ಭಾರತಾಂಬೆ
ತಾಯೇ ನಿನ್ನ ಮಡಿಲು
ಅದು ಆನಂದದ ಕಡಲು
ನಿನ್ನ ಸುಂದರ ರೂಪ
ವರ್ಣಿಸಲು ಸಾಧ್ಯವೇನಪ್ಪ
ಹಸಿರು ವನಸಿರಿಯ ಸೊಬಗು
ಹಿಮಾಲಯದ ಹಿಮಾಚ್ಚಾಡಿತ ಬೆಡಗು
ಎಲ್ಲೆಲ್ಲೂ ಬಾನಾಡಿಗಳ ಗಾನ
ಮನಕೆ ತಂದಿತು ಹರ್ಷವನು
ಗಂಗೆ ಯಮುನಾ ನದಿಗಳ ಜಲ
ನಿನ್ನ ಪಾದ ತೊಳೆದು ಪಾವನವಾಗಲು
ದಕ್ಷಿಣದಲಿ ತುಂಗಾ ಕಾವೇರಿ
ಮಾಡಿವೆ ಆ ಜಾಗವನೇ ಸಿರಿ
ಕಾಳಿದಾಸ ಪ್ರೇಮಚಂದ ರನ್ನ
ನಿನ್ನ ಹೊಗಳಿ ಹಾಡಿದ್ದಾರೆ ಗಾನ
ರಾಮ ಕೃಷ್ಣರು ಜನಿಸಿದ ಪುಣ್ಯಭೂಮಿ
ಶಿವಾಜಿ, ರಾಣಾ ಪ್ರತಾಪರಾಳಿದ
ಜನ್ಮಭೂಮಿ
ನಿನ್ನ ಮಡಿಲಲಿ ಹುಟ್ಟಬೇಕು ಎಂದೂ
ಇದೇ ನನ್ನ ಮನದಾಸೆ ಎಂಬುದು
ನಿನ್ನ ಚರಣದಲಿ ಸೇವೆ ಮಾಡುವೆ
ತಾಯೇ ನಿನಗೆ ಜಯವಾಗಲಿ ಎಂಬೆ
ನಿನ್ನನೆಷ್ಟು ವರ್ಣಿಸಿದರೂ ಕಡಿಮೆಯೇ ಭಾರತಾಂಬೆ
ಮೊಳಗಲಿ ಎಂದೂ ಘೋಷ ಜೈ ಅಂಬೇ
✍️ರೇಖಾ. ಮುತಾಲಿಕ್