ಕನಸು ಗೊಂಬೆ
ಅದೇ ಕರಾಳ ರಾತ್ರಿ ದಟ್ಟವಾದ ಕಗ್ಗಾಡಿನ ಇರುಳ ಅಮಾವಾಸ್ಯೆ
ಕೈ ಮಾಡಿ ಕರೆದ ಹಸುಕಂದನ
ಕರಪಿಡಿದು ಕರೆದೊಯ್ದ ಆ ಹೆಜ್ಜೆ ಗುರುತುಗಳು ಅಳುಕಿಲ್ಲ ಅವಳ ಬಿತ್ತಿಯಲ್ಲಿ
ಭದ್ರ ವಾಗಿ ಅಚ್ಚೊತ್ತಿ ಹೋದ
ಸುಂದರ ಬಯಕೆಯ ಕಾಮನೆಗಳು
ಬಣ್ಣ ಬಣ್ಣದ ಕಾಮನ ಬಿಲ್ಲಿನ ರಂಗ ತುಂಬಿದೆ ಎದೆಯೊಳಗೆ
ಅದೆಷ್ಟೋ ಖಗ ಮೃಗಗಳ ಘರ್ಜನೆಯ ಕೂಗು ಕರ್ಣ ಕಠೋರ ನುಡಿ ಮಾತುಗಳು ಹೂತು ಹಾಕಿದಳು
ಅದೇ ದಟ್ಟವಾದ ಕಾಡಿನಲಿ ಒಂಟಿ ಧ್ವನಿಗೆ ಹೌಹಾರಿದ ಬತ್ತಳಿಕೆಯ ಬರಸಿಡಿಲು ಮೋಡಗಳ ಆಕ್ರಂದನ
ಸುರಿಸಿ ಹೋದ ಸುರಿ ಮಳೆಯಲಿ
ಮಿಂದ ಅವಳ ಮೈಯ ಸುಟ್ಟು ಸುಡುಗಾಡಿನ ಸುಡುಬಿಸಿಲಿನಲಿ ಬೆತ್ತಲೆಯಾಗಿ ಮಲಗಿ ಕೊಂಡಿದೆ
ಸತ್ತ ಅವಳ ಹೆಣವನು ಹಾಳೂರ ಹದ್ದು ನರಿ ತೋಳಗಳು ಕಿತ್ತು ಹರಿದು ತಿನ್ನುವ ಹಿಂಸೆಯ ಛಾಯಾ ಚಿತ್ರ ತೆಗೆದ ಆ ಕನಸು ನಿಜಕ್ಕೂ ಅಚ್ಚರಿ
ಇದು ! ನಿಜವಲ್ಲವೋ ಕನಸು
ಮೈ ಸ್ಪರ್ಶ ಮೃದು ಹಸ್ತಗಳ ಹಸುಗೂಸು ಕೈ ಮಾಡಿ ಕರೆದು ದಾರಿ ತೋರಿದ ಆ ದೃಶ್ಯ
ಅಂದಕನಿಕೆ ಅಂದಕನು ದಾರಿ ತೋರಿದಂತೆ
ಮೈ ನಡುಗಿ ದಾಟಿ ಬಂದ
ಆ ಸುಂದರ ಕಾಡುಗಳಲ್ಲಿ ಇನ್ನೂ ವಾಸಿಸಬೇಕಿನಿಸಿತ್ತು ಸೀತೆಯಂತೆ
ತೋರುವ ಆ ಮೃಗ ಪಕ್ಕಿಗಳ ಅಕ್ಕರೆಯಲಿ ಮೈ ಮರೆತು ತಂಗಾಳಿಯ ತಂಪಿನಲಿ
ಸುಂದರ ನಿಸರ್ಗ ಮಡಿಲಿನಲ್ಲಿ
ಹಕ್ಕಿ ಪಕ್ಕಿಗಳ ಮಧುರ ಗಾಣ
ನವಿಲು ಕೋಗಿಲೆಗಳ ನಾಟ್ಯ
ಮುಯೂರತೆ ಗಂಧರ್ವ ಕನ್ಯೆಯರ ನಾಚಿಸುವ ಆ ನರ್ತನ
ಇನ್ನೂ ಹಾಗೇ ಇವೆ
ಅವಳ ಎದೆಯೊಳಗೆ
ಮೂಡಿಸಿದ ಆ ಬ್ರಹ್ಮನ ಹಣೆಬರಹ
ಅಳಿಕಿಸಲು ಸಾಧ್ಯವೇ ?
ಎಂದು ಕೇಳುವ
ನೂರೆಂಟು ಪ್ರಶ್ನೆಗಳಿಗೆ
ಉತ್ತರಿಸುವ ಅವಳು ಈಗ ಮೌನವಾಗಿದ್ದಾಳೆ
ಹಕ್ಕಿಗಳಂತೆ ಹಾರಾಡುವ
ನವಿಲು ನಾಟ್ಯ ಮಯೂರ ನರ್ತನ ದಲಿ ತೇಲಾಡುವ ಗೊಂಬೆಯಾಗಿದ್ದಾಳೆ ….
–ಡಾ ಸಾವಿತ್ರಿ ಕಮಲಾಪೂರ