ಬೆಟ್ಟದ ಮಲ್ಲಿಕಾರ್ಜುನ ದೇವರಿಗೆ ಶಾಸಕರಿಂದ ವಿಶೇಷ ಪೂಜೆ
e- ಸುದ್ದಿ ಮಸ್ಕಿ
ಶ್ರಾವಣ ಮಾಸದ ಕಡೇ ಸೋಮವಾರ ಸೆ.೨ ಸೋಮವಾರದಂದು ಬೆಟ್ಟದ ಮೇಲಿರುವ ಮಲ್ಲಿಕಾರ್ಜುನ ದೇವರಿಗೆ ಬೆಳಿಗ್ಗೆ ಬ್ರಾಹ್ಮೀ ಮೂಹೂರ್ತದಲ್ಲಿ ಅರ್ಚಕರು ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆಯೊಂದಿಗೆ ವಿಶೇಷ ಪೂಜೆ ನೆರವೇರಿಸಿದರು. ಬೆಟ್ಟದ ಕೆಳಗಡೆ ಶ್ರೀ ಭ್ರಮರಾಮಬ ದೇವಸ್ಥಾನದಲ್ಲಿ ಶ್ರೀ ಭ್ರಮರಾಂಬ ದೇವಿಗೂ ಕೂಡ ವಿಶೇಷ ಪೂಜೆ ಸಲ್ಲಿಸಲಾಯಿತು.
ಭಕ್ತರ ದಂಡು ಬೆಳಿಗ್ಗೆ ೪ ಗಂಟೆಯಿಂದ ಸಂಜೆವರೆಗೂ ಬೆಟ್ಟ ಹತ್ತಿ ದೇವರ ದರ್ಶನ ಪಡೆದರು. ಹಣ್ಣು ಕಾಯಿ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಬೆಟ್ಟದ ಮೇಲೆ ಆಗಮಿಸುವ ಭಕ್ತರಿಗಾಗಿ ಅನ್ನಸಂತರ್ಪಣೆ ನಡೆಸಲಾಯಿತು.
ಶಾಸಕ ಆರ್.ಬಸನಗೌಡ ತುರ್ವಿಹಾಳ ಬೆಟ್ಟಹತ್ತಿ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಂತರ ರಥ ಬೀದಿಯಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕಾಂಗ್ರೆಸ್ ಪಕ್ಷದ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ, ಕಾಂಗ್ರೆಸ್ ಪಕ್ಷದ್ ಮುಖಂಡರಾದ ಬಸನಗೌಡ ಪೊಲೀಸ್ ಪಾಟೀಲ, ಶ್ರೀಶೈಲಪ್ಪ ಬ್ಯಾಳಿ, ವೀರೇಶ ಪಾಟೀಲ, ಸುರೇಶ ಬ್ಯಾಳಿ, ಮಸ್ಕಿ ತಾ.ಪಂ. ಮಾಜಿ ಅಧ್ಯಕ್ಷ ಶಿವಣ್ಣ ನಾಯಕ, ನಿರುಪಾದೆಪ್ಪ ವಕೀಲ, ಶಿವು ಬ್ಯಾಳಿ ಹಾಗೂ ಇತರರು ಇದ್ದರು.