾಜ ಕಾರ್ಯದಲ್ಲಿಯು ಸದಾ ಮುಂದೆ ಇರುವ ಇವರು ಅನೇಕ ಸಂಘ ಸಂಸ್ಥೆ ಶಾಲಾ ಕಾಲೇಜುಗಳಿಗೆ ಕೊಡುಗೈ ದಾನಿಗಳಾಗಿದ್ದಾರೆ. ಓದಿನಲ್ಲಿ ಆಸಕ್ತಿ ಹೊಂದಿದ ಬಡವಿದ್ಯಾರ್ಥಿಗಳನ್ನು ಹುಡುಕಿ ಅವರಿಗೆ ಸಹಾಯಮಾಡುವ ಇವರ ಗುಣ ಶಿಕ್ಷಣಕ್ಕಾಗಿ ತಾವು ಪಟ್ಟ ಶ್ರಮದ ನೆನಪನ್ನು ಸದಾ ಹಸಿರಾಗಿರುತ್ತದೆ. ತಮ್ಮ ಕಂಪನಿಯಲ್ಲಿ ತಮ್ಮೊಂದಿಗೆ ತಮ್ಮ ಇಬ್ಬರು ತಂಗಿಯರಿಗೂ ಕೆಲಸ ಕೊಟ್ಟು ಅವರನ್ನು ಸ್ವಾವಲಂಬಿ ಗಳನ್ನಾಗಿ ಸಿದ್ದಾರೆ.
ಹೆಣ್ಣೆಂದರೆ ಮನೆಗೆ ಭಾರ ಎನ್ನುವವರ ಮುಂದೆ ಮನೆಯ ಬೆಳಕಾಗಿ ಬೆಳೆದು ನಿಂತು ಸಮಾಜದಲ್ಲಿ ಒಂದು ಉತ್ತಮ ಸ್ಥಾನದಲ್ಲಿರುವ ಇವರು ಅಪ್ಪಟ ದೇಶಪ್ರೇಮಿ.ನಾಡು ನುಡಿ ಬಗ್ಗೆ ಅಪಾರಗೌರವ ಹೊಂದಿರುವ ಇವರು ಬದುಕಿನ ಸಾಧನೆ ಇತರರಿಗೂ ಮಾದರಿ ಆದರೆ ಈ ಬರಹ ಸಾರ್ಥಕಗೊಂಡಂತೆ.
ಲೇಖಕರು: ಶ್ರೀಮತಿ ಆಶಾ ಎಸ್ ಯಮಕನಮರಡಿ ಬೆಳಗಾವಿ
9844826373