ಮಹಾಗೌರೀ

ಮಹಾಗೌರೀ

 

 

 

 

 

 

 

 

 

ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿಃ|
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ||

ದುರ್ಗಾದೇವಿಯ ಇನ್ನೊಂದು ಹೆಸರು ಮಹಾಗೌರಿ ಎಂದಾಗಿದೆ. ಎಂಟನೇ ದಿನವಾದ ಅಷ್ಟಮಿಯಂದು ಪೂಜೆ ಗೊಳ್ಳುವ ದೇವಿ ಮಹಾಗೌರಿಯಾಗಿರುತ್ತಾಳೆ.ಇವಳು ಸಂಪೂರ್ಣ ಗೌರ ವರ್ಣವದವಳಾಗಿರುವುದರಿಂದ ಮಹಾಗೌರಿ. ಇವಳ ವಾಹನ ಬಿಳಿ ಆನೆ ಅಥವಾ ನಂದಿಯಾಗಿರುತ್ತದೆ. ನಂದಿ ಅಥವಾ ಆನೆ ಎರಡೂ ಬಿಳಿಯದ್ದೇ ಆಗಿರುತ್ತದೆ. ಚತುರ್ಭುಜೆ ಯಾಗಿದ್ದು ತ್ರಿಶೂಲ ಮತ್ತು ಡಮರು ಹಿಡಿದಿರುವ ಇವಳಿಗೆ ನವಿಲು ಗರಿಯ ಹಸಿರು ಬಣ್ಣ ಪ್ರಿಯವಾದ ಬಣ್ಣ ವಾಗಿರುತ್ತದೆ. ಭಕ್ತರು ದೇವಿಗೆ ತೆಂಗಿನಕಾಯಿ ನಿವೇದಿಸುತ್ತಾರೆ. ದೇವಿಗೆ ಜಾಜಿ ಅಥವಾ ರಾತ್ರಿಯಲ್ಲಿ ಅರಳುವ ಮಲ್ಲಿಗೆ ಬಹಳ ಪ್ರಿಯವಾದ ಹೂವಾಗಿದೆ.

ಪುರಾಣದ ಕತೆಯ ಪ್ರಕಾರ ಮಹಾಗೌರಿಯು ಶಿವನನ್ನು ವರಿಸುವ ಸಲುವಾಗಿ ಕಠೋರ ತಪಸ್ಸು ಆಚರಿಸಿ ಅವಳ ಕಾಠಿಣ್ಯದ ವ್ರತದಿಂದ ಕಪ್ಪಾಗಿದ್ದಳು ಅವಳನ್ನು ಗಂಗೆಯಿಂದ ತೊಳೆದನಂತರ ಬೆಳ್ಳಗೆ ಆದಳು ಎಂದು ಹೇಳುತ್ತಾರೆ. ಮಹಾಗೌರಿಯ ಉಪಾಸನೆ ಬಹಳ ಶ್ರೇಷ್ಠ ಹಾಗೂ ಶೀಘ್ರ ಫಲದಾಯಕವಾಗಿದೆ. ದುಷ್ಟರ ಸಂಹಾರ ಮತ್ತು ಭಕ್ತರ ಉದ್ಧಾರಕ್ಕೇಂದೆ ಅವತಾರ ಮಡಿದ ದೇವಿಯು ಮುಂಬರುವ ಆಪತ್ತುಗಳನ್ನೂ ಪರಿಹರಿಸುವವಳಾಗಿದ್ದಾಳೆ.

ಇನ್ನೊಂದು ಕಥೆಯ ಪ್ರಕಾರ ಶುಂಭ ನಿಶುಂಭರು ಕನ್ಯೆಯಿಂದ ಮಾತ್ರ ಹತರಾಗುವವರಾಗಿದ್ದರು ಮತ್ತು ಪಾರ್ವತಿಯು ತನ್ನ ಮದುವೆಯ ಮೊದಲು ಇವರಿಬ್ಬರನ್ನು ಸಂಹರಿಸಿದ್ದಳು. ಕಪ್ಪಾಗಿರುವ ಕಾರಣ ಶಿವನು ಪದೇ ಪದೇ ಪಾರ್ವತಿಯನ್ನು ಕಾಳಿ ಅಂದರೆ ಕಪ್ಪಾಗಿರುವವಳು ಎಂಧು ಕರೆದ ಕಾರಣ ಬ್ರಹ್ಮದೇವರ ಕುರಿತು ತಪಸ್ಸನ್ನು ಆಚರಿಸಿ ಬೆಳ್ಳಗಾಗುವ ವರವನ್ನು ಬೇಡಿದಳು ಮತ್ತು ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಅವಳ ಬಣ್ಣವು ಬೆಳ್ಳಗೆ ಆಗುವದೆಂಬ ವರವನ್ನು ಪಡೆದಳು ಗೌರವರ್ಣವನ್ನು ಪಡೆದು ಸರ್ವಾಲಂಕಾರ ಭೂಷಿತೆಯಾದ ಮಹಾಗೌರಿಯಾದಳು.

ಮಹಾಗೌರಿಯು ಶುದ್ಧತೆಯ ಪ್ರತೀಕವಾಗಿದ್ದಾಳೆ. ಅವಳು ತನ್ನ ಮಕ್ಕಳ ಕರ್ಮಗಳು ಮತ್ತು ಪಾಪಗಳನ್ನು ತೊಡೆದು ಹಾಕಿ ಅವರ ಇಷ್ಟಾರ್ಥಗಳನ್ನು ನೀಡುವ ದೇವಿಯಾಗಿದ್ದಾಳೆ. ಇವಳ ಆರಾಧನೆಯಿಂದ ಸರ್ವ ಪಾಪಗಳು ನಾಶವಾಗಿ ಉತ್ತಮ ಭಕ್ತಿ ಮಾರ್ಗದಲ್ಲಿ ನಡೆದು ಮುಕ್ತಿಯನ್ನು ಪಡೆಯುತ್ತೇವೆ.

ಮಹಾಗೌರಿಯನ್ನು ಪಠಿಸುವ ಮಂತ್ರ “ಓಂ ದೇವಿ ಮಹಾಗೌರೈ ನಮಃ” ಎಂದಾಗಿದ್ದು ಅವಳ ” ಯಾ ದೇವಿ ಸರ್ವ ಭೂತೇಷು ಮಾ ಮಹಾಗೌರಿ ರೂಪೇಣ ಸಂಸ್ಥಿತಾ, ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ “ಎಂದು ಸ್ತುತಿಸಬೇಕು.

 

 

 

 

 

 

 

 

 

ಮಾಧುರಿ ದೇಶಪಾಂಡೆ, ಬೆಂಗಳೂರು

Don`t copy text!