ಜನಪದ ಕಲೆ ಮತ್ತು ಸಂಸ್ಕೃತಿ ಮರೆತರೆ ಮಾನವ ಜನಾಂಗ ಮೂಲೆಗುಂಪಾದಂತೆ-ಡಾ.ಎಸ್ ಬಾಲಾಜಿ

ಜನಪದ ಕಲೆ ಮತ್ತು ಸಂಸ್ಕೃತಿ ಮರೆತರೆ ಮಾನವ ಜನಾಂಗ ಮೂಲೆಗುಂಪಾದಂತೆ-ಡಾ.ಎಸ್ ಬಾಲಾಜಿ

e-ಸುದ್ದಿ ಇಳಕಲ್

ಜನಪದ ಸಂಸ್ಕೃತಿ ಮರೆತರೆ ಮಾನವ ಜನಾಂಗ ಮೂಲೆಗುಂಪಾದಂತೆ ಜಾನಪದ ಸೊಗಡು ಮಹಿಳೆಯರಿಂದ ಉಳಿಯಲಿದೆ ಎಂದು ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಎಸ್.ಬಾಲಾಜಿ ಹೇಳಿದರು.
ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ ಬಾಗಲಕೋಟೆ ಮತ್ತು ತಾಲ್ಲೂಕು ಘಟಕ ಇಳಕಲ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಜಾನಪದ ಸಂಭ್ರಮ ಮತ್ತು ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮವನ್ನು
ಜ್ಯೋತಿ ಬೆಳಗಿಸಿ ಡೋಲಾಕ್ ಬಾರಿಸುವ ಮೂಲಕ ಉದ್ಘಾಟಿಸಿದರು.
ಸರಕಾರದ ಅನುದಾನವಿಲ್ಲದೆ ನಾಡಿನಾಧ್ಯಾಂತ ಸಾವಿರಾರು ಕಾರ್ಯಕ್ರಮಗಳು ಯಶಸ್ವಿಯಾಗಿವೆ ವಿಶೇಷವಾಗಿ ಮಹಿಳೆಯರು ಆಸಕ್ತಿಯಂದ ಜನಪದ ಸಾಹಿತ್ಯವನ್ನು ಉಳಿಸುವ ಕಾರ್ಯಕ್ಕೆ ಮುಂದಾಗಿದ್ದು ಉತ್ತಮ ಬೆಳವಣಿಗೆ ಎಂದು ಹೇಳಿದರು.


ಸಾನಿಧ್ಯವಹಿಸಿದ್ದ ಪರಮ ಪೂಜ್ಯಶ್ರೀಗುರುಮಹಾಂತ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತ ವಚನ ಸಾಹಿತ್ಯವನ್ನು ಬಿತ್ತರಿಸಿದವರು ಜನಪದಿಯರು, ಸ್ವಸ್ಥ ಸಮಾಜದ ಕಲ್ಪನೆ ನೀಡಿದವರು ಜನಪದರು ಎಂದರು.
ಪ್ರಾಸ್ತಾವಿವಾಗಿ ಕಜಾಪ ತಾಲೂಕಾಧ್ಯಕ್ಷ ಚನ್ನಬಸಪ್ಪ ಲೆಕ್ಕಿಹಾಳ ಮಾತನಾಡಿ ಜನಪದಕ್ಕೆ ವಿಶೇಷ ಆಕರ್ಷಕ ಶಕ್ತಿಯಿದೆ ಆಧುನಿಕ ಭರಾಟೆಯ ಭ್ರಮೆಯಿಂದ ಹೊರ ಬಂದು ನೆಲ ಮೂಲ ಸಂಸ್ಕೃತಿಯನ್ನು ಮರುಸ್ಥಾಪಿಸುವ ಅವಶ್ಯಕತೆಯಿದೆ ಎಂದರು . ಎಸ್.ವ್ಹಿ.ಎಂ.ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಪಕಿ ಅನ್ನಪೂರ್ಣ ಮಠ ಜನಪದದಲ್ಲಿ ಮಹಿಳೆ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಎಸ್.ಆರ್. ಕಂಠಿ ಬಿ.ಇಡಿ. ಕಾಲೇಜ ಪ್ರಾಚಾರ್ಯರಾದ ರಾಖಿ ಪಡ್ನೇಕರ್, ಹಂಪಮ್ಮ ಮರಟದ, ವಿಜಯಲಕ್ಷ್ಮಿ ಹರಿಹರ, ದೇವಿಕಮ್ಮ ಕೂಕನೂರ, ರಾಮನಗರ ಕಜಾಪ ಜಿಲ್ಲಾಧ್ಯಕ್ಷ ಕೆ.ಸಿ.ಕಾಂತಪ್ಪ, ವಿಜಯ್ ಕೊಪ್ಪ ವಕೀಲರು, ಆರ್.ಬಿ.ನಬಿವಾಲೆ ಮತ್ತಿತರರು ಭಾಗವಹಿಸಿದ್ದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ.ಸಾವಕಾರ ಮಹಿಳೆಯರು ಹಬ್ಬಗಳ ವೈಶಿಷ್ಯ, ಉಡುಗೆ-ತೊಡಿಗೆ, ಆಹಾರ ಕುರಿತು ಇಂದಿನ ಯುವ ಪಿಳಿಗೆಗೆ ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ. ವಿ.ಕೆ.ವಂಶಾಕೃತಮಠ ಹಾಗೂ ನೀಲಕಂಠ ಕಾಳಗಿ, ಈರಣ್ಣ ಕುಂದರಗಿಮಠ ಇವರನ್ನು ಸನ್ಮಾನಿಸಲಾಯಿತು. ಎಸ್.ವ್ಹಿ.ಎಂ. ಕಲೆ ಹಾಗೂ ವಾಣಿಜ್ಯ ಮಹಿಳಾ ಪದವಿ ಕಾಲೇಜ ವಿದ್ಯಾರ್ಥಿನಿ ಸೌಮ್ಯಾ ಕೊಡಗಲಿ ಪ್ರದರ್ಶಿಸಿದ ಜಾನಪದ ನೃತ್ಯ ವಿಶೇಷ ಗಮನ ಸೆಳೆಯಿತು.
ಮಹಿಳಾ ಘಟಕದ ಆದ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸವಿತಾ ಮಾಟೂರ ಮಾತನಾಡಿ ಜನಪದ ಸಾಹಿತ್ಯ, ಅವರ ಬದಕು, ಬಾಗಲಕೋಟೆ ಜಿಲ್ಲೆಯ ಜನಪದ ಸಾಹಿತ್ಯ ಜನಪದ ಕಲಾವಿದರ ಕುರಿತು ಮಾತನಾಡಿ ಇಲಕಲ್ಲ ತಾಲ್ಲೂಕಿನಲ್ಲಿ ಕನ್ನಡ ಜನಪದ ಸಾಹಿತ್ಯ ಪರಿಷತ್ತು ಸಧೃಡಗೊಳಿಸುವುದಾಗಿ ತಿಳಿಸಿದರು. ಕಾರ್ಯದರ್ಶಿಯಾಗಿ ಸುಜಾತಾ ಅಂಗಡಿ, ಖಜಾಂಚಿಯಾಗಿ ಮಂಜುಳಾ ಗರಡಿಮನಿ, ವೈಶಾಲಿ ಘಂಟಿ, ದೇವಿಕಾ ಮಳಗೌಡರ. ಅಕ್ಕಮ್ಮ ದೇವರಡ್ಡಿ, ಸುಶೀಲಾ ಹೂಗಾರ, ವಿಶಾಲಾಕ್ಷಿ ಶೆಟ್ಟರ, ಮಂಜುಳಾ ಅಂಗಡಿ, ಸವಿತಾ ಹಿರೇಮಠ, ಅನುಪಮಾ ಗೊಂಗಡಶೆಟ್ಟಿ, ನೀಲಮ್ಮ ಬಾದಿಮನಾಳ, ಶಂಕ್ರಮ್ಮ ಸಗರದ, ಸುಮಾ ಶೀಲವಂತರ, ಶ್ರೀದೇವಿ ಪಾಟೀಲ, ಶರಣಮ್ಮ ತಳವಾರ, ಡಾ.ಪ್ರತಿಭಾ ಕೊಳ್ಳಿ, ವಿದ್ಯಾ ಬಸ್ಮೆ, ಬಸಮ್ಮ ಕರ್ಲಿ, ಕಸ್ತೂರಿಬಾಯಿ ಮೇರೆವಾಡಿ, ರೇಖಾ ಇಂದರಗಿ, ಮತ್ತಿತರರು ಪದಾಧಿಕಾರಿಗಳಾಗಿ ಪದಗ್ರಹಣ ಮಾಡಿದರು ಅಕ್ಕನ ಬಳಗದ ಸುವರ್ಣ ಗೊಂಗಡಶೆಟ್ಟಿ ಸಂಗಡಿಗರು ಪ್ರಾರ್ಥಿಸಿದರು.

ಪರಿಷತ್ ಗೀತೆಯನ್ನು ಶಿಲ್ಪಾ ಹಿರೇಮಠ ಹಾಡಿದರು, ಸುನಿತಾ ಶೆಟ್ಟರ ಸ್ವಾಗತಿಸಿದರು, ಸುವರ್ಣ ಕಲ್ಯಾಣಶೆಟ್ಟಿ (ಅಲೇಗಾವಿ) ನಿರೂಪಿಸಿದರು. ಶ್ರವಣಾ ಸಿಕ್ಕೇರಿಮಠ ವಂದಿಸಿದರು.

Don`t copy text!