ಆಚಾರ

ಆಚಾರ

ಮೊದಲು ಮಾತಿನಲ್ಲಿರಲಿ
ಆಡುವ ನುಡಿಯ ನಲ್ಮೆಯಲ್ಲಿರಲಿ
ನೋಡುವ ನೋಟದಲ್ಲಿ ನಯವಾಗಿ
ನಾಜೂಕಾಗಿರಲಿ..ಆಚಾರ.
.
ಧರಿಸುವ ವಸ್ತ್ರಸಂಹಿತೆಯಲ್ಲಿರಲಿ
ನಡೆಯುವ ನಡಿಗೆಯ ಹೆಜ್ಜೆಯಲಿರಲಿ. .
ನಗುವ ನಗೆಯ ಮಂದಹಾಸದಲಿರಲಿ
ಭಾಷೆಯ ಸೊಗಸಿನಲಿರಲಿ‌ ಆಚಾರ

ವಿನಯ ವಿಧೆಯತೆ ವಿದ್ಯೆಯಲಿರಲಿ
,ಹಿರಿಯರ ಜೊತೆಯ ವರ್ತನೆಯಲಿರಲಿ…
ಜನನಿ,ಜನ್ನಭೂಮಿಯ ಕಾಪಿಡುವಲ್ಲಿರಲಿ…
ಪೃಕೃತಿಯ ಸ್ವಚ್ಛತೆಯಲ್ಲಿರಲಿ.ಆಚಾರ

ಮನ ಮನಸ್ಸು ಹೃದಯಗಳ ಬೆಸುಗೆಯಲ್ಲಿರಲಿ…
ಪ್ರಾಣಿ ಪಶುಪಕ್ಷಿಗಳ ಸಲಹುವ ರಕ್ಷಿಸುವಲ್ಲಿರಲಿ….
ಸರ್ವೇ ಜನಃ ಸುಖಿನೋಭವಂತು
ನುಡಿ ನುಡಿಯಾಗದೇ ನಡೆಯಾಗುವಲ್ಲಿರಲಿ …

ಹೇ ಮಾನವಾ …..
ಇವುಗಳಲ್ಲಿ ಸದಾ ತುಂಬಿರಲಿ….
ಆಚಾರ…..
ಕಾಡು ಕಡಿಯದೆ.ನಾಡು ಉಳಿಸುವಲ್ಲಿರಲಿ
ಆಚಾರ..
ಆಡೋದೊಂದು. ಮಾಡೋದು ಒಂದು
ಬೇಡ ಮನುಜ
ಆಚಾರವೇ ಸ್ವರ್ಗ ಅನಾಚರವೇ
ನರಕ ನರನೇ ಮರೆಯದಿರು ನೀ….

ಜಯಶ್ರೀ.ಭ.ಭಂಡಾರಿ

ಬಾದಾಮಿ

Don`t copy text!