ಸಾವಿತ್ರವ್ವ ನಮ್ಮ ಅಕ್ಷರದವ್ವ

ಸಾವಿತ್ರವ್ವ ನಮ್ಮ ಅಕ್ಷರದವ್ವ

 

 

 

 

 

 

 

 

ಅಕ್ಷರದ ಗುಡಿಯ ಬಾಗಿಲು ತೆರೆದಿಟ್ಟು

ಅರಿವಿನ ದೀಪ ಬೆಳಗಿಸಿದ ಅಕ್ಷರದವ್ವ
ನಮ್ಮ ಸಾವಿತ್ರವ್ವ…

ಪ್ರೀತಿಯ ದಾರಕ್ಕೆ
ಹೂಪೋಣಿಸಿ ಹೂಮಾಲೆ ಕಟ್ಟಿದ ಹೂವಾಡಗಿತ್ತಿ
ಅಜ್ಞಾನ ಅಳಿಸಿ ಅಂಧಕಾರ ತೊಲಗಿಸಿದ
ಅಕ್ಷರದವ್ಚ ನಮ್ಮ ಸಾವಿತ್ರವ್ವ…,

ಬಾಲ್ಯದ ಆಟಪಾಠಗಳ ವಯಸ್ಸಿನಲ್ಲಿಯೇ
ಮಧುವಣಗಿತ್ತಿಯಾಗಿ
ಹಸೆಮಣೆಯನೇರಿ ಜ್ಯೋತಿಬಾ ಫುಲೆ ಅವರ ಕೈ ಹಿಡಿದ ಎಳೆಬಾಲೆ ಅಕ್ಷರದವ್ವ !
ಸತಿಪತಿಗಳೊಂದಾದ ಭಕ್ತಿ ಹಿತವಪ್ಪುದು ಶಿವಂಗೆ ಎನ್ನುವ ಶರಣರ ವಾಣಿಗೆ ಸಾಕ್ಷಿ ನೀವಾದಿರಿ !ಅಕ್ಷರಕ್ರಾಂತಿ ತಂದ ಕ್ರಾಂತಿಕಾರಿಯಾದಿರಿ ಅಕ್ಷರದವ್ವ !

ಆಧುನಿಕ ಮಹಿಳಾ ಚಳವಳಿಗೆ
ಬಹುಜನ ಚಳವಳಿಗೆ ನೀವೇ ಮೂಲಾಧಾರ
ವಿಧವಾ ಪುನರ್ ವಿವಾಹಕೈ ಅರಿವಿನ ಚಪ್ಪರ ಜೋಡಿಸಿದಿರಿ
ಅಂತರ್ಜಾತಿ ವಿವಾಹ ಮಾಡಿಸಿದಿರಿ
ಇಡೀ ಜಗತ್ತಿಗೆ ಆದರ್ಶ ದಂಪತಿಗಳಾಗಿ ಮಾದರಿಯಾದಿರಿ
ಅಕ್ಷರದವ್ವ…

ಮಹಿಳೆಯರ ಮೇಲಿನ ದೌರ್ಜನ್ಯ ಅಡಗಿಸಲು
ತೆರೆದಿರಿ ಅರಿವಿನ ಶಾಲೆ
ಶಿಶು ಹತ್ಯೆ, ಲಿಂಗ ತಾರತಮ್ಯದ ವಿರುದ್ಧ ಸಿಡಿದೆದ್ದ ಧೀರ ಮಹಿಳೆ
ಸಾವಿತ್ರವ್ವ ನಮ್ಮ ಅಕ್ಷರದವ್ಚ….

ವರ್ಣ ವ್ಯವಸ್ಥೆಯ ವಿರುದ್ಧ ಹೋರಾಡಿ
ಜಾತಿ ಪದ್ಧತಿಯ ಖಂಡಿಸಿ
ಮಾನವಿಯ ಮನಸುಗಳನ್ನು ಸೃಷ್ಟಿಸಿ
ಹಗಲಿರುಳು ಕ್ಷಮಿಸಿದಿರಿ
ಅಕ್ಷರದವ್ಚ….

ಅಕ್ಷರದ ಹಣತೆಗೆ
ಸಾವಿತ್ರಿಬಾಯಿ ಫುಲೆ
ಮತ್ತು
ಫಾತಿಮಾ ಶೇಖ್
ಅವಳಿ ಎಣ್ಣೆ ಬತ್ತಿಯಾಗಿ ಉರಿದು
ದೇಶದ ಮೊದಲ ಮಹಿಳಾ ಶಿಕ್ಷಕಿಯರಾದಿರಿ ಅಕ್ಷರದ
ಹಣತೆ ಬೆಳಗಿದಿರಿ

ನೀವು ತೋರಿದ ಬೆಳಕಿನ ದಾರಿಯೇ
ಅಂಬೇಡ್ಕರ್ ಅವರಿಗೆ ಪ್ರೇರಣೆಯಾಗಿ
ಸ್ತ್ರೀ ಕುಲಕ್ಕೆ
ಸಮಾನ ಹಕ್ಕುಗಳನ್ನು ನೀಡಿ
ಜಗತ್ತಿನ ಎಲ್ಲರಿಗೆ ಪ್ರೇರಣದಾಯಕರಾದಿರಿ
ಸಾವಿತ್ರವ್ಚ ನಮ್ಮ ಅಕ್ಷರದವ್ವ

 

 

 

 

 

 

 

 

 

 

ಸ್ವರೂಪರಾಣಿ ಎಸ್. ನಾಗೂರೆ

Don`t copy text!