ಉದಕ ಬಾಯಾರಿ ಬಳಲುತ್ತಿದೆ

 

ಉದಕ ಬಾಯಾರಿ ಬಳಲುತ್ತಿದೆ

ಅರಗಿನ ಪುತ್ತಳಿಯನುರಿ ಕೊಂಡಡೇ , ಉದಕ ಬಾಯರಿ ಬಳಲುತ್ತಿದೆ .
[ಅಗೆಯಿಂ ಭೋ ಬಾವಿಯನಗೆಯಿಂ ಭೋ ]
ಬಾವಿಯನಗೆದಾತ ಸತ್ತ ,ಬಾವಿ ಬತ್ತಿತ್ತು .-ಇದು ಕಾರಣ ,
ಮೂರು ಲೋಕವು ಬರುಸೂರೆವೊಯಿತ್ತು ಗುಹೇಶ್ವರ -ಅಲ್ಲಮಪ್ರಭು -ವಚನ ೩೦ ಸ. ವ.ಸ೦೨ -ಪುಟ ೧೦-೧೧

ಅಲ್ಲಮ ಪ್ರಭುಗಳು ಕಲ್ಯಾಣದ ಮನುಕುಲದ ಜ್ಞಾನ ಪರ್ವತ -ಕಲ್ಯಾಣ ವೈಚಾರಿಕ ಕ್ರಾಂತಿಯಲ್ಲಿ ಅವರ ಕೊಡುಗೆ ಅಪಾರ .ಅವರು ಶರಣರು ಕಟ್ಟಿದ. ಪ್ರಥಮ ಸಂಸತ್ತಿನ ಅನುಭಾವ ಮಂಟಪಕ್ಕೆ ಅಧ್ಯಕ್ಷರಾಗಿದ್ದರು.

ಅರಗಿನ ಪುತ್ತಳಿಯನುರಿ ಕೊಂಡಡೇ

ಶರೀರವು ಒಂದು ಅರಗಿನ ಪುತ್ತಳಿ ,ಬಂಗಾರದ ಒಡವೆಗೆ ಅರಗನ್ನು ಕೂಡಿಸುವ ಹಾಗೆ ನಮ್ಮ ಶರೀರವು ಅರಗಿನ ಬೊಂಬೆಯಂತೆ ರಚಿತಗೊಂಡಿದೆ .ಇಂತಹ ಅರಗಿನ ಪುತ್ತಳಿಗೆ ಅರಿಷಡ್ವರ್ಗಗಳು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಬೆಂಕಿಯು
ಸ್ಪರ್ಶವಾದೊಡೆ ,ಅರಗಿನ ಶರೀರ ದಗದಗಿಸಿ ಉರಿಯುತ್ತದೆ .

ಉದಕ ಬಾಯಾರಿ ಬಳಲುತ್ತಿದೆ .

ಮನಸ್ಸು ತುಂಬಾ ಹಗುರವು ಸರಳವೂ ಆಗಿದೆ ,ಮನಸ್ಸನ್ನೇ ಉದಕ ಅಂತ ಕರೆದ ಜ್ಞಾನಿ ಪ್ರಭುದೇವರು -ಅದಕ್ಕೂ ನೀರಡಿಕೆಯಾಗಿದೆ, ಮನವೆಂಬ ಉದಕಕ್ಕೆ ನೀರಡಿಕೆಯಾಗಿ ಬಳಲಿದೆ ಬಳಲುತ್ತಿದೆ. ಎಂತಹ ಸುಂದರ ಪ್ರತಿಮೆಯನ್ನು ಅಧ್ಯಾತ್ಮಿಕ ಜಗತ್ತಿನಲ್ಲಿ ಅಲ್ಲಮಪ್ರಭು ಬಳಸಿದ್ದಾರೆ.ವಿಶ್ವದ ಯಾವುದೇ ತತ್ವಜ್ಞಾನಿ ಸಾಹಿತಿ ಕವಿ ಈ ಪ್ರತಿಮೆಗೆ ತೆಲೆ ತೋರದೆ ಇರರು.ಇಂತಹ ಅಪೂರ್ವ ಪದ ಬಳಕೆ ಘನ ಸಂಕೇತವನ್ನು ಪ್ರಭುಗಳು ಮಾತ್ರ ಬಳಸಬಲ್ಲರು.

[ಅಗೆಯಿಂ ಭೋ ಬಾವಿಯನಗೆಯಿಂ ಭೋ ]

ಸ್ಥೂಲ ಶರೀರಕ್ಕೆಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಬೆಂಕಿ ಬಿದ್ದಿದೆ,ಅದನ್ನು ನಂದಿಸಲು ಸೂಕ್ಷ್ಮ ಶರೀರ -ಬಾವಿಯನ್ನು ಅಗೆಯುವ ಪ್ರಯತ್ನದಲ್ಲಿದೆ.ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಸಾಧನಗಳಿಂದ ಪೂಜೆ ಧ್ಯಾನ ಧೂಪ ದೀಪ ಮಂತ್ರ ಪ್ರಾರ್ಥನೆ,ಹವನ ಹೋಮ ,ಯಜ್ಞಗಳ ಮೂಲಕ ಬಾವಿಯನ್ನ ಅಗೆದು ನೀರು ತೆಗೆದು ಹತ್ತಿದ ಬೆಂಕಿಗೆ ನೀರು ಹಾಕಿ ನಂದಿಸಿ ಸಮಾಧಾನ ಪಡಬೇಕೆಂಬ ಸೂಕ್ಷ್ಮ ಶರೀರ ಹಾತೊರೆಯುತ್ತದೆ.

ಬಾವಿಯನಗೆದಾತ ಸತ್ತ ,ಬಾವಿ ಬತ್ತಿತ್ತು –

ಬಾವಿಯನಗೆದಾತ ಸೂಕ್ಷ್ಮ ಶರೀರ ಸತ್ತು ಹೋಯಿತು ,ಮನುಷ್ಯನ ನೀರಿಕ್ಷೆಯ ಬಾವಿ ಬತ್ತಿತ್ತು .ಆಶೆ ಕನಸು ಸಮಾಧಾನ ಪಡುವ ಪರಿ ಹುಸಿಯಾಯಿತ್ತು.ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಂಚೆಂದ್ರಿಯಿಂದ ಅಗೆದ ಬಾವಿಯಲ್ಲಿ ನೀರು ಬರಲಿಲ್ಲ ಅಗೆದವ ಬದುಕಲಿಲ್ಲ .
ಪ್ರಾಪಂಚಿಕ ವ್ಯಸನಕ್ಕೆ ಕುದಿವವರ ಜೀವನ ಹೀಗಾಗುವದು.
ಇದು ಕಾರಣ ,
ಮೂರು ಲೋಕವು ಬರುಸೂರೆವೊಯಿತ್ತು ಗುಹೇಶ್ವರ-ಜೀವ ಚೈತನ್ಯವನ್ನು ಅರಿಯದೆ ಜಡ ಶರೀರಕ್ಕೆ,ಶರೀರದ ಅರಿಷಡ್ವರ್ಗಗಳು ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಕೆ ತಾಪಕ್ಕೆ ಬಳಲಿರುವವರು ಹಾಳಾಗಿ ಹೋಗುವವರು. ಮೂರು ಲೋಕವು ಒಂದು ದಿನ ಹಾಳಾಗಿ ಹೋಗುತ್ತವೆ ಅಂತ ನೀವೆದನೆ ಮಾಡಿ ಕೊಂಡಿದ್ದಾರೆ. ಇದು ಈ ವಚನದ ಸಾರಾಂಶ .


ಡಾ ಶಶಿಕಾಂತ .ಪಟ್ಟಣ -ರಾಮದುರ್ಗ

One thought on “ಉದಕ ಬಾಯಾರಿ ಬಳಲುತ್ತಿದೆ

Comments are closed.

Don`t copy text!