ಬಸವಣ್ಣನವರ ನೆಲದಲ್ಲಿ ವಚನಗಳ ಕಗ್ಗೊಲೆ
ವಚನ ದರ್ಶನ ಎಂಬ ಸಂಘ ಪರಿವಾರದವರು ಸೃಷ್ಟಿದ ಖೊಟ್ಟಿ ಕೃತಿಯನ್ನು ನಾಡಿನಾದ್ಯಂತ ಬಿಡುಗಡೆ ಮಾಡಿ ದುಡ್ಡು ಮಾಡುವ ಅಯೋಧ್ಯಾ ಪ್ರಕಾಶನದ ಕೃಪಾ ಪೋಷಿತ ಶ್ರೀ ಸದಾ ಶಿವಾನಂದ ಸ್ವಾಮೀಜಿ ಹಾಗು ತಂಡದವರು ಪ್ರಕ್ಷಿಪ್ತ ಖೋಟಾ ಕಲಬೆರಕೆ ವಚನಗಳನ್ನು ತೆಗೆದುಕೊಂಡು ತಮ್ಮ ಅನಕೂಲಕ್ಕೆ ತಕ್ಕಂತೆ ತೋಚಿದ್ದನ್ನು ಗೀಚಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೆಲ ಕೋಮುವಾದಿ ಸಂಘಟನೆಗಳು ವಚನ ಸಾಹಿತ್ಯದ ಮೇಲೆ
ದಾಳಿ ನಡೆಸಿ ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಬಹು ದೊಡ್ಡ ಆಂದೋಲನವನ್ನು ಯಾಮಾರಿಸಿ ವಚನ ಚಳುವಳಿಯು ವೇದ ಆಗಮ ಶಾಸ್ತ್ರ ಉಪನಿಷದ್ ಪೂರ್ಣಾಗಳನ್ನು ಧಿಕ್ಕರಿಸಿ ಸ್ವಾನುಭಾವದ ನೆಲೆಯಲ್ಲಿ ವಚನಗಳನ್ನು ರಚಿಸಿದ್ದಾರೆ .
ಹಲವಾರು ಒಳ್ಳೆಯ ವಿಚಾರಗಳನ್ನು ಬುದ್ಧ ಮಹಾವೀರ ಬಸವಣ್ಣ ಹೇಳಿದ್ದಾರೆ ಅವುಗಳಲ್ಲಿ ಅನೇಕ ಸಾಮ್ಯತೆಗಳು ಇರುತ್ತವೆ ಹಾಗೆಂದ ಮಾತ್ರಕ್ಕೆ ಒಬ್ಬರ ವೈಚಾರಿಕ ಪ್ರೇರಣೆ ಇನ್ನೊಬ್ಬರ ಮೇಲೆ ಆಗಿದೆ ಎಂದರ್ಥವಲ್ಲ. ಭಾಷೆ ಬೇರೆ ಸಂಸ್ಕೃತಿ ಬೇರೆ ಎಲ್ಲರೂ ಮಾನವ ಕಾಳಜಿಯನ್ನು ಬಯಸಿದವರು.
ಬಸವ ದರ್ಶನ ಎಂಬ (ವಚನ ದರ್ಶನ ಎಂಬ ಪೂರ್ವ ನಿಯೋಜಿತ ಪೂರ್ವಗ್ರಹ ಪೀಡಿತ ಪುಸ್ತಕದ ಬಿಡುಗಡೆ ಪುಸ್ತಕ ಮಾರಾಟವು ರಾಜ್ಯದ ತುಂಬೆಲ್ಲಾ ನಡೆದಿದೆ. ಸ್ವಾತಂತ್ರ ನಂತರದ ಮತ್ತು ಅದರ ಪೂರ್ವದಲ್ಲಿ ಸಂಘ ಪರಿವಾರವಾಗಲಿ ಆರ್ ಎಸ ಎಸ ಆಗಲಿ ವಿಶ್ವ ಹಿಂದೂ ಪರಿಷತ್ ಆಗಲಿ ಎಂದೂ ಬಸವಣ್ಣ ಮತ್ತು ಶರಣರ ಬಗ್ಗೆ ಮಾತೆತ್ತಿದವರಲ್ಲ. ಈಗ ಒಮ್ಮಿಲೇ ಬಸವಣ್ಣನವರ ಮೇಲೆ ಏಕೆ ಪ್ರೀತಿ ಗೌರವ ಭಕ್ತಿ ಬಂದಿದೆ ಗೊತ್ತಿಲ್ಲ.
ಶ್ರೀ ಸದಾಶಿವ ಸ್ವಾಮಿಗಳ ಪ್ರಧಾನ ಸಂಪಾದಕತ್ವದಲ್ಲಿ ಅಯೋಧ್ಯಾ ಪ್ರಕಾಶನದ ಸಂಘ ಪರಿವಾರದ ಪ್ರಿಂಟಿಂಗ್ ಪ್ರೆಸ್ಸಿನಲ್ಲಿ ಆರ್ ಆರ್ ಎಸ ಸಿದ್ಧಾಂತದ ಕೆಲ ಲೇಖಕರನ್ನು ಬಳಸಿಕೊಂಡು ವಚನ ದರ್ಶನ ಪ್ರಕಟಿಸಿ ಮಾರಾಟ ಮಾಡುತ್ತಿದ್ದಾರೆ. ವೇದ ಆಗಮ ಶಾಸ್ತ್ರ ಪುರಾಣಗಳನ್ನು ಧಿಕ್ಕರಿಸಿ ಸನಾತನಕ್ಕೆ ಸವಾಲೆಸೆಯುವ ರೀತಿಯಲ್ಲಿ ಶರಣರು ಪ್ರತಿ ಕ್ರಾಂತಿ ಮಾಡಿದರು .
44 ವಚನಕಾರರಲ್ಲಿ ಸುಮಾರು 480 ಕ್ಕೂ ಅಧಿಕ ವಚನಗಳಲ್ಲಿ ವೇದ ಆಗಮ ಶಾಸ್ತ್ರ ಪುರಾಣಗಳನ್ನು ಧಿಕ್ಕರಿಸಿದ ವಚನಗಳನ್ನು ಮರೆ ಮಾಚಿ ಕೆಲ ಪ್ರಕ್ಷಿಪ್ತ ಖೋಟಾ ವಚನಗಳನ್ನು ಹೆಕ್ಕಿಕೊಂಡು ತಮಗೆ ಬೇಕಾದ ರೀತಿಯಲ್ಲಿ ಕಪೋಲ ಕಲ್ಪಿತ ವಿಚಾರಗಳಿಂದ ಶರಣರ ವಚನಗಳು ವೇದ ಆಗಮ ಶಾಸ್ತ್ರ ಪುರಾನಾ ಆಧಾರಿತವಾಗಿವೆ ಎಂದು ಹಸಿ ಸುಳ್ಳು ಹೇಳುವದನ್ನು ಬಿಟ್ಟರೆ ಕೃತಿಯಲ್ಲಿ ಏನೂ ಹುರುಳಿಲ್ಲ.
ಶೂನ್ಯನಾಥನೆಂಬ ಒಬ್ಬ ನಕಲಿ ವಚನಕಾರರನ್ನು ಸೃಷ್ಟಿಸಿದ್ದಾರೆ. ಡಾ ಫ ಗು ಹಳಕಟ್ಟಿ ಅವರನ್ನು ಕ್ರೈಸ್ತ ಮಠದ ವಿರೋಧಿ ಎಂದು ಬಿಂಬಿಸಿದ್ದಾರೆ
ಹದಿನಾರನೆಯ ಶತಮಾನದಲ್ಲಿ ಉದ್ಭವಗೊಂಡ ಕೃತ್ರಿಮ ಖೋಟಾ ವಚನಗಳನ್ನೇ ಆಧಾರವಾಗಿತ್ತು ಕೊಂಡು ಲಿಂಗಾಯತ ಧಾರ್ಮ ಮಾನ್ಯತೆಯ ಹೋರಾಟದ ಧಿಕ್ಕು ತಪ್ಪಿಸುವ ಹುನ್ನಾರದಿಂದ ಇಂತಹ ಕೃತ್ಯಗಳು ನಡೆದಿವೆ.
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಅಕ್ಕನ ಅರಿವು ಧಾರವಾಡದ ಸ್ಥಳೀಯ ಬಸವ ಪರ ಸಂಘಟನೆಗಳ ಜೊತೆಗೂಡಿ ಅಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಪ್ರತಿಭಟಿಸಿ ಜಿಲ್ಲಾಧಿಕಾರಿಗಳ ಮೂಲಕ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ವಚನ ದರ್ಶನ ಪುಸ್ತಕ ಮುಟ್ಟುಗೋಲಿಗೆ ಆಗ್ರಹಿಸಿ ಮನವಿಯನ್ನು ಸಲ್ಲಿಸಲಾಯಿತು.
ಈ ಮಧ್ಯ ಸೆಪ್ಟೆಂಬರ್ 5 ರಂದು ವಿಜಯಪುರದಲ್ಲಿ ಈ ವಿವಾದಿತ ಕೃತಿ ಬಿಡುಗಡೆ ಸಮಾರಂಭದಲ್ಲಿ ಆರ್ ಎಸ ಎಸ ಪ್ರಮುಖ ಶ್ರೀ ಬಿ ಆರ್ ಶಂಕಾರಾನಂದ ಅವರು ಮಾತನಾಡುತ್ತ ವಚನಗಳು ಬರೆದಿದ್ದಲ್ಲ ,ಸೃಜಿಸಿದ್ದು ,ಬಸವಾದಿ ಶರಣರು ಅಸಮಾನತೆಯ ವಿರುದ್ಧ ಹೋರಾಟ ಚಳುವಳಿಯಯನ್ನು ನಡೆಸಿಲ್ಲ. ಕಲ್ಯಾಣದಲ್ಲಿ ನಡೆದದ್ದು ಕ್ರಾಂತಿ ಅಲ್ಲ. ಭಾರತದಲ್ಲಿ ಕ್ರಾಂತಿ,ಚಳುವಳಿಗೆ ಜಾಗವೇ ಇಲ್ಲ ಎಂದು ಅತ್ಯಂತ ಕೀಳುಮಟ್ಟದ ತಮ್ಮ ಜ್ಞಾನವನ್ನು ಪ್ರದರ್ಶಿಸಿದರೂ ಸಹಿತ ಲಿಂಗಾಯತ ಶ್ರೀಮಂತ ಮಠಗಳು ಬಸವ ಪರ ಸಂಘಟನೆಗಳು ಮಹಾಸಭೆಗಳು ಬಸವ ಸಮಿತಿ ಏಕೆ ಮೌನ ತಾಳಿವೆ ಅರ್ಥವಾಗದು. ಈಗ ಮೌನವಾದರೆ ಇಂತಹ ಕೃತಿಗಳ ಸರಮಾಲೆಗಳೇ ಪ್ರಕಟ ಗೊಳ್ಳಬಹುದು .
ಲಿಂಗಾಯತರು ಹಿಂದೂಗಳಲ್ಲ ಆದರೆ ಹಿಂದೂ ವಿರೋಧಿಗಳಲ್ಲ
ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಚಳುವಳಿ. ಮಾನವ ಹಕ್ಕುಗಳು ಆಂದೋಲನ. ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ರಹಿತ ಸಾಂಸ್ಥಿಕಕರಣವಲ್ಲದ ಸರ್ವ ಶ್ರೇಷ್ಟ ಮಾನವ ಧರ್ಮ.ಬಸವಣ್ಣ ಒಂದು ವೇಳೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟಿದ್ದರೆ ಇಂದು ಜಗತ್ತು ಲಿಂಗಮಯ ಆಗುತ್ತಿತ್ತು.
ಲಿಂಗಾಯತ ಧರ್ಮವು ವೇದ ಆಗಮ ಶಾಸ್ತ್ರ ಪುರಾಣಗಳನ್ನು ಸಾರಾ ಸಗಟಾಗಿ ತಳ್ಳಿ ಹಾಕುತ್ತವೆ. ಬಹುದೇವೋಪಾಸನೆ ಸ್ಥಾವರ ಪೂಜೆ ರುದ್ರಾಭಿಷೇಕ ಅರ್ಚನೆ ನಿಯಮ ವೃತ ಎಂಬ ಅನೇಕ ಶುಷ್ಕ ಆಚರಣೆಗೆ ಮುಂದಾಗದೆ ಅಂತಹ ಅನೇಕ ಕ್ರಿಯೆಗಳನ್ನು ನಿರಂತರ ಪ್ರಶ್ನೆ ಮಾಡುತ್ತಾ ತಮ್ಮದೇ ಆದ ಭಿನ್ನ ಹಾದಿಯಲ್ಲಿ ನಡೆದರು ಶರಣರು.
ಸನಾತನ ಧರ್ಮದ ಕಟ್ಟಳೆ ಶೋಷಣೆ ಕಂದಾಚರ ಕಂಡು ಬೇಸತ್ತು ಬುದ್ಧ ಮೊದಲಿಗೆ ಸಿಡಿದೆದ್ದು ಪರ್ಯಾಯ ಚಳುವಳಿಯನ್ನು ವೈದಿಕರ ವಿರುದ್ಧ ಆರಂಭಿಸಿದನು.
ವಿಚಿತ್ರ ಆದರೂ ಸತ್ಯ ಬುದ್ಧನನ್ನು ಸನಾತನವಾದಿಗಳು ದಶಾವತಾರದಲ್ಲಿ ಸ್ಥಾನ ಕಲ್ಪಿಸಿ ಬೌದ್ಧ ಧರ್ಮ ಭಾರತ ಬಿಟ್ಟು ಪೌರಾತ್ಯ ರಾಷ್ಟ್ರಗಳಿಗೆ ಹೋಗುವಂತೆ ಮಾಡಿದರು.
ಆದರೆ ಬಸವಣ್ಣ ವೈದಿಕ ಮೂಲ ಬೇರಿಗೆ ಕೊಡಲಿ ಏಟು ಕೊಟ್ಟ ಅದುವೆ ಯಜ್ಞೋಪವೀತ ಜನಿವಾರ ಧಾರಣೆ ಮುಂಜಿವೆ ಪ್ರಸಂಗ ಅದನ್ನು ಧಿಕ್ಕರಿಸಿ ಮನೆ ಬಿಟ್ಟು ಹೊರ ನಡೆದನು. ದಲಿತರ ಬಡವರ ಕಾರ್ಮಿಕರ ಶ್ರಮಿಕರ ಶೋಷಿತರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತುವ ಮೂಲಕ ಸಮಾಜದ ಸಂಘಟನೆಯ ನಾಯಕತ್ವ ವಹಿಸಿದರು.
ಬಸವಣ್ಣವರು ಸಾರಿದ ವಚನಗಳು ಬಂಡಾಯ ವಿದ್ರೋಹಿ ಸಾಹಿತ್ಯ ಚಿಂತನೆಗಳು .ಕಲ್ಯಾಣ ಕ್ರಾಂತಿಯ ನಂತರ ಸುಮಾರು ಇನ್ನೂರು ಐವತ್ತು ವರ್ಷಗಳ ವರೆಗೆ ವಚನ ಚಳುವಳಿ ಭೂಗರ್ಭ ಸೇರಿತು. ಇತ್ತೀಚೆಗೆ. ಡಾ ಫ ಗು ಹಳಕಟ್ಟಿ ಅವರ ಮತ್ತು ಅನೇಕ ಸಂಶೋಧಕರ ನಿರಂತರ ಪ್ರಯತ್ನದಿಂದಾಗಿ ನಮಗೆ ಪರಿಷ್ಕೃತ ವಚನ ಸಾಹಿತ್ಯ ದೊರಕಿದೆ.
ಹಿಂದೂ ಎನ್ನುವುದು ಧರ್ಮವಲ್ಲ ಅದು ಸಂಸ್ಕೃತಿ ಮತ್ತು ಬದುಕಿನ ಮಾರ್ಗವೆಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅದನ್ನು ನಮ್ಮ ಪ್ರಧಾನಿಯವರು ಅನೇಕ ಬಾರಿ ಹೇಳಿದ್ದಾರೆ. ವಸ್ತು ಸ್ಥಿತಿ ಹೀಗಿದ್ದಾಗ ಭಾರತದಲ್ಲಿ ಹುಟ್ಟಿದ ಜೈನ ಬೌದ್ಧ ಸಿಖ್ ಧರ್ಮದಂತೆ ಲಿಂಗಾಯತ ಬಸವ ಧರ್ಮವೂ ಕೂಡ ಸ್ವತಂತ್ರ ಹಿಂದುಯೇತರ ಅವೈದಿಕ ಧರ್ಮ. ಬಸವಣ್ಣನವರ ವಚನಗಳು ಚಿಂತನೆಗಳು ಇಂದು ಇಡೀ ಜಗತ್ತಿಗೆ ಆಕರ್ಷಕವಾಗಿವೆ. ಮಗ್ನಾ ಕಾರ್ಟ ದವರು ಸಹಿತ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ತು ಎಂದು ಹೇಳುತ್ತಾರೆ. ವಸ್ತು ಸ್ಥಿತಿ ಹೀಗಿರುವಾಗ ಲಿಂಗಾಯತರು ಹಿಂದೂಗಳು ಎಂದು ಹೇಳುತ್ತಾ ಅವರಿಗೆ ಸ್ವತಂತ್ರ ಧರ್ಮ ಮಾನ್ಯತೆಯನ್ನು ಮತ್ತು. ಅಲ್ಪ ಸಂಖ್ಯಾತ ಸ್ಥಾನ ಮಾನ ನೀಡದೆ ಲಿಂಗಾಯತ ಧರ್ಮದ ಅಸ್ಮಿತೆಯನ್ನು ಕಾಪಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನಾಧಾರ ತೋರಿಸುತ್ತಿರುವುದು ಅತ್ಯಂತ. ನೋವಿನ ಸಂಗತಿ.ಇದಕ್ಕೆ ಸಾವಿರಾರು ದಾಖಲೆ ಕೋರ್ಟ್ ಮಹತ್ವದ ತೀರ್ಪುಶಾಸನಗಳು. ಮೌಖಿಕ ಸಾಕ್ಷಿಗಳ ಸಂಗ್ರಹ ಬ್ರಿಟಿಷ್ ಸರಕಾರಿ ಅಧಿಸೂಚನೆಗಳು.ಜನಗಣತಿ ಮಾಹಿತಿ ಮೇಲಾಗಿ ಶರಣರ ವಚನಗಳು ಸಾಕ್ಷಿ ಪುರಾವೆಗಳಿವೆ. ಲಿಂಗಾಯತರು ಖಂಡಿತಾ. ಹಿಂದೂಗಳಲ್ಲ ಹಾಗಂತ ಹಿಂದೂ ವಿರೋಧಿಗಳೂ ಅಲ್ಲ. ಜ್ಯಾತ್ಯಾತೀತ ನಿಲುವು ವಿಶ್ವ ಬಂಧುತ್ವ ಜಾತಿರಹಿತ ಸಮಾಜದ ನಿರ್ಮಾಣ ಶರಣರ ಮುಖ್ಯ ಗುರಿ . ಲಿಂಗಾಯತ ಧರ್ಮದ ಪುನರುತ್ಥಾನ ವಚನ ಚಳುವಳಿ ಮುಂದುವರಿಕೆ ನಮ್ಮೆಲ್ಲರ ಕರ್ತವ್ಯ ಜವಾಬ್ದಾರಿ.
ವಚನ ದರ್ಶನದ ಉದ್ದೇಶವೇನು ?
ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಕಾನೂನು ಸಮ್ಮತ ಮತ್ತು ನ್ಯಾಯ ಸಮ್ಮತ .ಪ್ರತಿಯೊಬ್ಬ ಧರ್ಮಿಯನಿಗೂ ತನ್ನ ಹಕ್ಕುಗಳನ್ನು ಚಲಾಯಿಸಲು ಸಂವಿಧಾನದಲ್ಲಿ ಅವಕಾಶವಿದೆ. ಚಾರಿತ್ರಿಕ ಬಸವಣ್ಣ ಮತ್ತು ಶರಣರ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡುವ ಸಂಘ ಪರಿವಾರದ ಮುಖ್ಯಸ್ಥರು ಆರ್ ಎಸ ಎಸ ನಾಯಕರು ಬಸವ ಭಕ್ತರಿಗೆ ನಿರಂತರವಾಗಿ ಅವಹೇಳನ ಮಾಡುತ್ತಿದ್ದಾರೆ. ವಚನ ದರ್ಶನ ಹಿಂದಿನ ಮುಖ್ಯ ಗುರಿ ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಯನ್ನು ಹತ್ತಿಕ್ಕಿ ಲಿಂಗಾಯತರನ್ನು ಹಿಂದೂಗಳೆಂದು ಬಿಂಬಿಸುವ ಪ್ರಯತ್ನದಲ್ಲಿದ್ದಾರೆ. ವಚನ ದರ್ಶನಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ಜಾಗತಿಕ ಲಿಂಗಾಯತ ಮಹಾಸಭೆ ,ನಾಡಿನ ಬಸವ ಪರ ಮಠಗಳು, ಬಸವ ಸಮಿತಿ ಮೌನ ತಾಳಿವೆ.
ಕೃಷ್ಣ ರಾಮ ಎಂಬ ಕಾಲ್ಪನಿಕ ಪೌರಾಣಿಕ ವ್ಯಕ್ತಿಗಳಿಗೆ ದೇಶದಲ್ಲಿ ಚಾರಿತ್ರಿಕೆಯ ಲೇಪನ ಹಚ್ಚಿ ಹುಸಿ ಭಕ್ತಿ ಹುಟ್ಟು ಹಾಕಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಕಟ್ಟಿದರು ಅದಕ್ಕೆ ಯಾವೊಬ್ಬ ಲಿಂಗಾಯತರು ವಿರೋಧಿಸಿಲ್ಲ. ಇಂದು ಆರ್ ಎಸ ಎಸ ಮುಖಂಡರು ನೇರವಾಗಿ ಕಲ್ಯಾಣದಲ್ಲಿ ಕ್ರಾಂತಿಯೇ ನಡೆದಿಲ್ಲ ಬಸವಣ್ಣಮತ್ತು ಇತರ ಶರಣರು ಯಾವುದೇ ಸಾಮಾಜಿಕ ಸುಧಾರಣೆ ಮಾಡಿಲ್ಲ ಜಾತಿ ವಿಮೋಚಿನೆಯಾಗಿಲ್ಲ. ಭಾರತದಂತಹ ನೆಲದಲ್ಲಿ ಕ್ರಾಂತಿ ಎಂಬ ಪದಕ್ಕೆ ಅರ್ಥವೇ ಇಲ್ಲ ಎಂದು ಘಂಟಾ ಘೋಷವಾಗಿ ಶರಣರ ಶ್ರಮ ಸಂಸ್ಕೃತಿಯನ್ನು ಟೀಕಿಸುತ್ತಿದ್ದಾರೆ. ಬಸವಣ್ಣನವರ ಪುಣ್ಯ ನೆಲವಾದ ವಿಜಯಪುರದಲ್ಲಿ ,ಡಾ ಫ ಗು ಹಳಕಟ್ಟಿ ಬಂಥನಾಳ ಶಿವಯೋಗಿಗಳ , ಹರ್ಡೇಕರ ಮಂಜಪ್ಪನವರ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ, ಡಾ ಎಂ ಎಂ ಕಲಬುರ್ಗಿ ಅವರಂತಹ ದೊಡ್ಡ ಸಂಶೋಧಕರ ನಾಡಿನ ವಿಜಯಪುರದಲ್ಲಿ
ದಿನಾಂಕ 5 ಸೆಪ್ಟೆಂಬರ್ ರಂದು ತಮ್ಮ ವಚನ ದರ್ಶನ ಎಂಬ ಹುರುಳಿಲ್ಲದ ಕೃತಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಬಸವಣ್ಣ ಮತ್ತು ಶರಣರ ಬಗ್ಗೆ ಅತ್ಯಂತ ಕಟುವಾಗಿ ಟೀಕಿಸಿದ್ದು ದಾಖಲೆಯಾಗಿದೆ. ಏಕೆ ವಿಜಯಪುರದ ಜಿಲ್ಲಾಡಳಿತ, ಪ್ರಮುಖ ಲಿಂಗಾಯತ ಮಠಗಳು ,ಮಂತ್ರಿಗಳು ,ರಾಜಕಾರಣಿಗಳು, ಇಂತಹ ತಮಾಷೆಯನ್ನು ನೋಡಿ ಮೌನವಾಗಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಸರಕಾರಿ ಕನ್ನಡ ಸಂಸ್ಕೃತಿ ಇಲಾಖೆ ಏನು ಮಾಡುತ್ತಿವೆ ? ಲಿಂಗಾಯತರ ಭಕ್ತಿ ಭಾವನೆಗೆ ನೋವು ಉಂಟು ಮಾಡುವವರ ವಿರುದ್ಧ ಡಾ ಪರಮೇಶ್ವರ ಗೃಹ ಮಂತ್ರಿಯವರು ಏಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ? ಬಸವ ಭಕ್ತರ ಸಹನೆಯ ಕಟ್ಟೆಯೊಡೆದು ಇನ್ನೊಂದು ಕ್ರಾಂತಿ ಜರುಗುವ ಮುನ್ನ ಸರಕಾರವು ವಚನ ದರ್ಶನ ಎಂಬ ವಿವಾದಾಸ್ಪದ ಕೃತಿಯನ್ನು ಈ ಕೂಡಲೇ ಮುಟ್ಟುಗೋಲು ಹಾಕಿ ಮತ್ತು ಪ್ರಧಾನ ಸಂಪಾದಕರು ಸಂಪಾದಕ ಸದಸ್ಯರ ಮೇಲೆ ಕ್ರಮ ಕೈ ಗೊಳ್ಳಲು ಆಗ್ರಹ.
ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ರವಿ ಹಂಜ, ವಿಶ್ವೇಶ್ವರ ಭಟ್ ,ಜನಮಜೆಯ ಉಮರ್ಜಿ ಮತ್ತು ಶ್ರೀ ಸದಾಶಿವ ಸ್ವಾಮಿಗಳಿಗೆ ಏನಾದರೂ ಅನುಮಾನವಿದ್ದರೆ ಬಹಿರಂಗ ಚರ್ಚೆಗೆ ಬನ್ನಿ . ಅದು ಬಿಟ್ಟು ಹೇಡಿಗಳಂತೆ ಕೆಲ ಪತ್ರಿಕೆಗಳನ್ನು ಸಾಮಾಜಿಕ ಜಾಲತಾಣಗಳನ್ನು ವೇದಿಕೆಗಳನ್ನು ಬಳಸಿ ಸಮಾಜವನ್ನು ದಿಕ್ಕು ತಪ್ಪಿಸುವ ಕಾರ್ಯ ಮಾಡ ಬೇಡಿ . ಬಸವಣ್ಣ ಇಂದು ಒಂದು ಮತ ಧರ್ಮಕ್ಕೆ ಸೀಮಿತವಾಗಿಲ್ಲ ವಿಶ್ವ ವ್ಯಾಪಿಯಾಗಿದ್ದಾನೆ. ಲಿಂಗಾಯತರ ಬೇಡಿಕೆಗಳನ್ನು ಹತ್ತಿಕ್ಕುವ ಸಂಘ ಪರಿವಾರದವರ ಕುತಂತ್ರಕ್ಕೆ ಎಂದೂ ಯಶವು ದೊರೆಯದು.
ಲಿಂಗಾಯತ ಒಂದು ಸ್ವತಂತ್ರ ಧರ್ಮ ಅದರ ಸ್ಥಾನಮಾನ ಘನತೆ ಗೌರವವನ್ನು ಕುಂದಿಸುವ ಕಾರ್ಯವನ್ನು ಜವಾಬ್ದಾರಿಯುತರು ಮಾಡಬಾರದು .
–ಡಾ ಶಶಿಕಾಂತ ಪಟ್ಟಣ ‘ಅಧ್ಯಕ್ಷರು
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಬೆಳಗಾವಿ
ನಿಜ ಸರ್ ಬಸವಣ್ಣ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹುಟ್ಟಿದ್ದರೆ ಜಗತ್ತೇ ಲಿಂಗಮಯ ಆಗುತ್ತಿತ್ತು .ಅಲ್ಲದೆ ಅವರಿದ್ದ ಕಾಲಕ್ಕೆ ಸರಿಯಾದ ರಾಜಾಶ್ರಯ ಸಿಕ್ಕಿದ್ದೇ ಆದರೆ ಪ್ರಚಾರಕ್ಕೆ ಬರುತ್ತಿದ್ದರು. ಈಗ 800 ವರ್ಷಗಳ ಮೇಲೆ ಬಸವಣ್ಣ ಪ್ರಚಾರಕ್ಕೆ ಬಂದಿದ್ದಾರೆ. ಅದಕ್ಕೆ ಈ ಜನ ಎಲ್ಲಿ ಜಗತ್ತು ಬಸವಮಯ ಆಗುತ್ತೆ ಅನ್ನೋ ಭಯ ಇರಬೇಕು.
ಜಗತ್ತಿಗೆ ಪ್ರ ಪ್ರಥಮವಾಗಿ ಪ್ರಜಾಪ್ರಭುತ್ವವನ್ನು ತಂದವನು ಬಸವಣ್ಣ, ಅನ್ನುವುದನ್ನು ಮುಕ್ತವಾಗಿ ಹೇಳಲು ಹಿಂಜರಿಕೆ, ಹಾಗೆ ಬಸವಣ್ಣನನ್ನು ಅಪ್ಪಿಕೊಳ್ಳಲು ಭಯ ಇರಬಹುದೇನೋ.