ಬಾರದ ಊರಿಗೆ

ಬಾರದ ಊರಿಗೆ

 

 

 

 

 

 

 

 

 

 

ಬಾರದ ಊರಿಗೆ

ಹೋದಳು ಅಕ್ಕ
ಬಸವ ಬೆಳಕಿನ ಕಿರಣ
ಸತ್ಯ ಸಮತೆ ಹೂರಣ
ಒಳಗೆ ಸಂಘರ್ಷ
ಹೋರಾಟ ಕದನ
ಬಾಹ್ಯದಲ್ಲಿ ನಗೆ ವದನ
ತಂಗಿ ತಮ್ಮರ ಪ್ರೀತಿ
ಸರದಾರ ಪತಿ
ಪ್ರತಿಭೆಯ ಕನಸು
ಮಗಳು ಮೊಮ್ಮಕ್ಕಳು
ಹಂಬಲಿಸಿದವು ನೀನೊಮ್ಮೆ
ಎದ್ದು ಮೌನ ಮುರಿಯಲೆಂದು
ಹತ್ತು ತಿಂಗಳ ತಪ
ಅದೆಷ್ಟೋ ಚಿಂತನೆ ವಿಚಾರ
ನಿನ್ನೊಡಲೊಳಗೆ
ನಿನ್ನೊಡನೆ ಮೌನವಾದವು
ನೀನು ಮಾಡಿದ ಗೊಂಬೆ
ಬಳಿದ ಬಣ್ಣದ ಚಿತ್ರ
ಸೊರಗಿವೆ ಅಕ್ಕ ನೀನಿಲ್ಲದೆ
ತನುವಿನೊಳಗೆ ಅಣುವಿಟ್ಟು
ಕೈ ಬಿಸಿ ವಿದಾಯ ಹೇಳಲಿಲ್ಲ
ಬಡವಾಯಿತು ಬದುಕು
ಭಾರ ಹೆಜ್ಜೆಯ ಪಯಣ
ಬಾರದ ಊರಿಗೆ
ಹೋದಳು ಅಕ್ಕ
ನಿನ್ನ ನೆನಪಿನಲಿ
ನಿನ್ನ ನೆನಹುವಿನಲಿ
ದುಃಖ ತಪ್ತ ನಾವುಗಳೆಲ್ಲ
ನಾವು ಅಳುವದಿಲ್ಲ
ಕಾರಣ ಅದು
ನಿನಗಿಷ್ಟವಿರದ ಭಾಷೆ
ನಗುತ್ತೇವೆ ಅಕ್ಕ ಅವ್ವ
ನಿನ್ನ ಸ್ನೇಹ ಪ್ರೀತಿಯಲಿ
ಇರಲಿ ನಿನ್ನ ಹರಕೆ ಛಾಯೆ
ಬದುಕು ಮೂರು ದಿನದ ಮಾಯೆ
————————————–
ಡಾ ಶಶಿಕಾಂತ ಪಟ್ಟಣ ಪುಣೆ Basava understanding and research centre ಪುಣೆ

ಡಾ ಜಯಶ್ರೀ ಪಟ್ಟಣ ಪುಣೆ Samast Lingayat Welfare trust ಪುಣೆ

ಸಹೋದರಿ ಛಾಯಕ್ಕಾ ಉಮಾಕಾಂತ ಶೆಟಕಾರ ಇವರು ೧೫ ಅಕ್ಟೋಬರ್ ೨೦೨೪ ರಂದು ಭೌತಿಕ ಜಗತ್ತನ್ನು ಬಿಟ್ಟು ಬರಲಾದ ಪಾರಮಾರ್ಥಿಕ ಲೋಕಕ್ಕೆ ಪಯಣ ಬೆಳೆಸಿದರು. ಹತ್ತು ತಿಂಗಳ ನಿದ್ರೆಯಲ್ಲಿಯೇ ಇದ್ದು ಎದ್ದು ಒಮ್ಮೆಯೂ ಮೌನ ಮುರಿಯಲಿಲ್ಲ. ದೇವತೆ ಸ್ವರೂಪ ಅಕ್ಕನಿಗೆ ಭಾವಪೂರ್ಣ ವಿದಾಯ ಶೃದ್ಧಾಂಜಲಿ.

Don`t copy text!