ಲಿಂ. ವೀರಭದ್ರಪ್ಪ ಕುರಕುಂದಿಯ ಶರಣ
ಅಪ್ಪಬಸವನ ಬಳಿಯಲಿ ಹೋದರಂತೆ ನಿಜವೇನು ಅಣ್ಣಾ.!
ಎಷ್ಟು ಹುಡಿಕಿದರೂ ಕಾಣದಾದರು ಕುರಕುಂದಿಯ ಶರಣ.!!
ಜಂಗಮ ಪ್ರೇಮಿ ಪಗಡದಿನ್ನಿಯ ಎಂಥಾ ಅದ್ಭುತ ಮನೆತನ.!
ಕೃಷಿ ಕುಟುಂಬದ ಕಾಯಕ ಜೀವಿಯು ಇದೊಂದು ದೊಡ್ಡ ಸಿರಿತನ.!
ಶರಣಶ್ರೀ ವೀರಣ್ಣ ತಾಯಿ ವೀರಮ್ಮಳ ಉದರದಲ್ಲಿ ಜನನ.!
ವೀರಭದ್ರಪ್ಪನೆಂದು ಇಟ್ಟರು ನಾಮಕರಣ.!!
ಹೆತ್ತವರ ಹೆಸರನು ಪ್ರತಿ ತುತ್ತು ತುತ್ತಿಗೆ ಸ್ಮರಿಸುತ ಬೆಳೆದವರು.!
ಒಕ್ಕಲತನದಲಿ ಮುಕ್ಕಣ್ಣನಾಗಿ ನಿತ್ಯ ದುಡಿದು ಧಣಿದವರು.!
ತಂಗಿ ತಮ್ಮಂದಿಯರ ಬಂಧು ಬಳಗಕೆ ಕಣ್ಣಾಗಿ ಇದ್ದವರು.!
ದೇವಿ ಪುರಾಣ ಶಾಸ್ತ್ರ ಪ್ರವಚನ ತತ್ವದಲಿ ನಿಪುಣವಂತರು.!!
ಮುಗ್ದ ಮನಸ್ಸಿನ ಧರ್ಮಪತ್ನಿ ಗಂಗಮ್ಮಳನ್ನು ಕೈ ಹಿಡಿದವರು.!
ಆರ್ತಿಗೆ ಎರಡು ಕೀರ್ತಿಗೆ ಎರಡು ಮಕ್ಕಳನ್ನು ಹಡೆದವರು.!
ಬದುಕಿನ ಬಂಡಿ ಎಳೆಯಲು ವ್ಯಾಪರ ವೈವಾಟ ಮಾಡಿದರು.!
ಬಸವ ತತ್ವದಲ್ಲಿ ನಿಜ ಸುಖವಿದೆ ಎಂದು ತಿಳಿದು ಬಾಳಿದರು.!!
ಕೃಷಿಯ ಮಾಡುತ ಅಜ್ಞಾನವೆಂಬ ಮನದಿ ಕರಕಿಯ ಕಿತ್ತಿದವರು.!
ಧರ್ಮದ ಹಾದಿಯಲಿ ದಯವಿದೆ ಎಂಬುದು ತಿಳುಕೊಂಡವರು.!
ಮನ್ನಾಪುರದ ಶರಣಶ್ರೀ ಮಲ್ಲಿನಾಥರ ಬೆನ್ನು ಹತ್ತಿದವರು.!
ವಿಚಾರದೊಳಗೆ ಆಚಾರ ಮಾಡುತ ತತ್ವ ತಿಳಕೊಂಡವರು.!!
ವಿಚಾರದೊಳಗೆ ಬಸತತ್ವದ ನಿಜ ಜಾಡು ಹಿಡಿದು ನಡೆದವರು.!
ಇಷ್ಟಲಿಂಗದಲಿ ಅಪ್ಪ ಬಸವ ತಂದೆಯನು ಕಂಡು ಕೊಂಡವರು.!
ಬಸವಕೇಂದ್ರ ಚಾರಿಟೇಬಲ್ ಟ್ರಸ್ಟ್ ಕಟ್ಟುವುದರಲ್ಲಿ ಮುಂದಿವರು.!
ಪ್ರಸಾದ ನಿಲಯದೊಳಗೆ ತಮ್ಮ ಅವಿರತ ಸೇವೆ ಸಲ್ಲಿಸಿದಂತವರು.!!
ನಿಜ ತತ್ವ ನಿಷ್ಠೆಗಾಗಿ ಕೆಲವರ ವಿರೋಧವ ಕಟ್ಟಿಕೊಂಡವರು.!
ಜಂಗಮಪ್ರೇಮಿ ದಾಸೋಹ ಮೂರ್ತಿಯಾಗಿ ಯಾದವರು.!
ಧರ್ಮತತ್ವಕ್ಕಾಗಿ ನಾಡಿನೂದ್ದಗಲಕೂ ಸಂಚಿರಿಸಿದಂತವರು.!
ಮಕ್ಕಳಂತೆ ತಾ ಮುಂದುವರಿದುಕೊಂಡು ಬಸವತತ್ವ ಬೆಳಗಿದರು.!!
ಚಿತ್ರದುರ್ಗ ಭಾಲ್ಕಿ ಇಳಕಲ ಮಠಗಳ ಸಂಪರ್ಕದಲ್ಲಿದ್ದವರು.!
ಪ್ರಗತಿಪರ ಸಂಘಟನೆಗಳ ಮದ್ಯ ಇದ್ದುಕೊಂಡು ಬೆಳೆದವರು.!
ಬಸವಭಿಮಾನಿ ಯಾರೇ ಕಂಡರು ಬಸವಣ್ಣನೆಂದು ತಿಳಿದರು.!
ನಿತ್ಯಕಾಯಕಕ್ಕೆ ಹೊದಂತೆ ಬಸವಕೇಂದ್ರಕ್ಕೆ ಹೊಗುತ್ತಿದ್ದರು!!
ಭಸ್ಮ ರುದ್ರಾಕ್ಷಿ ವಚನ ಮಂತ್ರ ವೆಂದರೆ ಪಂಚ ಪ್ರಾಣದವರು.!
ಕಟ್ಟು ನಿಟ್ಟಿನ ನಿಷ್ಠೂರವಂತ ಎಂಥ ದಿಟ್ಟ ಶರಣರಿವರು.!
ಮತ್ತೆ ಹುಟ್ಟಿ ಬಾರಪ್ಪ ಕುರಕುಂದಿ ವೀರಭದ್ರಪ್ಪನವರೇ.!
ಕಂದ ಪಂಪಯ್ಯನ ಕವನವ ಅರ್ಪಿಸಿ ಮತ್ತೆ ಕರೆಯುವೇನು.
ರಚನೆ – ಶ್ರೀ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಸಿಂಧನೂರು.