ಗ್ರಾ.ಪಂ ಚುನಾವಣೆಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತುದಾರ ಸ್ಪರ್ಧೆ

ಮಹಿಬೂಬ ಮದ್ಲಾಪುರ
ಗ್ರಾ.ಪಂ ಚುನಾವಣೆಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತುದಾರ ಸ್ಪರ್ಧೆ

ವರದಿ – ಬಸವರಾಜ ಭೋಗಾವತಿ
e- ಸುದ್ದಿ,  ಮಾನ್ವಿ

ಮಾನ್ವಿ ಪಟ್ಟಣದ ಟಾರ್ಗೆಟ್ ಕರಿಯರ್ ಅಕಾಡೆಮಿಯ ಸಂಸ್ಥಾಪಕ ಮಹಿಬೂಬ ಮದ್ಲಾಪುರ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಮದ್ಲಾಪುರ ಗ್ರಾಮದ 2ನೇ ವಾರ್ಡಿನಿಂದ ಅಭ್ಯರ್ಥಿಯಾಗಿ ಅವರು ಸ್ಪರ್ಧಿಸಿದ್ದಾರೆ.
ಎಂ.ಎ, ಬಿ.ಇಡಿ ಪದವೀಧರರಾಗಿರುವ ಅವರು ಸರ್ಕಾರಿ ಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತರಬೇತಿ ನೀಡಲು ಕಳೆದ ವರ್ಷ ಮಾನ್ವಿ ಪಟ್ಟಣದಲ್ಲಿ ಟಾರ್ಗೆಟ್ ಕರಿಯರ್ ಅಕಾಡೆಮಿ ಆರಂಭಿಸಿದ್ದಾರೆ.
ಮದ್ಲಾಪುರ ಗ್ರಾಮದ ವಂದೇ ಮಾತರಂ ಯುವಕ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಭಾರತ ಸೇವಾದಳ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಗಳ ತಾಲ್ಲೂಕು ಕಾರ್ಯದರ್ಶಿಯಾಗಿ ಅವರು ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ನೇಹಿತರ ತಂಡದೊಂದಿಗೆ ಮೂರು ವಾರ್ಡ್‍ಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ.


‘ ಸೇವಾ ಮನೋಭಾವ ಹಾಗೂ ಗ್ರಾಮದ ಅಭಿವೃದ್ಧಿಪರ ಕಾಳಜಿಯಿಂದ ಚುನಾವಣೆಗೆ ಸ್ಪರ್ಧಿಸಿರುವೆ. ಗ್ರಾಮಸ್ಥರು ಖಂಡಿತವಾಗಿ ಬೆಂಬಲಿಸುವ ವಿಶ್ವಾಸ ಇದೆ. ವಿದ್ಯಾವಂತ ಯುವಕರು ರಾಜಕೀಯ ಅಧಿಕಾರ ಪಡೆದರೆ ಮಾತ್ರ ವ್ಯವಸ್ಥೆಯ ಸುಧಾರಣೆ ಸಾಧ್ಯ’ ಎಂಬುದು ಮಹಿಬೂಬ ಮದ್ಲಾಪುರ ಅಭಿಪ್ರಾಯ.

Don`t copy text!