ಮುಪ್ಪಿಲ್ಲದ ಮುಗುಳ್ನಗೆ…

ಮುಪ್ಪಿಲ್ಲದ ಮುಗುಳ್ನಗೆ…

ಉಸಿರ ಉಸಿರಲಿ ನಿನ್ನದೆ ಹೆಸರು
ನೆನಪ ಮೆರವಣಿಗೆಯದು ಹಸಿರು
ಅರಿತು ಬೆರೆತ ನವನೀತದ ಮೊಸರು
ಕನಸಕಂಗಳಲಿ ನಿನ್ನದೇ ನಗುವಿನಲೆ

ದೂರದಲಿ ನೀನಿದ್ದರೂ ಇಲ್ಲ ಅಂತರ..
ಹುಚ್ಚುಪ್ರೀತಿಯದು ತೀರದ ದಾಹ
ಕಡಲ ಅಲೆಗಳಾಗಿವೆ ಮನದ ಆಸೆಗಳು
ಮರೆಯಲಾರೆ ತುಟಿಯಂಚಿನ ಕಿರು ನಗೆ

ನಿನ್ನ ಸನಿಹ ಬೇಕೆನಗೆ ನಿರಂತರ
ಬಯಕೆಗಳ ರಂಗೋಲಿಗೆ ರಂಗಾಗು
ಬಾ ಗೆಳೆಯನೆ ಸಹಿಸಲಾರೆ ಅಂತರ
ಜೊನ್ನಮಳೆ ಜೇನಹೊಳೆ ಮೋಹಕನಗೆ

ಕತ್ತಲೆಯ ಸರಿಸು ಹರಸು ಬಾ
ಬೆಳಕಾಗಿ ಹೃದಯ ಮೀಟು ಬಾ
ಪ್ರೇಮದ ಮಹಲಿನ ಅರಸನೆ ಬಾ
ಪ್ರೀತಿಗೆ ಮುಪ್ಪಿಲ್ಲ ಒಪ್ಪಿಗೆಯೇ ಎಲ್ಲ

ಮುದ್ದುಮಾತಿನ ಮೋಹಗಾರನೆ
ಗೆಜ್ಜೆಸದ್ದಿಗೆ ಮರುಳ ಮಾಯಗಾರನೆ
ಮನದ ರಿಂಗನಕೆ ಮೆಲ್ದನಿಯಾದವನೆ
ಎದೆಯ ತಲ್ಲಣಕೆ ತಂಗಾಳಿ ತಂದವನೆ

ಒಲುಮೆಸಿರಿಯೆ ಮುನಿಸು ಮರೆತು ಬಾ
ಬಾಳದಾರಿಯಲಿ ಮೆಲ್ಲನೆ ಒಲಿದು ಬಾ
ವಯಸ್ಸಾದರೇನು ಮನಸಾರೆ ಪ್ರೀತಿಸು ಬಾ
ಮುಪ್ಪಿಲ್ಲದ ಮುಗುಳ್ನಗೆಗೆ ಅದ್ಯಾರ ಹಂಗು

ಜಯಶ್ರೀ.ಭ.ಭಂಡಾರಿ.
ಬಾದಾಮಿ

Don`t copy text!