ಅಲ್ಲ ನಮ್ಮದು ಮಠದ ಧರ್ಮ.
ಅಲ್ಲ ನಮ್ಮದು ಮಠದ ಧರ್ಮ
ಬೇಡ ನಮಗೆ ಕಾವಿ ಕರ್ಮ .
ಸಹಜ ಬದುಕಿನ ನೀತಿ ಸ೦ಹಿತೆ
ಶರಣ ವಚನ ಶಾಸ್ತ್ರ ಸಾರ.
ಇಲ್ಲ ಇಲ್ಲಿ ಗುಡಿ ಗೋಪುರ .
ಪಾದ ಪೂಜೆ ಲಕ್ಷ ದೀಪ .
ಅಕ್ಕ ಮಾತೆ ಸ್ವಾಮಿ ಶರಣರು
ಬಸವ ಉಧ್ಯಮದ ಒಡೆಯರು.
ಬೇಡ ಇವರಿಗೆ ಭಕ್ತ ನಮನ
ಹಣದ ತಿಜೋರಿ ಝಣ ಝಣ.
ಮತ್ತೆ ವೇದ ಪುರಾಣ ತಂತ್ರ .
ಜಾತ್ರೆ ಉತ್ಸವ ಮರುಳು ಮಂತ್ರ.
ವ್ಯಕ್ತಿಯಾರು ಗುರುಗಳಲ್ಲ.
ಲಿಂಗ ಶುದ್ಧ ಆಚಾರವು,
ಬಸವರಸದ ಅನುಭಾವ ,
ನಿತ್ಯ ಜಂಗಮ ಪಾವನ .
ಕಪಟ ವೇಷದಾರಿಗಳಿಗೆ
ಶರಣವೆಂದರೆ ಪಾಪವು.
ದುಡಿದು ತಿನ್ನುವ ಕಾಯಕ
ಹಂಚಿ ತಿಂದರೆ ದಾಸೋಹವು.
ಜಗದಿ ಮೆರೆವ ಬಸವ ತತ್ವವ
ಮರೆತು ಕುಳಿತ ಕುರುಡರು.
ಅಪ್ಪ ಬಸವನೆ ತಂದೆ ತಾಯಿ.
ಬಸವ ಯೋಗವು ಶ್ರೇಷ್ಠವು .
–ಡಾ .ಶಶಿಕಾಂತ,ಪಟ್ಟಣ.ಪೂನಾ ರಾಮದುರ್ಗ