ಗಜಲ್
ಪ್ರಣಯದ ದುಂಬಿಯಾಗಿ ಚರಣ ಕಮಲದಲ್ಲಿ ಇರುವಾಸೆ
ಮಧುಸಾರ ಹೀರುತ ಹೃದಯ ಮಂದಿರದಲ್ಲಿ ಇರುವಾಸೆ
ಜಗದ ಕುಸುಮ ತೋಟದಿ ವಾಸಿಸುತಿವೆ ಹಲವು ಜೀವಿಗಳು
ಜೇನು ಗೂಡನು ಕಟ್ಟುತಾ ಹೂ ಬನದಲ್ಲಿ ಇರುವಾಸೆ
ಯಮುನೆಯ ತಟದಿ ಕೊಳಲ ನಾದ ಬಯಸಿ ಕಾಯುತಿದೆ ಉಸಿರು
ಮಾಧವನ ಮುರಳಿಯ ಮೋಹನ ರಾಗದಲ್ಲಿ ಇರುವಾಸೆ
ಅವನ ಹಂಬಲಿಸಿ ಹುಡುಕುತ ಅಲೆಯುತಿದೆ ಅಕ್ಕನ ಆತ್ಮ
ನಿರಾಕಾರನನು ಸೇರಲು ಧ್ಯಾನದಲ್ಲಿ ಇರುವಾಸೆ
ಮೂಢ ನಂಬಿಕೆಯ ಅಳಿಸಲು ಸಂತರು ಹರಡಿದರು ಬೆಳಕು
“ಪ್ರಭೆ”.ಗೆ ಶರಣರ ವಚನ ಬಯಲ ರೂಪದಲ್ಲಿ ಇರುವಾಸೆ
–ಪ್ರಭಾವತಿ ಎಸ್ ದೇಸಾಯಿ
ವಿಜಯಪುರ
ಮೊ. ೮೪೦೮೮ ೫೪೧೦೮
Nice lines