ವಿಜಯ ಸ್ಮರಣೆಯ ಹಬ್ಬವಿದು. ಬದಲಾದ ಕಾಲಘಟ್ಟದ ಈ ಆಚರಣೆಯ ವ್ಯಾಖ್ಯಾನ ಹೇಗಿರಬೇಕು?

ವಿಜಯ ಸ್ಮರಣೆಯ ಹಬ್ಬವಿದು. ಬದಲಾದ ಕಾಲಘಟ್ಟದ ಈ ಆಚರಣೆಯ ವ್ಯಾಖ್ಯಾನ ಹೇಗಿರಬೇಕು?

ಈ ದಸರಾ ಹಬ್ಬದ ಪರಿಕರವೆಂದರೆ ಆಯುಧ. ಗುರಿ ಎಂದರೆ ವಿಜಯ. ಸ್ಫೂರ್ತಿ ಎಂದರೆ ಮನೋಸಿದ್ಧತೆ. ಸಾಧಿಸುವ ಬಗೆ ಎಂದರೆ ಹೋರಾಟ. ನಡೆಸುವ ರಣಾಂಗಣ ನಮ್ಮ ಜೀವನದ ಕಣ. ಈ ಬದುಕಿನ ಕದನದಲ್ಲಿನ ಪಾರಮ್ಯ ಗಳಿಸಬೇಕಾದ ಕ್ಚೇತ್ರಗಳೆಂದರೆ ನಮ್ಮ‌ದೇ ಜೀವನದ ಅಂತರಂಗ ಮತ್ತು ಬಹಿರಂಗಗಳು.

ಹಾಗಾಗಿ ಆಯುಧ ಎಂಬುದು ನಮ್ಮ ಅಂತರಂಗದ ದುರ್ಗುಣಗಳನ್ನು ಗೆಲ್ಲುವ ಪರಿಕರವಾಗಿ ಬಳಸಿಕೊಳ್ಳಬೇಕು. ವಿಜಯ ಎಂಬುದು ಬಹಿರಂಗ ಜೀವನದ ಮೇಲೆ ಸಾಧಿಸುವ ಉನ್ನತಿ. ಅದೇ ವಿಜಯ.
ಬನ್ನಿ ಎಂಬುದು ಆ ಮೂಲಕ ಸಾಧಿಸುವ ವಿಜಯೋತ್ಸವ!

ಇಂತಹ ನಮ್ಮದೇ ವಿಜಯದ ಆಚರಿಸುವಾಗ, ನಿಮ್ಮ ಜೀವನವು ಶಾಂತಿ, ಸಂತೋಷ ಮತ್ತು ಯಶಸ್ಸಿನಿಂದ ತುಂಬಿರಲಿ. ನಿಮ್ಮ ಕನಸುಗಳನ್ನು ಬೆನ್ನಟ್ಟುವ ಜಯಿಸುವ ಸಾಮರ್ಥ್ಯ ನಿಮ್ಮದಾಗಲಿ ಎಂಬ ಆಶಯದೊಂದಿಗೆ

ದಸರಾ ಹಬ್ಬದ ಶುಭ ಹಾರೈಕೆಗಳು.

 

 

 

 

 

 

 

 

 

ಎ.ಟಿ‌. ಪಾಟಿಲ್ , ದಿಕ್ಸೂಚಿ

Don`t copy text!