ರೋಸಿ ಹೋಗಿದೆ ಮನ
ರೋಸಿ ಹೋಗಿದೆ ಮನ
ಇಂಗಿಸುವವರೇ ಬಸವ
ಭಕ್ತರೆಂಬ ಜನ
ಆಧುನಿಕತೆಯ ಭರಾಟೆಯಲ್ಲಿ
ತಮ್ಮ ಸೋಗಲಾಡಿತನದಲ್ಲಿ
ಬಸವಣ್ಣನವರ ಬದುಕಿನ
ಬೆಳಕಿನಲ್ಲಿ
ತಮ್ಮ ಅಂಧಕಾರವನ್ನು
ಪ್ರದರ್ಶಿಸುತ್ತಿರುವ
ಮಠಮಾನ್ಯಗಳಲ್ಲಿ
ಕಾಣಬಹುದೇ ಬಸವಣ್ಣನ
ಬಾಳಿನ ಹೊಳಪು
ನಿಮಗೆಲ್ಲೋ ಬ್ರಾಂತಿ
ಬಸವಣ್ಣನಂಬ ಮಹಾ
ಸುನಾಮಿಯಾದಾಗಲೆ
ಬಸವ ಬದುಕಿನ ಬೆಳಕು
–ದೀಪಾ ಜಿಗಬಡ್ಡೆ ಬದಾಮಿ