ನಿಸರ್ಗದ ಅತ್ಯಮೂಲ್ಯ ಸಂಪತ್ತು ನೀರು

ನಿಸರ್ಗದ ಅತ್ಯಮೂಲ್ಯ ಸಂಪತ್ತು ನೀರು

ಪಂಚಭೂತಗಳಲ್ಲಿ ಒಂದಾದ ನೀರು ನಿಸರ್ಗದ ಅತ್ಯಮೂಲ್ಯ ಸಂಪತ್ತು. ಈ ಭೂಮಿಯ ಮೇಲೆ ವಾಸಿಸುವ ಸರ್ವ ಜೀವಿಗಳ ಆದಿಯಾಗಿ ಮಾನವನ ಬದುಕಿನ ಉದ್ದಕ್ಕೂ ನೀರಿನ ಬಳಕೆಯ ಮಹತ್ವ ಬಹು ಮುಖ್ಯವಾದದು. ಪ್ರಕೃತಿ ದತ್ತವಾಗಿ ದೊರಕುವ ನೀರನ್ನು ನಮ್ಮ ಮುಂದಿನ ಪೀಳಿಗೆಯ ಬಳಕೆಗಾಗಿ ಮಿತವಾಗಿ ಬಳಸುವುದು ಇಂದು ಅತ್ಯಗತ್ಯವಾಗಿದೆ.ಕಾರಣ ಭೂಮಿಯ ಮೇಲೆ ಕೂಡಿಯಲು ಯೋಗ್ಯವಾಗಿರುವ ಸಿಹಿ ನೀರಿನ ಪ್ರಮಾಣ ಕೇವಲ 3% ಕಡಿಮೆ ಪ್ರಮಾಣದಲ್ಲಿ ಇರುವುದು. ಭೂ ಮಂಡಲದಲ್ಲಿ ಶೇ 97% ಕುಡಿಯಲು ಹಾಗೂ ಬಳಕೆಗೆ ಯೋಗ್ಯವಲ್ಲದ ಉಪ್ಪ ನೀರಿನಿಂದ ಆವರಿಸಿದೆ.ಮಾನವನು ದುರಾಸೆಯಿಂದ ದಿನದಿಂದ ದಿನಕ್ಕೆ ಗೀಡ ಮರಗಳನ್ನು ನಾಶ ಮಾಡುತ್ತಿರುವದರಿಂದ ಅವುಗಳ ಪ್ರಮಾಣ ಕ್ಷಿಣಿಸುತ್ತಿರುವದರಿಂದ ತಾಪಮಾನ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ.

ಇತ್ತಿಚಿನ ವಿಶ್ವ ಸಂಸ್ಥೆಯ ವರದಿಯ ಪ್ರಕಾರ ಮುಂದಿನ ದಿನಗಳಲ್ಲಿ ನೀರಿನ ಆಹಾಕಾರ ಎಲ್ಲೆಡೆ ವ್ಯಾಪಿಸಿಬಹುದಾಗಿದೆ. ಭೂಮಿಯ ಉಷ್ಣತೆ ತಿವ್ರವಾಗಿ ಏರಿಕೆಯಾಗುತ್ತಲೇ ಇದೆ. ಇದಕ್ಕೆಲ ಪರಿಸರ ನಾಶವೇ ಮೂಲ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.

ಆದ ಕಾರಣ ನಾವುಗಳೆಲ್ಲ ಇಂದು ವಿಶ್ವ ಜಲ ದಿನದಂದು ಒಂದು ಪ್ರತಿಜ್ಞೆ ಮಾಡಿ ನೀರಿನ ಪರಿಮಿತ ಬಳಕೆಗೆ ಮುಂದಾಗೋಣ. ನಮ್ಮಿಂದಾದ ಪರಿಸರ ಸಂರಕ್ಷಣೆ ಪರಿಸರ ಬೆಳವಣಿಗೆಗೆ ಸಹಕರಿಸುವ ಕಾರ್ಯ ಮಾಡೋಣ ಎಂಬುದು ನನ್ನ ಆಶಯ.

ವೀರೇಶ ಅಂಗಡಿ ಗೌಡುರು

Don`t copy text!