ಅಶೋಕ ಶಾಸನ ಪ್ರದೇಶದ ಅಭಿವೃದ್ದಿಗೆ ಶ್ರಮಿಸುವೆ-ಸಂಸದ ರಾಜಶೇಖರ ಹಿಟ್ನಾಳ
e- ಸುದ್ದಿ ಮಸ್ಕಿ
ದೇಶದಲ್ಲಿ ಮಹತ್ವ ಪಡೆದಿರುವ ಪಟ್ಟಣದ ಅಶೋಕನ ಶಿಲಾಶಾಸನ ಪ್ರದೇಶವನ್ನು ಅಭಿವೃದ್ದಿ ಪಡಿಸುವುದಾಗಿ ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಮುಖಂಡ ಅಂದಾನಪ್ಪ ಗುಂಡಳ್ಳಿ ಅವರ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶಾಸನ ಪ್ರದೇಶದಲ್ಲಿ ಉದ್ಯಾನವನ ನಿರ್ಮಾಣ, ಮಸ್ಕಿ ಪಟ್ಟಣಕ್ಕೆ ಸಂಬಧಿಸಿದ ಐತಿಹಾಸಿಕ ಕುರುಹಗಳ ಸಂಗ್ರಹಕ್ಕಾಗಿ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳೊಂದಿಗೆ ಶೀಘ್ರದಲ್ಲಿ ಚರ್ಚಿಸುವೆ ಎಂದರು.
ಪ್ರಸಿದ್ದವಾದ ಬೆಟ್ಟದ ಮಲ್ಲಿಕಾರ್ಜುನ ದೇವರ ದರ್ಶನ ಪಡೆದರು. ವಿಧಾನ ಪರಿಷತ್ತ ಸದಸ್ಯ ಬಸನಗೌಡ ಬಾದರ್ಲಿ, ಶ್ರೀಶೈಲಪ್ಪ ಬ್ಯಾಳಿ, ಎಚ್.ಬಿ.ಮುರಾರಿ, ಹನುಮಂತಪ್ಪ ಮುದ್ದಾಪುರ, ಮೈಹಿಬೂಬುಸಾಬ ಮುದ್ದಾಪುರ, ಎಂ.ಅಮರೇಶ, ಬಸನಗೌಡ ಪೊಲೀಸ್ ಪಾಟೀಲ, ಶ್ತೀಶೈಲಪ್ಪ ಸಜ್ಜನ್, ವೀರೇಶ ಪಾಟೀಲ, ಶ್ರೀಶೈಲಪ್ಪ ಬ್ಯಾಳಿ, ಶಿವು ಬ್ಯಾಳಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಚಿಗರಿ ಶಬೀರ್, ಆನಂದ ವೀರಾಪುರ, ನಿರುಪಾದೆಪ್ಪ ವಕೀಲ, ಶರಣಪ್ಪ ಎಲಿಗಾರ, ಮಲ್ಲನಗೌಡ ಸುಂಕನೂರು, ಕರಿಯಪ್ಪ ಹಾಲಾಪುರ, ರಮೇಶ ಕಡಬೂರು ಹಾಗೂ ಇತರರು ಇದ್ದರು.