ಕೊನೆ ಭಾಗದ ರೈತರಿಗೆ ನೀರು ಕೊಡಲು ವಿಫಲರಾದರೆ ಅಧಿಕಾರಿಗಳೇ ಹೊಣೆ-ಎನ್.ಎಸ್.ಭೋಸರಾಜು

ಕೊನೆ ಭಾಗದ ರೈತರಿಗೆ ನೀರು ಕೊಡಲು ವಿಫಲರಾದರೆ ಅಧಿಕಾರಿಗಳೇ ಹೊಣೆ-ಎನ್.ಎಸ್.ಭೋಸರಾಜು

 e- ಸುದ್ದಿ ಮಸ್ಕಿ

ಮಸ್ಕಿ ತುಂಗಭದ್ರಾ ಎಡನಾಲೆಯ ೬೯ನೇ ಉಪ ಕಾಲುವೆಗೆ ಸಣ್ಣ ನೀರಾವರಿ ಖಾತೆ ಸಚಿವ ಎನ್ ಎಸ್ ಬೋಸರಾಜು ಸೋಮವಾರ ಸಂಜೆ ಭೇಟಿ ನೀಡಿ ನೀರಿನ ಗೇಜನ್ನು ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊನೆ ಭಾಗದ ರೈತರು ಮೆಣಸಿನಕಾಯಿ ಮತ್ತು ಭತ್ತ ನಾಟಿ ಮಾಡಿದ್ದಾರೆ. ಅಧಿಕಾರಿಗಳು ನಿಗದಿತವಾಗಿ ನೀರು ಪೂರೈಕೆಯಲ್ಲಿ ವ್ಯಾತ್ಯಾಸವಾಗದಂತೆ ಗೇಜ್ ಮೆಂಟೇನ್ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವುದಾಗಿ ತಿಳಿಸಿದರು.

ಕೊನೆ ಭಾಗದ ರೈತರಿಗೆ ನೀರು ತಲುಪಬೇಕಾದರೆ ೪೭ನೇ ಗೇಜ್ ನಿರ್ವಹಣೆ ಮಾಡಿ ಇಲ್ಲದಿದ್ದರೆ ನೀರು ತಲುಪುವುದಿಲ್ಲ. ೬೯ ನೇ ಗೇಜ್ ನಲ್ಲಿ ೩ ಫೀಟ್ ನೀರು ಕಡಿಮೆ ಇದೆ. ಗೇಜ್ ನಿರ್ವಹಣೆಗೆ ಕ್ರಮ ಕೈಗೊಳ್ಳಿ ಎಂದು ನೀರಾವರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಹಂಪಯ್ಯ ನಾಯಕ, ಬಾಲ ಸ್ವಾಮಿ ಕೊಡ್ಲಿ, ನೀರಾವರಿ ಇಲಾಖೆಯ ಎಸ್ ಇ ಕಿರಣ್ ಮಸೂತಿ, ಅಧಿಕಾರಿಗಳಾದ ಶಿವಶಂಕರ, ವಿಜಯ ಲಕ್ಷ್ಮಿ, ನಾಗರಾಜ್, ಮಹಿಬೂಬ್, ಅಮರೇಶ್, ಮುಖಮಡರಾದ ಅಂದಾನಪ್ಪ ಗುಂಡಳ್ಳಿ, ಎಂ.ಅಮರೇಶ, ಶ್ರೀಶೈಲಪ್ಪ ಬ್ಯಾಳಿ, ಶ್ರೀಶೈಲಪ್ಪ ಸಜ್ಜನ್, ಆನಂದ ವೀರಾಪುರ್, ಕೃಷ್ಣ ಚಿಗರಿ, ಡಿವೈಎಸ್‌ಪಿ ಕಾರ್ನಾಡ್, ಸಿಪಿಐ ಬಾಲಚಂದ್ರ ಡಿ ಲಕ್ಕಮ್, ಪಿಎಸ್‌ಐ ತಾರಾಬಾಯಿ ಇದ್ದರು.

 

Don`t copy text!