ವಿಜೃಂಭಣೆಯಿಂದ ಜರುಗಿದ ಗೌಡೂರು ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಪುರವಂತಿಗೆ ಸೇವಾ ಕಾರ್ಯಕ್ರಮ

ವಿಜೃಂಭಣೆಯಿಂದ ಜರುಗಿದ ಗೌಡೂರು ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಪುರವಂತಿಗೆ ಸೇವಾ ಕಾರ್ಯಕ್ರಮ

 

e- ಸುದ್ದಿ ಲಿಂಗಸೂಗೂರ

ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ಗೌಡೂರು ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ, ಪುರವಂತಿಗೆ ಸೇವೆ ಹಾಗೂ ನಂದಿಕೋಲು ಕುಣಿತ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ಜರುಗಿದವು.

ಪ್ರತಿ ವರ್ಷದ ಸಂಪ್ರದಾಯದಂತೆ ಶ್ರಾವಣ ಮಾಸದ ಪ್ರಥಮ, ದ್ವಿತೀಯ, ತೃತೀಯ ಸೋಮವಾರದಂದು ಶ್ರೀ ವೀರಭದ್ರ ದೇವರಿಗೆ ಮಹಾ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾಮಂಗಳಾರತಿ ಪುಷ್ಪಾಲಂಕಾರ , ನಿತ್ಯ ಭಜನೆ ಸೇರಿದಂತೆ ವಿವಿಧ ಧಾರ್ಮಿಕ ನೆರವೆರಿಸಿಕೊಂಡು ಬರಲಾಗುತ್ತಿದೆ.

ತೃತೀಯ ಸೋಮವಾರದಂದು ಶ್ರೀ ವೀರಭದ್ರ ದೇವರ ಪಲ್ಲಕ್ಕಿಯು ಸಾಯಂಕಾಲ ಗಂಗಾ ಪೂಜೆಗಾಗಿ ಕೃಷ್ಣ ನದಿ ಗೆ ತೆರಳಲಾಗಿತ್ತು.ಮರಳಿ ಬರುವಾಗ ಗುರುಗುಂಟಾ ಗ್ರಾಮದಲ್ಲಿ ಬೆಳಗಿನ ಜಾವದವರೆಗೆ ಭಕ್ತಾದಿಗಳಿಂದ ಪುರವಂತಿಗೆ ಸೇವಾ ಕಾರ್ಯಕ್ರಮ ನಡೆಯಿತು.

ಮಂಗಳವಾರ ಪಲ್ಲಕ್ಕಿಯು ಪುರವಂತಿಗೆ ಸೇವೆಯೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಸಾಗುತ್ತಾ ದೇವಸ್ಥಾನದ ಆವರಣ ತಲುಪಿತು.
ದೇವಸ್ಥಾನದ ಪ್ರಾಂಗಣದಲ್ಲಿ ಹರಕೆ ಹೊತ್ತ ಭಕ್ತರಿಗೆ 2001 ಮೊಳ ದಾರ ಎಳೆಯುವ ಪವಾಡ ಸದೃಶ ಕಾರ್ಯಕ್ರಮವನ್ನು ನೋಡಿದ ಸಹಸ್ರಾರು ಭಕ್ತರು ಕಣ್ಮನ ತುಂಬಿಕೊಂಡರು. ಹರಕೆ ಹೊತ್ತ ಭಕ್ತರು ಶಸ್ತ್ರಗಳನ್ನು ಹಾಕಿಸಿಕೊಂಡುರು.ಭಕ್ತರು ಸಾವಿರಾರು ದೂಳುಗಾಯಿ ಹೊಡೆದು ತಮ್ಮ ಹರಕೆ ತಿರಿಸಿದರು. ನಂತರ ಪಲ್ಲಕ್ಕಿಯೂ ಗರ್ಭಗುಡಿ ಪ್ರವೇಶಿಸಿ ಮಹಾಮಂಗಳಾರತಿ ಯೊಂದಿಗೆ ಕಾರ್ಯಕ್ರಮಊ ಸಂಪನ್ನಗೊಂಡಿತು.

ಕಾರ್ಯಕ್ರಮಕ್ಕೆ ಬಂದಂತಹ ಭಕ್ತಾದಿಗಳಿಗೆ ದಾಸೋಹದಲ್ಲಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು .

ಈ ಸಂದರ್ಭದಲ್ಲಿ ರಾಜಾ ಶೇತುರಾಮ ನಾಯಕ , ರಾಜಾ ಲಕ್ಷಣ ನಾಯಕ,ರುದ್ರಣ್ಣ ಸಾಹುಕಾರ,ರಾಚಯ್ಯ ಸ್ವಾಮಿ ಗಣಾಚಾರಿ, ಮಲ್ಲಣ ಕೋಳುರು, ಪ್ರಧಾನ ಅರ್ಚಕ ತಿರ್ಥಯ್ಯ ಸ್ವಾಮಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಸುತ್ತ ಮುತ್ತಲಿನ ತಾಲೂಕು ಮತ್ತು ಜಿಲ್ಲೆಗಳ ಸಹಸ್ರಾರು ಭಕ್ತರು ಭಾಗವಹಿಸಿದ್ದರು.

Don`t copy text!