ಆತ್ಮೀಯ ಸುಜಾತಾ ಅಕ್ಕ..
ಬದುಕು ನೀಡಿದ
ಸಿಹಿ ಕಹಿ ಉಡುಗೊರೆಗಳ
ಮೌನದಲಿ ಸ್ವೀಕರಿಸಿ…
ಬಸವನಿತ್ತ ಪ್ರಸಾದವ
ಭಕುತಿಯಲಿ ಹಣೆಗೊತ್ತಿ..
ಮುಳ್ಳುಗಳ ಮೆಟ್ಟುತಲೇ
ದಾರಿ ಸವೆಸಿದವಳು…
ಹೂವ ಹಂದರವ ಕಟ್ಟಿ
ಮಾವ ತೋರಣವ ತೂಗಿ
ಬೇವ ಕಹಿಯನು ನುಂಗಿ
ಶರಣ ನಡೆನುಡಿಯ ಅಮೃತದ
ತಾವಿನಲಿ ಬಾಳುತಿಹಳು …
ಹೊತ್ತು ಹೆತ್ತ ತವರಸಿರಿಗೆ
ಹೂವ ತಂದ ಮುದ್ದುಮಗಳು…
ಬಿಕ್ಕುಗಳ ನುಂಗುತ್ತ
ಸಿಕ್ಕುಗಳ ಬಿಡಿಸುತ
ವಚನ ದಿಕ್ಕು ತೋರಿದೆಡೆ
ಸಾಗುತಿಹಳು….
ಸ್ನೇಹ ಪ್ರೀತಿಯ ಉಡಿಗೆ
ಬೆಳಕ ತುಂಬಿದವಳು…
ಮಮತೆ ಮಡಿಲಿನ ಗುಡಿಗೆ
ಶಿಕ್ಷಣದ ಮುಡಿ ಕಟ್ಟಿ
ಮುದ್ದು ಮಕ್ಕಳ ನಡುವೆ
ನಗು ನಗುತ ಬಾಳುತಿಹಳು….
ಅಕ್ಕ ಸುಜಾತಾ..
ಹುಟ್ಟುಹಬ್ಬದ ದಿನವಿಂದು…
ನಗುವ ಪಾರಿಜಾತದ ಹೂವರಳು
ಸುರಿದಿರಲಿ ಅನುಗಾಲ…
ಮಲ್ಲಿಗೆಯ ಮಧುರ ಮನ
ನಲಿದಿರಲಿ ಚಿರಕಾಲ…..
–ಇಂದಿರಾ ಮೋಟೆಬೆನ್ನೂರ ಬೆಳಗಾವಿ