ಮುಗುಳು ನಗೆಗೆ ಮುಪ್ಪಿಲ್ಲ

ಮುಗುಳು ನಗೆಗೆ ಮುಪ್ಪಿಲ್ಲ

ಭಾರವಾದ ಮನದಲಿ
ನೆನಪುಗಳ
ಕಾಟನೀಗಿಸಲು
ಹರಿಸಿಬಿಡು ಹಾಗೆಯೇ
ಮುಗುಳುನಗೆಯೊಂದನು
ಕನಸುಗಳ ಮೌನದಲಿ
ನೆನಪುಗಳು
ಉಕ್ಕಿಹರಿಯಲು
ಹರಿಸಿಬಿಡು ಹಾಗೆಯೇ
ಮುಗುಳುನಗೆಯೊಂದನು
ಕಂಬನಿಯ ಮುಸುಕಲಿ
ನೆನಪುಗಳು
ಬಿಕ್ಕಳಿಸಿ ಬರಲು
ಹರಿಸಿಬಿಡು ಹಾಗೆಯೇ
ಮುಗುಳುನಗೆಯೊಂದನು
ಸ್ಮೃತಿ ಪಟಲದಲಿ
ನೆನಪುಗಳ
ಭಾರವಿಳಿಸಲು
ಹರಿಸಿಬಿಡು ಹಾಗೆಯೇ
ಮುಗುಳುನಗೆಯೊಂದನು
ನಗುವಿನ ನಲಿವಿನಲಿ ನೆನಪುಗಳು
ಹಾರಾಡುವಾಗ
ಹರಿಸಿಬಿಡು ಹಾಗೆಯೇ
ಮುಗುಳುನಗೆಯೊಂದನು
ಮುಗುಳು ನಗೆಯಲಿ
ನೆನಪುಗಳ
ಸರಮಾಲೆ ಬಿಚ್ಚುತ
ಪ್ರವಹಿಸಲು
ಮುಪ್ಪಿಲ್ಲ ಮುಗುಳುನಗೆಗೆ
ಮನ ಗೆಲ್ಲಲು
ಬೇಕು
ಜಗ ಗೆಲ್ಲಲೂ
ಸಾಕು ಮುಗುಳು
ನಗೆಯೊಂದು


-ಡಾ ಗೀತಾ ಡಿಗ್ಗೆ.
ಕನ್ನಡ ವಿಭಾಗ
ಸೋಲಾಪುರ ವಿಶ್ವ ವಿದ್ಯಾಲಯ
ಸೋಲಾಪುರ

Don`t copy text!