ಸಾಣೇಹಳ್ಳಿ ಶ್ರೀಗಳ ಮಾತಿಗೆ ಬೆಂಬಲ

ಸಾಣೇಹಳ್ಳಿ ಶ್ರೀಗಳ ಮಾತಿಗೆ ಬೆಂಬಲ

 

 

 

 

 

 

 

 

 

 

ಇತ್ತೀಚಿಗೆ ಚಿತ್ರದುರ್ಗ ಜಿಲ್ಲೆಯ ಹೊಳಲಕೆರೆಯಲ್ಲಿ ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಶ್ರೀಗಳ ಪುಣ್ಯತಿಥಿಯಂದು ಸಾಣೇಹಳ್ಳಿಯ ಡಾ ಪಂಡಿತಾರಾಧ್ಯ ಶ್ರೀಗಳು ಲಿಂಗಾಯತ ಒಂದು ಅವೈದಿಕ ಹಿಂದುಯೇತರ ಧರ್ಮ ಎಂದು ಹೇಳಿದ್ದು ಸಂಪೂರ್ಣ ಸತ್ಯ ಹಾಗು ಸಾರ್ವತ್ರಿಕ ಸಂಗತಿಯಾಗಿದೆ.

ಹಿಂದೂ ಧರ್ಮದಲ್ಲಿ ಅನೇಕ ಅಂಧಶೃದ್ಧೆ ಕಂದಾಚಾರ ಎನ್ನುವುದನ್ನು ಅವರು ಅನಾಚಾರ ಎಂದಿದ್ದಾರೆ . ಅವರು ಬಳಸಿದ ಅನಾಚಾರ ಮತ್ತು ಅನೈತಿಕ ಎನ್ನುವುದು ಹಿಂದೂ ಧರ್ಮದಲ್ಲಿನ ಜಾತೀಯತೆ ಸಮಾನತೆಯ ಬಗ್ಗೆ ಮಾತ್ರ . ಅದನ್ನು ವಿವಾದ ಮಾಡದೆ ಅಲ್ಲಿನ ಜಾತೀಯತೆ ಅಸಮಾನತೆ ತೊಲಗಲಿ.
ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಒಂದು ಇತಿಹಾಸವಿದೆ. ಲಿಂಗಾಯತ ಧರ್ಮವು ತನ್ನ ಆಚರಣೆ ಸಂಸ್ಕೃತಿ ಜೀವನ ಪದ್ಧತಿ ನಂಬಿಕೆಗಳಲ್ಲಿ ಸಂಪೂರ್ಣ ಹಿಂದೂ ಧರ್ಮಕ್ಕೆ ತದ್ವಿರುದ್ಧವಾಗಿದೆ.
ಸತ್ಯ ಸಮತೆ ಶಾಂತಿ ಪ್ರೀತಿ ಸಾರುವ ಲಿಂಗಾಯತ ಧರ್ಮವಾಗಿದೆ. ಸುಲಿಗೆ ಶೋಷಣೆ ಕಂದಾಚಾರಗಳಿಂದ ತುಂಬಿ ತುಳುಕುತ್ತಿರುವ ಹಿಂದೂ ಆಚರಣೆಗೆ ಹೇಗೆ ಸಮಾನ ಎನ್ನುವುದು ನಿಜಕ್ಕೂ ತಿಳಿಯದ ಸಂಗತಿ.

ಕರ್ನಾಟಕದ ಅನೇಕ ಲಿಂಗಾಯತ ಸ್ವಾಮಿಗಳಿಗೆ ಇತ್ತೀಚಿಗೆ ವೈದಿಕ ಪರಂಪರೆಯ ಆಸಕ್ತಿ ಹೆಚ್ಚಾಗಿದೆ. ಅವರು ಏನಾದರೂ ಆಗಲಿ ಇಡೀ ಲಿಂಗಾಯತ ಸಮುದಾಯದವರನ್ನು ಹಿಂದೂ ಧರ್ಮದ ಭಾಗವೆಂದು ಪ್ರತಿಪಾದಿಸುವ ಅಧ್ಯಯನ ಕೊರತೆಯುಳ್ಳ ಶ್ರೀ ವಚನಾನಂದ ಶ್ರೀಗಳು ಪ್ರಚಾರ ಪ್ರತಿಷ್ಠೆಗೆ ಮನಸ್ಸಿಗೆ ಬಂದಂತೆ ಹೇಳಿಕೆ ಕೊಡುವುದನ್ನು ಲಿಂಗಾಯತ ಧರ್ಮಿಯರು ಸಹಿಸುವುದಿಲ್ಲ.

ನ್ಯೂಸ್ 1 ಚಾನೆಲ್ ಟಿವಿಗೆ ಶ್ರೀ ವಚನಾನಂದ ಶ್ರೀಗಳು ಫೋನ್ ಮುಖಾಂತರ ತಮ್ಮ ಅಭಿಪ್ರಾಯ ಮಂಡಿಸುವಾಗ ಬಸವಣ್ಣನವರಿಗೂ ಮುಂಚೆ ಮಹಾರಾಷ್ಟ್ರದಲ್ಲಿ ವೀರಶೈವ ಸಂಸ್ಕೃತಿ ಇತ್ತು ಅಲ್ಲಿ ಜ್ಞಾನೇಶ್ವರ ಮತ್ತು ಸೋಪಾನರು ವೀರಶೈವ ಸಂಸ್ಕೃತಿ ಪ್ರತಿಪಾದನೆ ಮಾಡಿದ್ದಾರೆ ಎಂದು ಹೇಳಿದ್ದು ಅವರ ಬೌದ್ಧಿಕ ದಿವಾಳಿ ಎಂದೆನಿಸುತ್ತದೆ.
ಬಸವೋತ್ತರ ಕಾಲದಲ್ಲಿ ಜ್ಞಾನೇಶ್ವರ ಮತ್ತು ಸೋಪಾನರು ಬಂದಿದ್ದು ಅವರು ವಿಠ್ಠಲ ವೈದಿಕ ಧರ್ಮದ ಸಮಾಜ ಸುಧಾರಕರು ಎನ್ನುವುದು ಮೊದಲು ಶ್ರೀ ವಚನಾನಂದ ಶ್ರೀಗಳು ತಿಳಿದುಕೊಳ್ಳಲಿ.
ಹಿಂದೂ ಎನ್ನುವುದು ಒಂದು ಸಂಸ್ಕೃತಿ ಭಾರತದಲ್ಲಿ ಬರುವ ಬುದ್ಧ ಜೈನ ಮತ್ತು ಸಿಖ ಧರ್ಮದಂತೆ ಹಿಂದುಯೇತರ ಪ್ರತ್ಯೇಕ ಧರ್ಮವೆನ್ನುವುದು ಸೂರ್ಯನಷ್ಟೇ ಸತ್ಯ .
ಲಿಂಗಾಯತ ಸ್ವತಂತ್ರ ಹೋರಾಟಕ್ಕೆ ಶ್ರೀ ವಚನಾನಂದ ಶ್ರೀಗಳ ಹೇಳಿಕೆಯಿಂದ ಯಾವುದೇ ಪರಿಣಾಮ ಬಿರುವದಿಲ್ಲ

 

 

 

 

 

 

 

 

 

 

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!