ಬಣ್ಣದೋಕುಳಿ

ಬಣ್ಣದೋಕುಳಿ

ಕಣ್ಣ ತುಂಬ ಕನಸು ಮನದ ತುಂಬ ಸೊಗಸು
ಕನಸಿಗೊಂದು ಬಣ್ಣ ನೋಡಲೆಷ್ಟು ಚೆನ್ನ
ಕನಸು ನನಸಾದಾಗ ಜಗವೆಲ್ಲ ಬಣ್ಣ
ಇಲ್ಲದಿರೆ ಬರಿಯ ಬಿಳಿಯ ಸುಣ್ಣ.

ಖುಷಿಯ ಹೊನಲು ತುಂಬಿರಲು
ಮನದಿ ರಂಗೋಲಿಯ ಚಿತ್ತಾರವು
ರಂಗುರಂಗಲಿ ಮಿಂದೆಳಲು
ಭಾವ ತುಂಬಿದ ಝೇಂಕಾರವು.

ಭಾವ ಬಂಧ ಇರಲಿ ಚೆಂದ
ಕಾಮನೆಗಳು ಸಹಜವು
ಮನಸಿಜನ ರತಿಯಾಗಲು
ಮನವು ಪೂರ್ಣ ಅಂದವು.

ಏನೆ ಬರಲಿ ರಂಗನೆರಚಿ
ನೋವನೆಲ್ಲ ಮರೆಯುವಾ
ಪ್ರೀತಿಯ ಸಂಕೋಲೆಯಲ್ಲಿ
ಹರುಷದೋಕುಳಿಯಾಡುವಾ.

ಸವಿತಾ ಮಾಟೂರ ಇಲಕಲ್ಲ

Don`t copy text!