ಕನ್ನಡ ರಥ ಮಸ್ಕಿಗೆ ರಾತ್ರಿ ಅಗಮನ, ತಾಲ್ಲೂಕು ಆಡಳಿತ ಮತ್ತು ಕಸಾಪ ಸ್ವಾಗತ
e- ಸುದ್ದಿ ಮಸ್ಕಿ
೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಕನ್ನಡ ಜ್ಯೋತಿ ರಥ ಯಾತ್ರೆ ಮಸ್ಕಿ ಪಟ್ಟಣಕ್ಕೆ ರಾತ್ರಿ 9ಗಂಟೆಗೆ ಆಗಮಿಸಿತು.
ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳ ಸಹಯೋಗದಲ್ಲಿ ಗುರುವಾರ ಅದ್ದೂರಿಯಾಗಿ ಸ್ವಾಗತ ಮಾಡಿಕೊಳ್ಳಲಾಯಿತು.
ಮಸ್ಕಿ ಪಟ್ಟಣದ ಗಾಂಧಿ ವೃತ್ತದ ಬಳಿ ಕನ್ನಡ ಜ್ಯೋತಿ ರಥಯಾತ್ರೆಯನ್ನು ಸ್ವಾಗತ ಮಾಡಿಕೊಂಡು ನಂತರ ಮಾತನಾಡಿದ ತಹಸಿಲ್ದಾರ್ ಡಾ. ಮಲ್ಲಪ್ಪ ಕೆ ಅವರು ರಾಜ್ಯದ ನಾಡು ನುಡಿ ಜಲ ಉಳಿಸುವಲ್ಲಿ ಪ್ರತಿಯೊಬ್ಬರು ಕಟ್ಟಿಬದ್ಧರಾಗಿ ನಿಲ್ಲಬೇಕುಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಹಾಂತೇಶ ಮಸ್ಕಿ ಹಾಗೂ ಮಸ್ಕಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾಂತೇಶ ಬ್ಯಾಳಿ ಮಾತನಾಡಿದರು.
ನಂತರ ಕನ್ನಡ ಜ್ಯೋತಿ ರಥಯಾತ್ರೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನಂತರ ಕನ್ನಡ ಜ್ಯೋತಿ ರಥಯಾತ್ರೆಯನ್ನು ಸಿಂಧನೂರಿಗೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ನರಸರೆಡ್ಡಿ. ತಾಲೂಕು ಪಂಚಾಯಿತಿ ಇಒ ಅಮರೇಶ್ ಯಾದವ್, ಪಿಎಸ್ಐ ಮುದ್ದು ರಂಗಸ್ವಾಮಿ, ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಘನಮಠದಯ್ಯ ಸಾಲಿಮಠ ಸ್ವಾಮಿ, ಮಹೇಶ ಶಟ್ಟರ್ , ಪರಶುರಾಮ್ ಕೋಡಗುಂಟಿ,
ಮೌನೇಶ್ ನಾಯಕ್ , ಕರವೇ ಅಧ್ಯಕ್ಷರಾದ ದುರ್ಗ ರಾಜ್ ವಟಗಲ್ ಆರ್ ಕೆ ನಾಯಕ್ , ಕಿರಣ್ ಮುರಾರಿ, ಸಿದ್ದು ಮುರಾರಿ, ವಿಜಯ ಬಡಿಗೇರ್ ಹಾಗೂ ಇತರರು ಇದ್ದರು.