ಬೆಳಗಾವಿ ಜಿಲ್ಲೆಯ ರೈಲು ಮಾರ್ಗ ಆರಂಭಿಸಿ

ಸನ್ಮಾನ್ಯ ಶ್ರೀ ವಿ ಸೋಮಣ್ಣನವರಿಗೆ
ಭಾರತ ಸರಕಾರದ ರಾಜ್ಯ ರೈಲ್ವೆ ಮಂತ್ರಿಗಳು
ನವ ದೆಹಲಿ

ವಿಷಯ -ಬೆಳಗಾವಿ ಜಿಲ್ಲೆಯ ರೈಲು ಮಾರ್ಗ ಆರಂಭಿಸುವ ಕುರಿತು

ಮಾನ್ಯರೆ

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕು ಸ್ವಾತಂತ್ರ್ಯ ಹೋರಾಟದ ಮಂಚೂಣಿಯಲ್ಲಿ ಅಗ್ರ ಪತ್ರ ವಹಿಸಿದ್ದು ತಮ್ಮ ಗಮನಕ್ಕೆ ತರುತ್ತಾ. ಕೇಂದ್ರದಲ್ಲಿ ರಾಮದುರ್ಗ ಸಂಸ್ಥಾನವೇ ಮೊದಲು ವಿಲೀನಗೊಂಡಿದ್ದು ,ಸಂಸ್ಥಾನಗಳ ವಿಲೀನಕಾರಣ 17 ವರ್ಷ ಪೂರ್ವದಲ್ಲಿ ಇಂತಹ ಹೋರಾಟವು ನಡೆದದ್ದು ತಮ್ಮ ಗಮನಕ್ಕೆ ತರುತ್ತೇನೆ,ಕರ್ನಾಟಕ ಏಕೀಕರಣ ಬಳ್ಳಾರಿ ಸಂರಕ್ಷಣೆಗೆ ಡಾ ಮಹದೇವಪ್ಪ ಪಟ್ಟಣ ಅವರ ಹೋರಾಟ, ಸಂವಿಧಾನ ರಚನಾ ಸಮಿತಿಯಲ್ಲಿ ನ್ಯಾಯವಾದಿ ಶ್ರೀ ಬಿ ಏನ್ ಮುನವಳ್ಳಿ ಅವರು ಇದ್ದದ್ದು ಒಂದು ಐತಿಹಾಸಿಕ ದಾಖಲೆಯಾಗಿದೆ.
ಬಾಗಲಕೋಟೆ ಲೋಕಾಪುರದ ಪ್ರಾಯೋಗಿಕ ರೈಲು ಇತ್ತೀಚಿಗೆ ನಡೆದಿದೆಮುಂದೆ ಅದು ಮುಧೋಳ ಜಮಖಂಡಿ ಕುಡಚಿ ಕೂಡುವ ಕಾರ್ಯ ನಡೆಯ ಬೇಕಿದೆ. ಲೋಕಾಪುರದಿಂದ ರಾಮದುರ್ಗ 30 ಕಿಲೋಮೀಟರು ಅಂತರದಲ್ಲಿದ್ದು ಅಲ್ಲಿಂದ ಸವದತ್ತಿ ಮಾರ್ಗವಾಗಿ ಧಾರವಾಡ ತಲುಪುವ ರೈಲು ಮಾರ್ಗಕ್ಕಾಗಿ ಸಮಸ್ತ ರಾಮದುರ್ಗ ತಾಲೂಕಿನ ಕಾರ್ಮಿಕರು ರೈತರು ವ್ಯಾಪಾರಸ್ಥರು ಸಾಮಾಜಿಕ ಕಾರ್ಯಕ್ರತರು ಆಗ್ರಹಿಸುತ್ತಿದ್ದಾರೆ. ಕರ್ನಾಟಕದ ರೈಲು ಸೌಲಭ್ಯ ವಂಚಿತ ತಾಲೂಕ ಕೇಂದ್ರ ರಾಮದುರ್ಗ.
ಕಳೆದ ನಾಲ್ಕು ದಶಕಗಳಿಂದ ರಾಮದುರ್ಗದ ಜನತೆಯು ರೈಲು ಮಾರ್ಗಕ್ಕೆ ಹೋರಾಟ ನಡೆಸುತ್ತಿದ್ದಾರೆ.

ರಾಮದುರ್ಗ ತಾಲೂಕಿನಲ್ಲಿ ಹನ್ನೆರಡನೆಯ ಶತಮಾನದ ಮಡಿವಾಳ ಮಾಚಿದೇವ , ಆಪ್ತಚರ ಮಲ್ಲಿಕಾರ್ಜುನ ,ಮುನಿ ಗುಮ್ಮಟ ದೇವರ ಸಮಾಧಿಗಳಿವೆ ಶಬರಿ ಕೊಳ್ಳ ,ಮೇಗುಂಡ ಕೊಳ್ಳ ,ಗೊಡಚಿ ,ಗೊಣ್ಣಾಗರ ಚಿದಂಬರ ಯಜ್ಞ ಸ್ಥಳ, ರಾಮದುರ್ಗದಲ್ಲಿರು ಶಿವನ ಮೂರ್ತಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಸ್ಥಳವಾಗಿವೆ.

ಇಡೀ ಕರ್ನಾಟಕದಲ್ಲಿ ಹೆಚ್ಚು ಸೇಂಗಾ ಕಬ್ಬು ಹತ್ತಿ ಬೆಳೆಯುವ ತಾಲೂಕಾಗಿದ್ದು ಸರಕು ಸಾಗಾಣಿಕೆ ಪ್ರಯಾಣ ಮುಂತಾದ ಸೌಕರ್ಯಕ್ಕಾಗಿ ತಾವು ಲೋಕಾಪುರ ಸವದತ್ತಿ ಮಾರ್ಗವಾಗಿ ಧಾರವಾಡ ತಲುಪುವ ರೈಲು ಮಾರ್ಗವನ್ನು ಆರಂಭಿಸಲು ಇದಕ್ಕೆ ಬೇಕಾದ ನೀಲನಕ್ಷೆಗೆ ಒಪ್ಪಿಗೆ ನೀಡಲು ತಮ್ಮಲ್ಲಿ ಕಳಕಳಿಯ ಮನವಿ.
ರಾಮದುರ್ಗ ರೈಲ್ವೆ ಬೇಡಿಕೆ ಇದು ಪಕ್ಷಾತೀತವಾದ ಹೋರಾಟ ಮತ್ತು ನ್ಯಾಯ ಸಮ್ಮತವಾಗಿದೆ . ಕಾರಣ ಈ ಕೂಡಲೇ ತಾವು ಸ್ಪಂದಿಸಿ ನಮ್ಮ ರೈಲು ಮಾರ್ಗದ ಬೇಡಿಕೆಯನ್ನು ಈಡೇರಿಸಿ ಮಂಜೂರು ಮಾಡಲು ಸಮಸ್ತ ರಾಮದುರ್ಗ ಜನತೆಯ ಪರವಾಗಿ ಪ್ರಾರ್ಥನೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!