ಒಂದಯ ಬಗೆಹರಿಯದ ಸಮಸ್ಯೆ

ಒಂದಯ ಬಗೆಹರಿಯದ ಸಮಸ್ಯೆ

ಜನ ಯಾವ ಯಾವುದರದೋ ಹಿಂದೆ ಬಿದ್ದಂತೆ ಕಾಣಿಸುತ್ತಾರೆ
ನಿಜವೆಂದರೆ ಆಳದಲ್ಲಿ ಎಲ್ಲರಿಗೂ ಅವಳದೊಂದು ನಗು ಬೇಕಿದೆ
ಕಾಡದಾರಿಯಲ್ಲಿ ಒಬ್ಬರೇ ನಡೆಯುವಾಗ ಬೆಳಕೊಂದು ಅಪ್ಪಿದಂತೆ ಅವಳದೊಂದು ಕನಸು ಬೇಕಿದೆ
ಅವಳ ಪ್ರೀತಿ ಅಪ್ರೀತಿಯ ತಕರಾರುಗಳಿಗೆಲ್ಲ ನಾನು ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ
ನ್ಯಾಯ ತೀರ್ಮಾನ ಮಾಡಲು ಶಿಕ್ಷೆ ವಿಧಿಸಲು ಅವಳಿಗೆ ಮನಸಿಲ್ಲ
ವಿನಾಕಾರಣ ಬಂದಪ್ಪಿಕೊಳ್ಳಲೂ ಅವಳು ತಯಾರಿಲ್ಲ

ಜಗದ ಯಾವ ಕೋರ್ಟಿನಲ್ಲಿ ಫಿರ್ಯಾದು ಕೊಟ್ಟರೂ
ಅವಳನ್ನ ಬಂಧಿಸಿ ನನ್ನ ಮಡಿಲಿಗೆ ಒಪ್ಪಿಸುವುವವರಿಲ್ಲ ನನ್ನ ಕಂಪ್ಲೇಂಟು ಸ್ವೀಕರಿಸುವರಿಲ್ಲ
ಇದು ಬಗೆಹರಿಯದ ಸಮಸ್ಯೆ

ಮತ್ತು ಈ ಸಮಸ್ಯೆಯಲ್ಲೇ
ಜಗದ ಎಷ್ಟು ಹೃದಯಗಳು ಬಳಲುತ್ತಿವೆ ಸುಖಿಸುತ್ತಿವೆ

ವೀರಣ್ಣ ಮಡಿವಾಳರ
ಕಲ್ಲಿನ_ತೋಟದ_ಚಿಟ್ಟೆ

Don`t copy text!