ವಚನಗಳ ಅರಿವಿಲ್ಲದ ವಚನಾನಂದ ಸ್ವಾಮಿ

ವಚನಗಳ ಅರಿವಿಲ್ಲದ ವಚನಾನಂದ ಸ್ವಾಮಿ

“ಕೆಂಚ ಕರಿಕನ ನೆನೆದಡೆ ಕರಿಕನಾಗಬಲ್ಲನೆ ?
ಕರಿಕ ಕೆಂಚನ ನೆನೆದಡೆ ಕೆಂಚನಾಗಬಲ್ಲನೆ ?
ದರಿದ್ರನು ಸಿರಿವಂತನ ನೆನೆದಡೆ ಸಿರಿವಂತನಾಗಬಲ್ಲನೆ ?
ಸಿರಿವಂತ ದರಿದ್ರನ ನೆನೆದಡೆ ದರಿದ್ರನಾಗಬಲ್ಲನೆ !
ಮುನ್ನಿನ ಪುರಾತರ ನೆನೆದು ಧನ್ಯನಾದೆಹೆನೆಂಬ
ಮಾತಿನ ರಂಜಕರನೇನೆಂಬೆ ಕೂಡಲಸಂಗಮದೇವಾ.”

ಗುರು ಬಸವಣ್ಣ ನವರ ವಚನದಂತೆ, ವಚನ ಸಾಹಿತ್ಯದ ಅರಿವಿಲ್ಲದೇ ವಚನಾನಂದ ಸ್ವಾಮಿ ಎಂದು ಹೆಸರು ಕೊಟ್ಟು ರಂಜಕರಾಗಿ ಕರೆದು ಕೊಂಡ ಮಾತ್ರಕ್ಕೆ, ಆ ಸಾಹಿತ್ಯದ ಮರ್ಮವನ್ನು ತಿಳಿಯದೆ ಇದ್ದರೇ ಎಷ್ಟು ದಿನ ಬಾಳಿದರು ಲಿಂಗದ ಅರಿವು, ಲಿಂಗಾಯತ ಧರ್ಮದ ಅರಿವು ಮೂಡುವುದಿಲ್ಲ.

ವಚನಾನಂದ ಸ್ವಾಮಿಗಳೇ ನಿಮಗೆ ತಿಳಿದಷ್ಟು ನೀವು ಹೇಳಿದ್ದೀರಿ, ನಿಮಗೇ ಅಷ್ಟೇ ತಿಳಿದಿದೆ ಎಂಬುದು ನಮಗೆ ಗೊತ್ತು, ನಿಮಗೆ ನಮಗೇ ತಿಳಿಯಲಾರದ ವಿಷಯಗಳು ವಚನಗಳಲ್ಲಿ ಎಷ್ಟೋ ಇದೆ, ವಚನ ಸಾಹಿತ್ಯದಲ್ಲಿ ಇದೆ, ಶರಣರ ಜೀವನ ವಿಧಾನದಲ್ಲಿ ಇದೆ, ಲಿಂಗಾಯತ ಧರ್ಮದಲ್ಲಿ ಇದೆ ಎಂಬುದು ನಿಮಗೆ ಅರಿವಿಲ್ಲ. ದಯವಿಟ್ಟು, ಕನ್ನಡದಲ್ಲಿಯೇ ಇದ್ದಂತಹ ವಚನಗಳನ್ನು ಓದಿ ! ಅದರ ಬಗ್ಗೆ ಚಿಂತನೆ ಮಾಡಿ ! ತಿಳಿಯದಿದ್ದರೆ ಅರ್ಥ ಆಗಲ್ಲದಿದ್ದರೆ ಹಿರಿಯರಿಗೆ ಕೇಳಿ ತಿಳಿದು ಕೊಳ್ಳಬಹುದು ! ಅಮೂಲ್ಯವಾದ ವಚನ ಸಾಹಿತ್ಯ ಪ್ರಚಾರವನ್ನು ಮಾಡುವ ಸಂಕಲ್ಪ ನಿಮ್ಮದಾಗಲಿ.

ಪಂಚಮಸಾಲಿಯ ಮುಖಂಡರಾಗಿ ನಿಮ್ಮ ಪೂರ್ವಜರ ಅಸ್ತಿತ್ವವನ್ನು ನೀವು ಮರೆತಿದ್ದೀರಿ. ಒಂದು ವೇಳೆ, ಗುರು ಬಸವಣ್ಣನವರು ಕೊಟ್ಟಿದ್ದಂತಹ ಇಷ್ಟು ಲಿಂಗವನ್ನು ಧಾರಣೆ ಮಾಡದಿದ್ದರೆ ನಮ್ಮ ನಿಮ್ಮಂತವರ ಪರಿಸ್ಥಿತಿ ಅಂದಿನ ಕಾಲದ್ಲಲೇ ಅಲ್ಲ, ಇಂದಿನ ಕಾಲದಲ್ಲಿ ಹೇಗಿತ್ತು ಎಂಬುದನ್ನು ಆಲೋಚನೆ ಮಾಡಿ. ಭೌಗೋಳಿಕವಾಗಿ ನಾವೆಲ್ಲಾ ಹಿಂದುಗಳೇ. ಅದನ್ನು ನೀವು ನಮಗೆ ತಿಳಿಸುವ ಅಗತ್ಯ ಇಲ್ಲ. ನಿಮಗೇ ಈವಾಗಲೇ ಗೊತ್ತಾಗಿದೆ. ನಾವು ನಿಮಗೆ ತಿಳಿಸುವ ಅಗತ್ಯ ಒಂದು ಇದೆ, ಅದೇನೆಂದರೆ ವಚನ ಸಾಹಿತ್ಯವನ್ನು ಓದಿ, ವಚನಾನಂದ ಎಂಬ ಹೆಸರನ್ನು ಪರಿಪೂರ್ಣತ್ವ ಪಡೆದುಕೊಳ್ಳುವ ಪ್ರಯತ್ನ ಮಾಡಿ, ವಚನ ಸಾಹಿತ್ಯದ ಪ್ರಚಾರ ಮಾಡಿ, ಗುರು ಬಸವಣ್ಣನವರ ಮಾನಸ ಪುತ್ರನಾಗಿ ಬೆಳೆಯಿರಿ ಹಾಗಾದರೆ ಮಾತ್ರ ನಾವೆಲ್ಲರೂ ಮತ್ತು ನೀವು ಪರಿಪೂರ್ಣರಾಗಲು ಸಾಧ್ಯ ಎಂಬುದನ್ನು ತಿಳಿಯಲೇ ಬೇಕು.

ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ?
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ?
ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳ ಬನ್ನಿ ಶಿವಾನುಭವವ,”

ವಚನ ಸಾಹಿತ್ಯವನ್ನು ಓದಿ ವಚನ ಸಾಹಿತ್ಯವನ್ನು ಬೆಳೆಸಿ ಪ್ರಚಾರ ಮಾಡುವ ಕಾರ್ಯ ನಿಮ್ಮದಾಗಲಿ ಎಂದು ನಾವೆಲ್ಲ ಹಾರೈಸುವೆ ಶರಣು ಶರಣಾರ್ಥಿ.

 

 

 

 

 

 

 

 

 

ಮಡಪತಿ.ವಿ.ವಿ.
ತೆಲಂಗಾಣ ರಾಜ್ಯ.
ಹೈದರಾಬಾದ್.

Don`t copy text!