ರೈತ ನಿರದಿದ್ದರೆ ಹೇಗೆ ?

ರೈತ ನಿರದಿದ್ದರೆ ಹೇಗೆ ?

ಮೂವತ್ತು ನಾಲ್ವತ್ತು ವರ್ಷಗಳ ಹಿಂದೆ ಹಳ್ಳಿಗಳು ಮತ್ತು ಚಿಕ್ಕ ನಗರಗಳು ಊರ ಹೊರಗೆ ತೋಟಪಟ್ಟಿಗಳನ್ನು ಹೊಂದಿ ನಳನಳಿಸುತ್ತಿದ್ದವು. ಊರಿನ ಸಿರಿವಂತರು , ಸ್ಥಿತಿವಂತರು ತೋಟಗಳನ್ನು ಬೆಳೆಸಿ ಉತ್ತಮ ಇಳುವರಿಗಳನ್ನು ಪಡೆದು ಸಾಕಷ್ಟು ದಾನ ಧರ್ಮ ಮಾಡುವ ಸುಂದರ ನೋಟ ನನ್ನ ಕಣ್ಣ ಮುಂದೆ ಈಗಲೂ ಇದೆ. ಸೀತಿನಿ(ಸಿಹಿತೆನೆ) , ಸುಲಗಾಯಿ, ಗೆಣಸು ಇನ್ನಿತರ ವಸ್ತುಗಳನ್ನು ಊರಿನ ಜನರನ್ನು ಕೂಡಿಸಿ ಹಂಚಿ ತಿನ್ನುವದು ನನಗೆ ಈಗಲೂ ನೆನಪಿನಲ್ಲಿ ಬರುತ್ತದೆ. ಸ್ಥಿತಿವಂತರು ದಾನ ಧರ್ಮ ಮಾಡುವದರ ಜತೆಗೆ ಉದಾರತೆಯನ್ನು ಒಗ್ಗಟ್ಟನ್ನು ಬೆಳೆಸಿಕೊಂಡು ಬಂದಿದ್ದರು.

ಊರ ಮುಂದಿನ ಐದು ಆರು ಕಿಲೋಮೀಟರಗಳು ಅಂತರದಲ್ಲಿ ದೊಡ್ಡ ದೊಡ್ಡ ತೋಟ ಸಣ್ಣ ತೋಟಗಳು ತುಂಬಾ ಹಸಿರಿನಿಂದ ಕಂಗೊಳಿಸಿ ಎಷ್ಟೋ ಬಡಬಗ್ಗರಿಗೆ , ಕೂಲಿಕಾರರಿಗೆ ಆಶ್ರಯದ ತಾಣಗಳಾಗಿದ್ದವು. ಜನರು ಮೈಚಳಿ ಬಿಟ್ಟು ಮನ:ಪೂರ್ವಕವಾಗಿ ದುಡಿಯುತ್ತಿದ್ದರು.
ಆದರೆ ಈಗ ಆ ಸಂಭ್ರಮ ಪೂರ್ತಿ ಕಾಣಸಿಗದು. ಅಲ್ಲೊಂದು ಇಲ್ಲೊಂದು ಅಷ್ಟೇ ಕಾಣುತ್ತವೆ. ಇದಕ್ಕೆ ಮಾನವನ ಬದಲಾವಣೆಯೇ ಪ್ರಮುಖವಾಗಿದೆ. ಉತ್ತಮವಾಗಿ ಕಳೆದ ಮಧುರ ಕ್ಷಣಗಳನ್ನು ಮರೆತು ಹೆಚ್ಚಿನ ಲಾಭದಾಸೆಗೆ ಮನುಷ್ಯನು ಸರಿಯುತ್ತಿದ್ದಾನೆ. ಇದು ತಪ್ಪು ಅಲ್ಲ. ಒಪ್ಪೂ ಅಲ್ಲ. ಈಗಿನ ಜೀವನವೇ ಹಾಗಿದೆ.

 

 


ಮನುಷ್ಯನು ಲಾಭದ ದೃಷ್ಟಿಯಿಂದ ಉಳಿದ ಅನುಕೂಲತೆಗಳನ್ನು ನೋಡದೇ ಕಟ್ಟಡಗಳ ಸಲುವಾಗಿ ತನ್ನ ಭೂಮಿಯನ್ನು ಮಾರ್ಪಾಟು ಮಾಡುತ್ತಿದ್ದಾನೆ. ಊರಿನ ಚಿಕ್ಕ ಚಿಕ್ಕ ನಗರಗಳ ಸುತ್ತಮುತ್ತಲಿನ ಭೂಮಿಗಳು ಫಲವತ್ತಾದ ಹಾಗೂ ಫಲವತ್ತಾಗಿರದ ಭೂಮಿಯನ್ನು ಕಟ್ಟಡಗಳ ಸಲುವಾಗಿ ಉಪಯೋಗಿಸುತ್ತಿದ್ದಾನೆ. ಇದರಿಂದ ಊರಮುಂದಿನ ಭೂಮಿಗಳಲ್ಲಿ ಕಟ್ಟಡಗಳೇ ಬೆಳೆಯುತ್ತಿವೆ. ಅಷ್ಟೇ ಏಕೆ ಹಳ್ಳ ಕೊಳ್ಳಗಳು ಸಹಿತ ಹೊಸ ಹೊಸ ಕಟ್ಟಡಗಳಿಂದ ತುಂಬಿ ಹೋಗಿವೆ. ಲಾಭದ ಆಸೆ ನಾನು ಬೇಡವೆನ್ನುವಂತಿಲ್ಲ. ಹೀಗೆಯೇ ಮುಂದುವರೆದರೆ ಒಕ್ಕಲುತನದ ಗತಿಯೇನು? ಬೆಳೆಗಳನ್ನು ಬೆಳೆದು ಸಮಾಜಕ್ಕೆ ನೀಡುವದು ಹೇಗೆ? ಒಕ್ಕಲುತನದ ಉತ್ಪನ್ನ ಇಲ್ಲದಿದ್ದರೆ ನಾವು ತಿನ್ನವದು ಏನನ್ನು? ಇದು ಪ್ರತಿಯೊಬ್ಬರು ವಿಚಾರ ಮಾಡುವಂತಹ ವಿಷಯ.

ಭೂಮಿಗಳು ಕಟ್ಟಡಗಳ ಸಲುವಾಗಿ ಮಾರ್ಪಾಟು ಮಾಡುವದು ನಿರಂತರವಾಗಿ ನಡೆದಿದೆ. ಇದರಿಂದ ಒಕ್ಕಲುತನದ ಆದಾಯ ಕುಂಠಿತಗೊಂಡಿದೆ. ಬೆಳೆಗಳೇ ಇಲ್ಲದೇ ಇರುವಾಗ ಮನುಷ್ಯ ಜೀವಿಸುವದು ಹೇಗೆ? ತಿನ್ನುವದು ಏನನ್ನು? ಇದರ ಪರಿಣಾಮ ಬೆಲೆಯೇರಿಕೆ. ಒಕ್ಕಲುತನದ ಆದಾಯಕ್ಕೆ ಹಿನ್ನಡೆ.
ಬೆಲೆಯೇರಿಕೆಗೆ ಕಡಿವಾಣ ಇಲ್ಲವೇ ಇಲ್ಲ. ಅದನ್ನು ತಡೆಯುವವರು ಯಾರೂ ಇಲ್ಲ. ಅದರ ಓಟ ತುಂಬಾ ವೇಗದಲ್ಲಿದೆ. ಇದೇ ರೀತಿ ಮುಂದುವರೆದರೆ ಸಮಾಜ ಘೋರ ಪರಿಣಾಮ ಎದುರಿಸಬೇಕಾದೀತು.
ಡಿಮಾಂಡ , ಪ್ರೊಡಕ್ಷನ್ ಮತ್ತು ಯುಟಿಲೈಜೇಶನ್ದ ಪರಿಣಾಮ ಬಲು ಕೆಟ್ಟದು. ಹೊಂದಾಣಿಕೆಗಳು ಇಲ್ಲದಿದ್ದರೆ ತುಂಬಾ ಅಪಾಯಕಾರಿ ಪರಿಣಾಮವನ್ನು ಎದುರಿಸಬೇಕಾದೀತು. ಆರ್ಥಿಕ ತಜ್ಞರು  ಸರಕಾರ ಇವೆರಡರ ಸಮಾಗಮ ಅತೀ ಅವಶ್ಯ. ಸರಕಾರ ಈ ನಿಟ್ಟಿನಲ್ಲಿ ವಿಚಾರ ಮಾಡಿ ಕ್ರಮ ತೆಗೆದುಕೊಂಡರೆ ಮುಂದಿನ ದಿನಗಳು ಸರಿಹೋಗಬಹುದು. ಇಲ್ಲವಾದರೆ?

 

 

 

 

 

 

 

 

 

 

-ಕೃಷ್ಣ ಬೀಡಕರ.
ವಿಜಯಪುರ.
ಮೋ. 972087473

Don`t copy text!