ಅತ್ಯಂತ ಅಪಾಯಕಾರಿ ಮೋಹಕ ವಿಷ

ಅತ್ಯಂತ ಅಪಾಯಕಾರಿ ಮೋಹಕ ವಿಷ

 

 

 

 

 

 

 

 

 

 

 

ಅವರೀಗ ತಾನೆ ಮಿಲಿಟರಿಯಿಂದ ಬಂದಂತಿದ್ದರು. ತಮ್ಮ ಆಪ್ತನೊಂದಿಗೆ ತಮ್ಮ ಮಗಳ ಬಗ್ಗೆ ಮಾತು ನಡೆದಿತ್ತು.

ಮಿಲಿಟರಿಯವರು’ ‘ಮಗಳು ರಾತ್ರಿ ನಿದ್ದೆ ಮಾಡಲ್ಲ, ತುಂಬಾ ಕಾಡತಾಳೆ’

ಆಪ್ತ: ಹೌದು ಪುಟ್ಟ ಮಕ್ಕಳು ತುಂಬಾ ಹಠ ಮಾಡ್ತವೆ

ನಾನು: (ಸುಮ್ಮನಿರಲಾರದೆ… ಕುತೂಹಲದಿಂದ) ಮಗುವಿಗೆ ವಯಸ್ಸೆಷ್ಟು ಸರ್?

ಮಿಲಿಟರಿಯವರು: ಹದಿನೈದು ತಿಂಗಳು

ನಾನು: ಮಗು ಎಷ್ಟೇ ಹಠ ಮಾಡಲಿ, ಆದರೆ ಮೊಬೈಲ್ ಖಯಾಲಿ ಹಚ್ಚಬೇಡಿ

ಮಿಲಿಟರಿಯವರು: (ಸಿಟ್ಟಿನಿಂದ) ಮತ್ತೇನ್ ಮಾಡ್ಬೇಕ್ರಿ…. ಒಂದು ವಾರ ಮೊಬೈಲ್ ದಿಂದ ದೂರ ಇಟ್ಟಿದ್ದಕ್ಕ ಮಗು ಏನನ್ನೂ ತಿನ್ನಲಿಲ್ಲ… ಮೊಬೈಲ್ ಇದ್ರ ಮಾತ್ರ ಊಟ ಮಾಡತಾಳ, ಅಷ್ಟು ಇಷ್ಟು ನಿದ್ದಿ ಮಾಡತಾಳ…. (ಗದರಿದರು)

ನಾನು:….

ಅಲ್ಲಿಂದ ಸುಮ್ಮನೆ ಕಾಲ್ಕಿತ್ತೆ. ಹುಟ್ಟಿದ ಕೂಸಿಗೆ ಮೊಬೈಲ್ ರೂಢಿ ಮಾಡಿದ್ದು ತಪ್ಪು… ಮೊಬೈಲ್ ಗುಟ್ಟಿದ ಕೂಸಿನಿಂದ ಹಿಡಿದು ಹಣ್ಣು ಹಣ್ಣು ಮುದುಕರನ್ನೂ ಆವರಿಸಿಕೊಂಡಿರುವ ಮೋಹಕ ವಿಷ… ಎಂದೆಲ್ಲ ಹೇಳಬೇಕೆಂದುಕೊಂಡೆ… ಅಲ್ಲಿ ಕೇಳುವವರಾರೂ ಇರಲಿಲ್ಲ…

ಅದಕ್ಕೆ … ಮನಸಿನಲ್ಲಿ ಗೊಣಗಿಕೊಂಡು ಸುಮ್ಮನೆ ಬಂದೆ…

ಮೊನ್ನೆ ಹಾಸ್ಪಿಟಲ್ ಒಂದಕ್ಕೆ ಹೋಗಿದ್ದೆ… ಅಲ್ಲಿ ಹತ್ತಾರು ಮಕ್ಕಳಿದ್ದರು… ಎಲ್ಲರೂ ವಿಚಿತ್ರವಾಗಿ ಆಡುತ್ತಿದ್ದರು… ಅಲ್ಲಿನ ಡಾಕ್ಟರ್ ನನ್ನ ಪರಿಚಯಿಸಿಕೊಂಡು…

ಡಾಕ್ಟರ್: ನೋಡಿ ಸರ್, ಈ ಮಕ್ಕಳೆಲ್ಲ ಮೊಬೈಲ್ ದಾಳಿಯಿಂದ ಅರೆಹುಚ್ಚರಾಗಿದ್ದಾರೆ…. ಕೈ ಮುರಿದರೆ, ಕಾಲು ಮುರಿದರೆ ತಲೆ ಒಡೆದರೂ ಚಿಕಿತ್ಸೆ ಕೊಡಬಹುದು… ಆದರೆ ಈ ತಲೆ ಕೆಟ್ಟರೆ ಮನಸ್ಸು ಛಿದ್ರಗೊಂಡರೆ ಚಿಕಿತ್ಸೆ ಬಲುಕಷ್ಟ…

ಹಾದಿಯಲ್ಲಿ ಬರುವಾಗ ಇದೆಲ್ಲ ನೆನಪಾಯಿತು….

ಗುಟ್ಕಾ, ಪಾನ್ ಮಸಾಲಾ, ಸಿಗರೇಟು, ಮದ್ಯ ಇನ್ನುಳಿದ ಎಲ್ಲ ವಿಷಗಳಿಗಿಂತ ಮೊಬೈಲ್ ಅತ್ಯಂತ ಅಪಾಯಕಾರಿಯಾದ ಮೋಹಕ ವಿಷ…

ನನಗೆ ನಾನೇ ಹೇಳಿಕೊಳ್ಳುತ್ತಾ …. ನಡೆದೆ….

 

 

 

 

 

 

 

 

 

ವೀರಣ್ಣ ಮಡಿವಾಳರ

Don`t copy text!