ಬಹುಜನ ಸುಖಾಯ | ಬಹುಜನ ಹಿತಾಯ ||
ಬುದ್ಧ-ಬಸವ-ಬಾಬಾಸಾಹೇಬರ ಜಯಂತಿಗಳ ಆಚರಣೆ ಪ್ರಯುಕ್ತ ಗಣಕರಂಗ (ರಿ), ಧಾರವಾಡ ಮತ್ತು ವಚನ ಮಂದಾರ ವೇದಿಕೆ, ತುಮಕೂರು, ಆಯೋಜಿಸುತ್ತಿರುವ 3B ಲೇಖನ ಸ್ಪರ್ಧೆಗೆ ಮುಕ್ತ ಆಹ್ವಾನ.
ಲೇಖನಗಳನ್ನು ಕಳಿಸಲು ಕೊನೆಯ ದಿನಾಂಕ: 02-03-2025, ರವಿವಾರ
ಲೇಖನ ಕಳಿಸಲು ಇ-ಮೇಲ್: ganakarangaspardhe@gmail.com
ದೇಶದ ಚರಿತ್ರೆಯಲ್ಲಿ ಸಾಮಾಜಿಕ ಪರಿವರ್ತನಾ ಚಳುವಳಿಯು ಅಂತರ್ಗತವಾಗಿ ನಿರಂತರವಾಗಿ ಪ್ರವಹಿಸುತ್ತಿರುವುದನ್ನು ಗಮನಿಸಬಹುದು. ಅಂತಹ ಚಳುವಳಿಯ ಮೂಲಕ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡುವುದರ ಜೊತೆಗೆ ಮಾನವೀಯ ಅಂತಃಕರಣದ ಸಮಭಾವ, ಸಮಚಿತ್ತದ ಕುರಿತು ತಿಳಿಸುತ್ತಾ ಮಾನವೀಯ ಮೌಲ್ಯಗಳೊಂದಿಗೆ ಸಮಸಮಾಜದ ಕನಸು ಕಂಡ ಮಹನೀಯರ ಜಯಂತಿ ಸಂದರ್ಭದಲ್ಲಿ ಕೆಳಗಿನ ಶೀರ್ಷಿಕೆಗಳ ಲೇಖನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
1. 2569 ನೇ ಬುದ್ಧಪೂರ್ಣಿಮೆ ಲೇಖನ ಸ್ಪರ್ಧೆ ವಿಷಯ: “ಬುದ್ಧ ಮತ್ತು ವಿಶ್ವಶಾಂತಿ”.
2. 892 ನೇ ಬಸವಣ್ಣನವರ ಜಯಂತಿ ಲೇಖನ ಸ್ಪರ್ಧೆ ವಿಷಯ: “ಬಸವಾದಿ ಶರಣರ ವಚನಗಳಲ್ಲಿ ಕೃಷಿ ಸಂಸ್ಕೃತಿ”.
3. 134 ನೇ ಡಾ. ಬಿ. ಆರ್. ಅಂಬೇಡ್ಕರ ಜಯಂತಿ ಲೇಖನ ಸ್ಪರ್ಧೆ ವಿಷಯ: “ಬಾಬಾಸಾಹೇಬರು ಮತ್ತು ಆಧುನಿಕ ಭಾರತ”.
ಬಹುಮಾನಗಳ ಪ್ರಾಯೋಜಕರು
1. ಡಾ. ಎ. ಎ. ಮೂಲಿಮನಿ, ಪ್ರಾಧ್ಯಾಪಕರು, ಧಾರವಾಡ.
2. ಶರಣ ಶ್ರೀ ಎಸ್. ಎಸ್. ಪಾಟೀಲ, ಮಾಜಿ ಸಚಿವರು, ಮುಂಡರಗಿ.
3. ಪ್ರೊ. ಬಿ. ವೈ. ಅಡವಿ, ಗದಗ.
ಮೂರು ಶೀರ್ಷಿಕೆಯ ಲೇಖನ ಸ್ಪರ್ಧೆಯ ವಿಷಯಗಳಿಗೆ ಪ್ರತ್ಯೇಕ ಬಹುಮಾನಗಳ ವಿವರ
1. ಪ್ರಥಮ ಬಹುಮಾನ: ನಗದು ರೂ. 5,000/-, ಪುಸ್ತಕ, ಇ-ಪ್ರಮಾಣಪತ್ರ.
2. ದ್ವಿತೀಯ ಬಹುಮಾನ: ನಗದು ರೂ. 3,000/-, ಪುಸ್ತಕ, ಇ-ಪ್ರಮಾಣಪತ್ರ.
3. ತೃತೀಯ ಬಹುಮಾನ: ನಗದು ರೂ. 2,000/-, ಪುಸ್ತಕ, ಇ-ಪ್ರಮಾಣಪತ್ರ
4. ಐವರಿಗೆ ಮೆಚ್ಚುಗೆ ಬಹುಮಾನ: ಪುಸ್ತಕ ಮತ್ತು ಇ-ಪ್ರಮಾಣಪತ್ರ.
ದಯವಿಟ್ಟು ಗಮನಿಸಿ
1. ನೋಂದಣಿ ಶುಲ್ಕ: ಒಂದು ಲೇಖನಕ್ಕೆ ರೂ. 101/- (ನೂರೊಂದು ರೂಗಳು) ಮಾತ್ರ.
2. ಮೂರು ಶೀರ್ಷಿಕೆಗಳಿಗೆ ಪ್ರತ್ಯೇಕವಾಗಿ ಅಥವಾ ಯಾವುದಾದರೊಂದು ಶೀಷಿಕೆಗೆ ಲೇಖನ ಕಳಿಸಬಹುದು.
3. ಒಬ್ಬರು ಎಷ್ಟು ಬೇಕಾದರೂ ಲೇಖನಗಳನ್ನು ಕಳಿಸಬಹುದು.
4. ಪ್ರತಿಯೊಂದು ಲೇಖನಕ್ಕೆ ಪ್ರತ್ಯೇಕ ನೋಂದಣಿ ಶುಲ್ಕ ಕಳಿಸಬೇಕು.
5. ವಯಸ್ಸಿನ ನಿರ್ಬಂಧವಿಲ್ಲ.
6. ನೋಂದಣಿ ಶುಲ್ಕ ಕಳಿಸಲು ಪೋನ್ ಪೇ (PhonePay) ನಂಬರ್: 9845109480.
7. ಇ-ಮೇಲ್ ದಲ್ಲಿ ನಿಮ್ಮ ಲೇಖನ, ಲೇಖನ ವಾಚನದ ಆಡಿಯೋ, ನಿಮ್ಮ ಪೋಟೋ, ನೋಂದಣಿ ಶುಲ್ಕದ ಸ್ಕ್ರೀನ್ ಶಾಟ್ (Screen Shot) ಒಟ್ಟಿಗೆ ಕಳಿಸಬೇಕು.
ಸ್ಪರ್ಧೆಯ ನಿಯಮಗಳು
1. ಎಲ್ಲಿಯೂ ಪ್ರಕಟವಾಗಿರದ, ತಪ್ಪಿಲ್ಲದಂತೆ ಟೈಪಿಸಿರುವ ಕನಿಷ್ಟ 1,200 & ಗರಿಷ್ಟ 1,500 ಶಬ್ದಗಳಿಗೆ (A4 ಸೈಜಿನ ಹಾಳೆಯಲ್ಲಿ ಮೂರರಿಂದ ನಾಲ್ಕು ಪುಟಗಳಿಗೆ) ಮೀರದಂತೆ ಸ್ವರಚಿತ ಲೇಖನಕ್ಕೆ ನಿಮ್ಮದೇ ಸ್ವಂತ ಆಕರ್ಷಕ ಶೀರ್ಷಿಕೆಯನ್ನು ಕಡ್ಡಾಯವಾಗಿ ಹಾಕಿರಬೇಕು.
2. ಲೇಖನದ ಆರಂಭದಲ್ಲಿ ಸಂಬಂಧಿಸಿದ ಲೇಖನ ಸ್ಪರ್ಧೆಯ ಹೆಸರನ್ನು ಸ್ಪಷ್ಟವಾಗಿ ಬರೆದಿರಬೇಕು.
ಉದಾಹರಣೆಗೆ:
• ಗಣಕರಂಗ-ಬುದ್ಧಪೂರ್ಣಿಮೆ ಲೇಖನ ಸ್ಪರ್ಧೆ-2025
• ಗಣಕರಂಗ-ಬಸವ ಜಯಂತಿ ಲೇಖನ ಸ್ಪರ್ಧೆ-2025
• ಗಣಕರಂಗ ಡಾ.ಬಿ.ಆರ್.ಅಂಬೇಡ್ಕರ್ ಲೇಖನ ಸ್ಪರ್ಧೆ-2025
3. ಕೈಬರಹ, ಲೇಖನದ ಪೋಟೋ, ಸ್ಕ್ರೀನ್ ಶಾಟ್, ಪಿಡಿಎಪ್ ಮತ್ತಿತ್ತರ ಆವೃತ್ತಿಯ ಲೇಖನ ಕಳಿಸಬೇಡಿ. ಕಳಿಸಿದರೆ ತಿರಸ್ಕರಿಸಲಾಗುವುದು.
4. ಲೇಖನವು ಕಡ್ಡಾಯವಾಗಿ ಇ-ಮೇಲ್ ಮೂಲಕ ನುಡಿ ಫಾಂಟ್ (Nudi Font) ದಲ್ಲಿ ಟೈಪಿಸಿ, ಅಕ್ಷರ (Word File doc/docx Version) ಆವೃತ್ತಿಯಲ್ಲಿ ಕಳಿಸಬೇಕು.
5. ಲೇಖನದ ಕೊನೆಯಲ್ಲಿ ಕಡ್ಡಾಯವಾಗಿ:
• ಹೆಸರು (Name).
• ಸಂಪೂರ್ಣ ವಿಳಾಸ (Complete Address).
• ಪಿನ್ ಕೋಡ್ (Pin Code).
• ಮೋಬೈಲ್ ನಂಬರ (Mobile Number).
• ಇ-ಮೇಲ್ (e-Mail ID) ನಮೂದಿಸಬೇಕು.
6. ಸ್ಪರ್ಧೆಗೆ ಕಳಿಸುವ ಲೇಖನದ ಆಡಿಯೋದ ಆರಂಭದಲ್ಲಿ ಸ್ಪರ್ಧೆ ಆಯೋಜನೆ ಮಾಡಿರುವ ಗಣಕರಂಗ/ವಚನ ಮಂದಾರ ಸಂಸ್ಥೆಯ ಹೆಸರು, ಸ್ಪರ್ಧೆಯ ಹೆಸರು, ನಿಮ್ಮ ಲೇಖನದ ಶೀರ್ಷಿಕೆ, ನಿಮ್ಮ ಹೆಸರು ಇತ್ಯಾದಿಗಳನ್ನು ಕಡ್ಡಾಯವಾಗಿ ಹೇಳಿರಬೇಕು.
7. ಲೇಖನ ಸ್ಪರ್ಧೆಯಲ್ಲಿ ಯಾರನ್ನಾಗಲಿ, ಯಾವುದೇ ರೀತಿಯ ಅವಹೇಳನಕಾರಿ, ಅಪಮಾನಿಸುವ, ಸಮಾಜ ವಿರೋಧಿ, ಸಂವಿಧಾನ ವಿರೋಧಿ, ದೇಶದ ಭಾವೈಕ್ಯತೆಗೆ ಧಕ್ಕೆ ತರುವ ವಿಷಯಗಳಿರಬಾರದು. ಹಾಗೇನಾದರೂ ಕಂಡು ಬಂದರೆ ಸ್ಪರ್ಧೆಯ ಆರಂಭದಲ್ಲಿಯೇ ಲೇಖನವನ್ನು ತಿರಸ್ಕರಿಸಲಾಗುವುದು.
8. ಲೇಖನವನ್ನು ಕಡ್ಡಾಯವಾಗಿ ಇ-ಮೇಲ್ (e-Mail ID) ಗೆ ಮಾತ್ರ ಕಳಿಸಬೇಕು. ಕೆಳಗೆ ನಮೂದಿಸಿದ ಸ್ಪರ್ಧಾ ಸಮಿತಿಯ ವೈಯಕ್ತಿಕ ನಂಬರಿಗೆ ವಾಟ್ಸಪ್ ಮಾಡುವ / ಕಳಿಸುವ ಲೇಖನವನ್ನು ಪರಿಗಣಿಸುವುದಿಲ್ಲ.
9. ಗಣಕರಂಗದ ಗೌರವಾನ್ವಿತ ತೀರ್ಪುಗಾರರ ತೀರ್ಪು ಅಂತಿಮವಾಗಿರುತ್ತದೆ.
10. ಮುಕ್ತ ಅವಕಾಶದ ಈ ಸ್ಪರ್ಧೆಯಲ್ಲಿ ವಿಶ್ವದ ಎಲ್ಲಾ ಭಾಗಗಳಿಂದ ಆಸಕ್ತರೆಲ್ಲರೂ ಭಾಗವಹಿಸಬಹುದು. ಭಾಗವಹಿಸಿದ ಎಲ್ಲರಿಗೂ ಇ-ಪ್ರಮಾಣಪತ್ರ ನೀಡಲಾಗುವುದು.
11. ಸ್ಪರ್ಧೆಗೆ ಕಳಿಸಿದ ಲೇಖನವನ್ನು ಫಲಿತಾಂಶ ಪ್ರಕಟವಾಗುವವರೆಗೆ ಎಲ್ಲಿಯೂ ಪ್ರಕಟಿಸಬಾರದು. ಪ್ರಕಟಿಸಿದರೆ ಸ್ಪರ್ಧೆಗೆ ಪರಿಗಣಿಸುವುದಿಲ್ಲ.
12. ಸ್ಪರ್ಧಾ ಶಿಸ್ತನ್ನು ಕಟ್ಟುನಿಟ್ಟಾಗಿ ಪಾಲಿಸದವರ ಲೇಖನಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
13. ಕೃತಿ ಚೋರತನಕ್ಕೆ ಸಂಬಂಧಿಸಿದಂತೆ ದೇಶದ ಕಾನೂನು ಕ್ರಮಗಳಿಗೆ ಆಯಾ ಲೇಖಕರು ಜವಾಬ್ದಾರರು. ಗಣಕರಂಗ ಮತ್ತು ವಚನ ಮಂದಾರ ವೇದಿಕೆ ಸಂಸ್ಥೆಗಳು ಹೊಣೆಗಾರ ಅಲ್ಲ. ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ತಿಳಿಸಿದರೆ ಅಂತಹ ಬರಹಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
14. ಸ್ಪರ್ಧೆಯ ನಂತರ ಸೂಕ್ತವೆನಿಸುವ ಲೇಖನಗಳನ್ನು ಸೂಕ್ತವೆನಿಸುವ ಆಧುನಿಕ ತಂತ್ರಜ್ಞಾನದ ಆವೃತ್ತಿ / ರೂಪದಲ್ಲಿ ಪ್ರಕಟಿಸುವಿಕೆಯ ಹಕ್ಕನ್ನು ಗಣಕರಂಗ ಪ್ರಕಾಶನ, ಧಾರವಾಡ ಮತ್ತು ವಚನ ಮಂದಾರ ವೇದಿಕೆ, ತುಮಕೂರು ಎರಡೂ ಸಂಸ್ಥೆಗಳು ಹೊಂದಿರುತ್ತವೆ.
15. ಆಯ್ದ ಲೇಖನಗಳ ಸಂಕಲನವನ್ನು ಪುಸ್ತಕರೂಪದಲ್ಲಿ ಪ್ರಕಟಿಸಿದರೆ, ಸ್ಪರ್ಧಾರ್ಥಿಗಳು ಕನಿಷ್ಠ ಎರಡು ಪ್ರತಿಗಳನ್ನು ಪಡೆದುಕೊಳ್ಳತಕ್ಕದ್ದು.
16. ನಿಗದಿಪಡಿಸಿದ ಕಾಲಾವಧಿಯ (10-03-2025, ಸೋಮವಾರ) ನಂತರ ಬಂದ ಲೇಖನಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಸಹಕರಿಸಿರಿ.
17. ಸ್ಪರ್ಧೆಯ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸತಕ್ಕದ್ದು. ಸ್ಪರ್ಧಾಥಿಗಳು ಯಾವುದೇ ಹಂತದಲ್ಲಿ ನಿಯಮಗಳನ್ನು ಅನುಸರಿಸಿಲ್ಲವೆಂದು ಗೊತ್ತಾದರೆ ಮುಂದಿನ ಹಂತಕ್ಕೆ ಪರಿಗಣಿಸಲಾಗುವುದಿಲ್ಲ. ದಯವಿಟ್ಟು ಸಹಕರಿಸಿರಿ.
18. ಹೆಚ್ಚಿನ ಮಾಹಿತಿಗಾಗಿ ಈ ನಂಬರುಗಳಿಗೆ ಸಂಪರ್ಕಿಸಬೇಕಾಗಿ ಕೋರಲಾಗಿದೆ:
• ಶ್ರೀ ಸಿದ್ಧರಾಮ ಹಿಪ್ಪರಗಿ: 9845109480.
• ಡಾ.ವಿಜಯಕುಮಾರ ಕಮ್ಮಾರ: 9741357132.
• ಶ್ರೀ ಗಣಪತಿ ಚಲವಾದಿ: 9740691429.