ಬಸವ ಭಕ್ತರೇ
ಬಸವ ಭಕ್ತರೇ
ಎದ್ದು ನಿಲ್ಲಿ
ಗುದ್ದ ಬನ್ನಿ
ಬಸವ ದ್ರೋಹಿಗಳ
ವಚನ ಪಚನವಾಗದೆ
ತಿರುಚಿ ಬರೆಯುವ
ಕ್ರೂರ ಮೃಗಗಳ
ತಿವಿಯ ಬನ್ನಿ
ಕುಕ್ಕ ಬನ್ನಿ
ಬುದ್ಧ ಬಸವರ
ಕೊಂದ ಜನರ
ಮಟ್ಟ ಹಾಕ ಬನ್ನಿರೀ
ಮಲಗ ಬೇಡಿ
ಬಸವ ಭಕ್ತರೇ
ಕ್ರಾಂತಿ ಸೂರ್ಯನ
ಉದಯ ಸಮಯದಿ
ಕದ್ದು ಒಯ್ದು
ತಿದ್ದಿ ಬರೆವರು
ಹೆಸರು ವಚನ ದರ್ಶನ
ಅಂದು ಶರಣರ ಕೊಂದವರೇ
ಇಂದು ವಚನ
ಕೊಲ್ಲುತಿಹರು
ಗಟ್ಟಿ ಕೂಗಿನ
ಶಬ್ದ ಮೊಳಗಲಿ
ಮತ್ತೆ ಬಸವ ಹುಟ್ಟಿ ಬರಲಿ
-ಡಾ ಶಶಿಕಾಂತ ಪಟ್ಟಣ ರಾಮದುರ್ಗ
(ವಚನ ದರ್ಶನ ಎಂಬ ಪೂರ್ವ ನಿಯೋಜಿತ ಪೂರ್ವಾಗ್ರಹ ಪೀಡಿತ ಪುಸ್ತಕದ ವಿರುದ್ಧ ಎಲ್ಲ ಕನ್ನಡಿಗರು ಬಸವ ಭಕ್ತರು ಸಿಡಿದೇಳಬೇಕು )