ಗ್ರಾಪಂ. ಚುನಾವಣೆ ಬಹಿಷ್ಕಾರ, ಭಣ ಗುಡುತ್ತಲಿರುವ ಪಂಚಾಯಿತಿ ಕಚೇರಿ

 

e-ಸುದ್ದಿ, ಮಸ್ಕಿ

ಎನ್ ಆರ್ ಬಿಸಿ 5 ಎ. ನೀರಾವರಿ ಕಾಲುವೆಗೆ ಒಳಪಡುವ ನಾಲ್ಕು ಗ್ರಾಮ ಪಂಚಾಯಿತಿಗಳ ಒಟ್ಟು 74 ಸ್ಥಾನಗಳಿಗೆ ಯಾರೂ ನಾಮ ಪತ್ರ ಸಲ್ಲಿಸದೆ ಚುನಾವಣೆ ಬಹಿಷ್ಕರಿಸಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಕಚೇರಿಗಳು ಭಣಗುಡುತ್ತಲಿವೆ.
ಅಂಕುಶ ದೊಡ್ಡಿ, ಪಾಮನ ಕೆಲ್ಲೂರ, ಅಮೀನಗಡ, ವಟಗಲ್ ಗ್ರಾಪಂ. ವ್ಯಾಪ್ತಿಯ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡಿ ಜಿಲ್ಲಾಡಳಿತಕ್ಕೆ ಶಾಕ್ ನೀಡಿದ್ದಾರೆ. ಚುನಾವಣೆಯಲ್ಲಿ ಉಮೇದುವಾರಿಕೆ ಸಲ್ಲಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಸ್ಥರ ಮನವೂಲಿಸಿದ್ದರು ಯಾವದೇ ರೀತಿಯ ಪ್ರಯೋಜನವಾಗಿಲ್ಲ.
ರೈತರ ಬೆಂಬಲಕ್ಕೆ ನಿಂತಿರುವ ಹಳ್ಳಿಗರು ಪಂಚಾಯಿತಿ ಚುನಾವಣೆ ಸಹವಾಸ ಬೇಡ ಎಂದು ದೂರ ಸರಿದಿದ್ದಾರೆ. 5 ಎ ಕಾಲುವೆ ಅನುಷ್ಟಾನದ ಖಚಿತ ಭರವಸೆ ನೀಡದಿದ್ದರೆ ಮುಂಬರುವ ಮಸ್ಕಿ ವಿಧಾನ ಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕೂಡ ಮತದಾನ ಬಹಿಷ್ಕಾರ ಮಾಡಲು ಹಳ್ಳಿಗರು ತೀರ್ಮಾನಿಸುವ ಸಾಧ್ಯತೆಗಳು ಕಂಡು ಬರುತ್ತಿವೆ.
5 ಎ. ಕಾಲುವೆ ರೈತರ ಹೋರಾಟ ರಾಜಕಾರಣಿಗಳ ನಿದ್ರೆ ಗೆಡಿಸಿರುವುದು ಕಟು ಸತ್ಯ. ಅದಕ್ಕಾಗಿ ಆಡಳಿತರೂಡ ಬಿಜೆಪಿಯ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ 5 ಎ ಕಾಲುವೆ ಅನುಷ್ಟಾನ ಗೊಳಿಸಿ ಇಲ್ಲ ನಂದವಾಡಗಿ ಏತ ನೀರಾವರಿ ಯೋಜನೆಯಲ್ಲಿ ಈ ಗ್ರಾಮಗಳಿಗೆ ಹರಿ ನಿರಾವರಿ ಯೋಜನೆ ಮಾಡಲು ಕಸರತ್ ನಡೆಸಿದ್ದಾರೆ.
5 ಎ. ಕಾಲುವೆ ಅನುಷ್ಟಾನ ಗೊಳಿಸುವಂತೆ ಈ ಭಾಗದ ರೈತರು ಕಳೆದ 12 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ ಸರ್ಕಾರ ನೀರಾವರಿ ಯೋಜನೆ ಅನುಷ್ಟಾನಕ್ಕೆ ಮುತುವರ್ಜಿ ವಹಿಸುತ್ತಿಲ್ಲ ಸರ್ಕಾರದ ನಿರ್ಲಕ್ಷ್ಯ ದೋರಣೆ ಖಂಡಿಸಿ ನಾಲ್ಕು ಪಂಚಾಯಿತಿಗಳ ಗ್ರಾಮಸ್ಥರು ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಚುನಾವಣೆ ಬಹಿಷ್ಕಾರದ ನಿರ್ಧಾರ ಕೈ ಗೊಂಡಿದ್ದಾರೆ. ಕಾಲುವೆ ಯೋಜನೆ ಅನುಷ್ಟಾನಕ್ಕೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅನಿದಿಷ್ರ್ಟಾವಧಿ ಧರಣಿ ಸ್ಥಳಕ್ಕೆ ಉಪ ಮುಖ್ಯ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಇನ್ನಿತರ ಜನ ಪ್ರತಿನಿಧಿಗಳು ಭೇಟಿ ನೀಡಿ 15 ದಿನ ಗಳ ಒಳಗೆ ಯೋಜನೆ ಕಾರ್ಯಗತ ಗೊಳಿಸುವ ಭರವಸೆ ನೀಡಿ ಹೋಗಿ 20 ದಿನ ಕಳೆದರೂ 5ಎ. ನೀರಾವರಿ ಕಾಲುವೆ ಅನುಷ್ಟಾನ ಬಗ್ಗೆ ಯಾವದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ಹೋರಾಟ ಸಮಿತಿ ಮುಖಂಡರು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ದ ಕಿಡಿ ಕಾರುತ್ತಿದ್ದಾರೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಧರಣಿ ಸ್ಥಳಕ್ಕೆ ಬಂದು ರೈತರಿಗೆ ಸುಳ್ಳು ಭರವಸೆ ನೀಡಿ ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನ ನಡೆಸಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಜನ ಪ್ರತಿನಿಧಿಗಳ ಸುಳ್ಳು ಭರವಸೆಗಳನ್ನು ರೈತರು ನಂಬುವುದಿಲ್ಲ 5ಎ. ಕಾಲುವೆ ಅನುಷ್ಟಾನದ ಖಚಿತ ಭರವಸೆ ನೀಡುವ ತನಕ ಹೋರಾಟ ಮುಂದು ವರೆಯಲಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪ ಗೌಡ ಹರ್ವಾಪೂರ, ಎನ್. ಶಿವನಗೌಡ ವಟಗಲ್, ನಾಗರೆಡ್ಡೆಪ್ಪ ದೇವರ ಮನಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ

 

Don`t copy text!