e-ಸುದ್ದಿ, ಮಸ್ಕಿ
ದೆಹಲಿಯಲ್ಲಿ ಹೊರಾಟ ನಡೆಸುತ್ತಿರುವ ಕೆಲ ರೈತರು ಮೃತಪಟ್ಟ ಹಿನ್ನಲೆಯಲ್ಲಿ ಅಖಿಲ ಭಾರತ ಕಿಸಾನ ಸಂಘರ್ಷ ಸಮಾನ ಸಮಿತಿಯ ಸದಸ್ಯರು ಗೋನಾವರ ಮತ್ತು ಹಸಮಕಲ್ಲ ಗ್ರಾಮಗಳಲ್ಲಿ ಭಾನುವಾರ ಶ್ರದ್ಧಾಂಜಲಿ ಸಭೆ ನಡೆಸಿದರು.
ಗೋನಾವರ ಗ್ರಾಮದಲ್ಲಿ ಎಐಡಿವೈಒ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಶರಣಪ್ಪ ಉದ್ಬಾಳ ಮಾತನಾಡಿ ರೈತರ ಬೇಡಿಕೆಗಳಿಗೆ ಒತ್ತಾಯಿಸಿ ದೆಹಲಿ ನಡೆಯುತ್ತಿರುವ ಹೊರಾಟದಲ್ಲಿ ಭಾಗಹಿಸಿದ್ದ ಕೆಲ ರೈತರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಮೃತ ರೈತರ ಆತ್ಮಕ್ಕೆ ಶಾಂತಿ ಸಿಗಬೆಕಾದರೆ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿ, ಮೃತ ರೈತರ ಆತ್ಮಕ್ಕೆ ಶಾಂತಿ ಕೊರಿದರು.
ಗೋನವಾರ ಗ್ರಾಮದಲ್ಲಿ ರೈತರಾದ ಹನುಮಂತರಾಯ ಉದ್ಬಾಳ, ಪೂಜಾರಿಯಪ್ಪ ದಳವಾಯಿ, ದೇವಪ್ಪ, ಹನುಮಂತಪ್ಪ ಗುಡದನಾಳ, ಬಸವರಾಜ ಕವಿತಾಳ, ಶಿವರಾಜ ಮಾಳಪೂರ, ಶಂಕರಣ್ಣ ಸಾಹುಕಾರ್, ನಟರಾಜ, ದೇವಪ್ಪ ಮಡಗಟನಾಳ, ತಿರುಪತಿ ಗೋನಾವರ, ಬಾಲಜಿಸಿಂಗ್ ಹಾಗೂ ಇತರರು ಇದ್ದರು.