ಕಟ್ಟಲೊಲ್ಲೆ ಗುಡಿ ಗೋಪುರ

ಕಟ್ಟಲೊಲ್ಲೆ ಗುಡಿ ಗೋಪುರ

ಕಟ್ಟಲೊಲ್ಲೆ ಗುಡಿ ಗೋಪುರ
ಬೇಡ ನಮಗೆ ಮಠ ಮಂದಿರ
ಏಕೆ ಬೇಕು ಚರ್ಚು ಮಸೀದೆ?
ಗೋಜು ಬೇಡ ಗುರುದ್ವಾರ
ಜೈನ ಬಸ್ತಿ , ಬುದ್ಧ ವಿಹಾರ
ಇಲ್ಲದಿರಲಿ ಗೋರಿ ಸಮಾಧಿ
ಇರಲು ಬೇಕು ಮನೆಯ ಸೂರು
ಹಸಿದ ಹೊಟ್ಟೆಗೆ ಅನ್ನ ಚೂರು
ಬೇಡ ಕಲ್ಲು ಕಂಚು ಮೂರ್ತಿ
ಇರಲಿ ಮನುಜರ ಪ್ರೀತಿಯು
ಅಪ್ಪ ಬಸವನ ಮಾತು ನೆನಪು
ಅಳಿದು ಹೋಯಿತು ಸ್ಥಾವರ
ಉಳಿದು ಬೆಳೆವುದು ಜಂಗಮ

-ಡಾ ಶಶಿಕಾಂತ ಪಟ್ಟಣ -ಪೂನಾ

Don`t copy text!