ಹಾರೈಕೆ
ಚುಮು ಚುಮು ಚಳಿಯಲ್ಲಿ
ಚಿಟಪಟನೆ ಮೈಕೊಡವಿ
ಚಿಲಿಪಿಲಿ ಕಲರವ
ಮಾಡುತಿವೆ ಹಕ್ಕಿಗಳು.
ಮಂಜಿನ ಮುಸುಕಿನಲ್ಲಿ
ಮಲಗಿ ತಾನೆದ್ದು,ಮೆಲ್ಲನೆ..,
ಇಳೆಯತ್ತ ಇಣುಕುತಿಹ ಭಾಸ್ಕರನು.,
ತಾರೆಗಳ ಬೀಳ್ಕೊಟ್ಟು,
ತರುಲತೆಯ ಮೇಲಿನ
ಇಬ್ಬನಿಯ ಹನಿಯ ಹನಿಯಂತೆ
ಹೊಳೆಯಲೀ .. ದಿನವೆನುತ
ಹಾರೈಸುವೆ ನಿಮಗೆ
ಶುಭವಾಗಲೆಂದು..
ಶುಭದಿನಕ್ಕೆ ಶುಭೋದಯ..
. –ಡಾ ಶಾರದಾಮಣಿ ಹುನಶಾಳ ವಿಜಯಪುರ