ಸ್ತ್ರೀ
ಹೆಣ್ಣು ಸಹನೆಯ ಪ್ರತಿರೂಪ
ಕರುಣೆ ಪ್ರೀತಿಯ ಸ್ವರೂಪ
ಮಮತೆ ಮಾತೆಯ ಜ್ಯೋತಿರೂಪ
ಸದಾ ಬೆಳಗುವ ನಂದಾದೀಪ.
ಅಂತರಂಗದ ಅರಿವಿನ ದೀಪ
ಮೃದು ಮಧುರ ಹೃದಯದ ದೀಪ
ವಿವೇಚನೆಯ ಒಲವ ದೀಪ
ಬಾಳು ಬೆಳಗುವ ನಂದಾದೀಪ.
ಸಂಸ್ಕಾರ ಸಂಸ್ಕೃತಿಯ ಮುನ್ನಡೆಸುವ ದೀಪ
ರೀತಿ ನೀತಿಗಳ ಪಾಲಿಸುವ ದೀಪ
ವೃತ ನೇಮಗಳ ಆಚರಿಸುವ ದೀಪ
ಸಮಾಜದಭಿವೃದ್ಧಿಗೆ ಶ್ರಮಿಸುವ ದೀಪ.
ಸುಖ ಸಮೃದ್ಧಿಯ ತುಂಬುವ ದೀಪ
ಶಾಂತಿ ಸಂಯಮವ ಸಾಧಿಸುವ ದೀಪ
ಸಂಗಾತಿಯಾಗಿ ಸಾವಿನವರೆಗು ಇರುವ ದೀಪ
ಕ್ಷಣ ಕ್ಷಣ ಉರಿದು ಬೆಳಕು ನೀಡುವಾ ಭವ್ಯ ದೀಪ.
–ಸವಿತಾ ಮಾಟೂರ. ಇಲಕಲ್ಲ