ಪುರಾಣ ಮತ್ತು ಉಪನಿಷತ್ತಿನ ಕಥೆಗಳು
ಧ್ರುವರಾಜರ ಚರಿತ್ರೆ
ಉತ್ತಾನಪಾದ ಮಹಾರಾಜನಿಗೆ ಇಬ್ಬರು ಹೆಂಡಂದಿರು ಮೊದಲನೆಯವಳು ಸೌಮ್ಯ ಸ್ವಭಾವದ ಸುನೀತಿ. ಎರಡನೆಯವಳು ಸುರುಚಿ ರಾಜನಿಗೆ ಎರಡನೆಯ ಹೆಂಡತಿಯ ಮೇಲೆ ಬಹಳವಾದ ಮೋಹವಿತ್ತು. ಮೊದಲನೆಯ ಪತ್ನಿ ಸುನೀತಿಯ ಮಗ ಧ್ರುವ ಎರಡನೆಯ ಹೆಂಡತಿಯ ಮಗ ಉತ್ತಮ. ಉತ್ತಾನಪಾದ ಮಹಾರಾಜನು ಸಿಂಹಾಸನದ ಮೇಲೆ ಕುಳಿತುಕೊಳ್ಳುವಾಗ ಉತ್ತಮನನ್ನು ತನ್ನ ತೊಡೆಯ ಮೇಲೆ ಕುಳ್ಳಿರಿಸಿಕೊಳ್ಳುತ್ತಿದ್ದನು.
ಸುನೀತಿಯ ಮಗ ಧ್ರುವನಿಗೂ ತಂಧೆಯ ತೊಡೆಯ ಮೇಲೆ ಕುಳಿತುಕೊಳ್ಳುವ ಆಸೆ, ಆದರೆ ಸುರುಚಿ ಧ್ರುವನನ್ನು ತಂಧೆಯ ಸಮೀಪ ಹೋಗಲು ಬಿಡುತ್ತಿರಲಿಲ್ಲ. ಮನ ನೊಂದು ನಮ್ಮ ತಂದೆಗಿಂತ ದೊಡ್ಡವರು ಯಾರು ಎಂದು ತಾಯಿಯ ಬಳಿ ಕೇಳಿದಾಗ ಧಾರ್ಮಿಕಳಾದ ತಾಯಿ ಸುನೀತಿಯು ಪರಮಾತ್ಮನು ಎಲ್ಲರಿಗೂ ತಂದೆ ಅವನೇ ನಮ್ಮೆಲ್ಲರನ್ನೂ ಸಲಹುವ ಎಂದು ಹೇಳಿದಳು. ಭಗವಂತನ ಬಗೆಗೆ ಇನ್ನಷ್ಟು ಆಸಕ್ತಿಯಿಂದ ಧ್ರುವನು ತಿಳಿದನು ಭಗವಂತನ ಮಹಿಮೆ ಅವನ ಬಳಿ ಹೋಗುವ ಮಾರ್ಗ ಎಲ್ಲವನ್ನೂ ತಾಯಿಯ ಮೂಲಕ ಕೇಳಿ ತಿಳಿದನು.
ತಂದೆಯ ತೊಡೆಯ ಮೇಲೆ ಅದರಲ್ಲಿ ಸಿಂಹಾಸನ ಮೇಲೆ ಕುಳಿತು ಕೊಳ್ಳುವ ಬಯಕೆ ತುಂಬಿದ ಧ್ರುವ, ಕಾಡಿನಲ್ಲಿ ತಪಸ್ಸು ಮಾಡಿ ದೇವರ ಅನುಗ್ರಹ ಪಡೆಯ ಬೇಕು ತಂದೆಗೆ ಪ್ರೀತಿ ಪಾತ್ರ ನಾಗಬೇಕೆಂದು ಕಾಡಿಗೆ ಹೊರಟ, ತಾಯಿಗೂ ಹೇಳದೆ ಭಗವಂತನನ್ನ ಹುಡುಕಲು ಹೊರಟ ಪುಟ್ಟ ಧ್ರುವ ರಾಜನಿಗೆ ಮಲತಾಯಿ ಸುರುಚಿಯ ಮಾತುಗಳು ಮನದಲ್ಲಿ ಉತ್ತಮ ಸ್ಥಾನ ಪಡೆಯುವ ಛಲವನ್ನು ಬಿಟ್ಟು ಬೇರೆ ಯಾವ ವಿಚಾರವು ಇರಲಿಲ್ಲ. ಕಾಡಿನಲ್ಲಿ ಹೋಗಿ “ಓಂ ನಮೋ ಭಗವತೆ ವಾಸುದೇವಾಯ” ಜಪವನ್ನು ಆರಂಭಿಸಿದನು. ಬಾಲಕ ಧ್ರುವನನ್ನು ನೋಡಿ ನಾರದರು ಅವನ ಬಳಿ ಬಂದು ಕಾಡು ಪ್ರಾಣಿಗಳು ಬರುತ್ತವೆ ಮನೆಗೆ ಹೋಗು ಎಂದು ತಿಳಿಹೇಳಲು ಪ್ರಯತ್ನಿಸಿದರು. ಧ್ರುವನ ನಿರ್ಧಾರ ಅಚಲವಾಗಿತ್ತು. ನಿದ್ದೆ ನೀರಡಿಕೆ ಬಿಟ್ಟು ಭಗವಂತನ ಧ್ಯಾನದಲ್ಲಿ ಲೀನನಾದ ಬಾಲಕ ಧ್ರುವ.
ಇತ್ತ ಮಗನನ್ನು ಕಾಣದೆ ಚಿಂತಾಕ್ರಾಂತಳಾದ ಸುನೀತಿ, ಉತ್ತಾನಪಾದನ ಬಳಿ ಹೋಗಿ ನಡೆದ ಘಟನೆ ಹೇಳಿದಳು. ರಾಜನು ಕೂಡ ಹೆಂಡತಿಯೊಡಗೂಡಿ ಬಾಲಕ ಧ್ರುವನನ್ನು ಹುಡುಕಲು ಹೊರಟರು.
ಚಳಿ ಗಾಳಿ ಮಳೆ ಕ್ರೂರ ಮೃಗಗಳ ಭಯವಿಲ್ಲದೆ ತಪಸನ್ನು ಆಚರಿಸಿದ ಧ್ರುವ, ಬಾಲಕನ ಭಕ್ತಿಗೆ ಮೆಚ್ಚಿ ನಾರಾಯಣನು ಪ್ರತ್ಯಕ್ಷನಾದ ಭಗವಂತನ ವಾತ್ಸಲ್ಯಕ್ಕೆ ಏನನ್ನು ಕೇಳಬೇಕು ಎಂದಿದ್ದನ್ನೇ ಮರೆತು ಮಂತ್ರ ಮುಗ್ಧನಾದ ಧ್ರುವನನ್ನು ಪ್ರೀತಿಯಿಂದ ಆಶೀರ್ವಾದ ಮಾಡಿ ನಕ್ಷತ್ರಲೋಕದಲ್ಲಿ ಶಾಶ್ವತ ಸ್ಥಾನವನ್ನು ಭೂಲೋಕದಲ್ಲಿ ರಾಜ್ಯವನ್ನು ಆಳಿ ನಂತರ ನಕ್ಷತ್ರ ಲೋಕದಲ್ಲಿ ನೆಲೆಸುವ ವರವನ್ನು ನೀಡಿದನು. ಮಗನನ್ನು ಹುಡುಕುತ್ತ ಬಂದ ತಂದೆ ತಾಯಿಗಳಿಗೂ ಆಶೀರ್ವಾದ ಮಾಡಿದ.
ಕಲಿಯ ಬೇಕಾದ ನೀತಿ :
ಭಗವಂತನ ಅನುಗ್ರಹ ಏನನ್ನು ಬೇಕಾದರೂ ಪಡೆಯಬಹುದು. ನಮ್ಮ ಗುರಿಯನ್ನು ಸಾಧಿಸಲು ದೃಢವಾದ ಮನಸ್ಸಿನಿಂದ ಪ್ರಯತ್ನ ಮಾಡಿದರೆ ಎಲ್ಲವೂ ದೊರೆಯುತ್ತದೆ.
–ಮಾಧುರಿ ದೇಶಪಾಂಡೆ, ಬೆಂಗಳೂರು