e-ಸುದ್ದಿ ಮಸ್ಕಿ
ಮಸ್ಕಿ ತಾಲೂಕಿನ 17 ಗ್ರಾ.ಪಂ.ಗಳ 327 ಸ್ಥಾನಗಳಿಗೆ ಆಯ್ಕೆ ಬಯಸಿ 701 ಜನ ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ. ಶನಿವಾರ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿತ್ತು. 42 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು 286 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಒಟ್ಟು 21 ಗ್ರಾ.ಪಂ.ಗಳ 404 ಸ್ಥಾನಗಳ ಪೈಕಿ 4 ಗ್ರಾ.ಪಂ.ಚುನಾವಣೆ ಬಹಿಷ್ಕಾರ ಹಾಕಿದ್ದರಿಂದ 77 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿಲ್ಲ. 17 ಗ್ರಾ.ಪಂ.ಗಳಿಗೆ ಚುನಾವಣೆ ನಡೆಯಲಿದ್ದು 17 ನಾಮಪತ್ರ ತಿರಸ್ಕøತಗೊಂಡಿದ್ದು 1016 ಅಭ್ಯರ್ಥಿಗಳ ನಮಪತ್ರ ಸಿಂಧುವಾಗಿದ್ದವು. ಅದರಲ್ಲಿ 701 ಜನ ಕಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ತೊರಣದಿನ್ನಿ ಪಂಚಾಯತಿಯಲ್ಲಿ 15 ಸ್ಥಾನಗಳಿಗೆ 9 ಸ್ಥಾನಗಳು ಅವಿರೋಧವಾಗಿದ್ದು 6 ಸ್ಥಾನಗಳಿಗೆ 15 ಜನ ಕಣದಲ್ಲಿದ್ದಾರೆ. ಮಲ್ಲದಗುಡ್ಡದಲ್ಲಿ 16 ಸ್ಥಾನಗಳಿಗೆ 5 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದು 11 ಸ್ಥಾನಗಳಿಗೆ 31 ಜನ ಕಣದಲ್ಲಿದ್ದಾರೆ. ಹಿರೇದಿನ್ನಿ ಪಂಚಾಯತಿಯಲ್ಲಿ 14 ಸ್ಥಾನಗಳಿಗೆ 36 ಜನ ಕಣದಲ್ಲಿದ್ದಾರೆ.
ಹಾಲಪೂರ ಪಂಚಾಯತಿಯಲ್ಲಿ 26 ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು 63 ಜನ ಕಣದಲ್ಲಿದ್ದಾರೆ. ಮಟ್ಟೂರು ಪಂಚಾಯತಿಯಲ್ಲಿ 23 ಸ್ಥಾನಗಳಿಗೆ 50 ಜನ ಸ್ಪರ್ಧಿಸಿದ್ದಾರೆ. ಕನ್ನಾಳ ಪಂಚಾಯತಿಯಲ್ಲಿ 20 ಸ್ಥಾನಗಳಿಗೆ 1 ಅವಿರೋಧವಾಗಿದ್ದು, 19 ಸ್ಥಾನಗಳಿಗೆ 43 ಜನ ಕಣದಲ್ಲಿದ್ದಾರೆ. ಸಂತೆಕೆಲ್ಲೂರು ಪಂಚಾಯತಿಯಲ್ಲಿ 21 ಸ್ಥಾನಗಳಿಗೆ 2 ಅವಿರೋಧವಾಗಿದ್ದು 19 ಸ್ಥಾನಗಳಿಗೆ 45 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅಡವಿಬಾವಿ ಪಂಚಾಯತಿಯಲ್ಲಿ 15 ಸ್ಥಾನಗಳಿಗೆ 4 ಅಭ್ಯರ್ಥಿಗಳು ಅವಿರೋಧವಾಗಿದ್ದು 11 ಸ್ಥಾನಗಳಿಗೆ 48 ಜನ ಸ್ಪರ್ಧಿಸಿದ್ದಾರೆ. ಮಾರಲದಿನ್ನಿಯಲ್ಲಿ 12 ಸ್ಥಾನಗಳಿಗೆ 4 ಜನ ಅವಿರೋಧವಾಗಿದ್ದು, 8 ಸ್ಥಾನಗಳಿಗೆ 22 ಜನ ಕಣದಲ್ಲಿದ್ದಾರೆ. ತಲೇಖಾನ ಪಂಚಾಯತಿಯಲ್ಲಿ 20 ಸ್ಥಾನಗಳಿಗೆ 1 ಅವಿರೋಧವಾಗಿದ್ದು 19 ಸ್ಥಾನಗಳಿಗೆ 55 ಜನ ಕಣದಲ್ಲಿದ್ದಾರೆ.
ಮೆದಕಿನಾಳ ಪಂಚಾಯತಿಯಲ್ಲಿ 24 ಸ್ಥಾನಗಳಿಗೆ 1 ಅವಿರೋಧವಾಗಿದ್ದು 23 ಸ್ಥಾನಗಳಿಗೆ 53 ಜನ ಕಣದಲ್ಲಿದ್ದಾರೆ. ಗುಂಡಾ ಪಂಚಾಯತಿಯಲ್ಲಿ 22 ಸ್ಥಾನಗಳಿಗೆ 55 ಜನ ಕಣದಲ್ಲಿದ್ದಾರೆ. ಬಪ್ಪೂರು ಪಂಚಾಯತಿಯಲ್ಲಿ 19 ಸ್ಥಾನಗಳಿದ್ದು 4 ಅವಿರೋಧವಾಗಿದ್ದು 15 ಸ್ಥಾನಗಳಿಗೆ 36 ಜನ ಸ್ಪರ್ಧಿಸಿದ್ದಾರೆ.
ಗುಡದೂರು ಪಂಚಾಯತಿಯಲ್ಲಿ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಕೊಳಬಾಳದಲ್ಲಿ 20 ಸ್ಥಾನಗಳಿಗೆ 4 ಅವಿರೋಧವಾಗಿದ್ದು 16 ಸ್ಥಾನಗಳಿಗೆ 39 ಜನ ಕಣದಲ್ಲಿದ್ದಾರೆ. ಉದ್ಬಾಳ ಪಂಚಾಯತಿಯಲ್ಲಿ 18 ಸ್ಥಾನಗಳಿಗೆ 7 ಜನ ಅವಿರೋಧವಾಗಿದ್ದು 11 ಸ್ಥಾನಗಳಿಗೆ 24 ಜನ ಕಣದಲ್ಲಿದ್ದಾರೆ. ಗೌಡನಭಾವಿ ಪಂಚಾಯತಿಯಲ್ಲಿ 18 ಸ್ಥಾನಗಳಿಗೆ 46 ಜನ ಸ್ಪರ್ಧಿಯಲ್ಲಿದ್ದಾರೆ.