ನಿತ್ಯ ಶಿವರಾತ್ರಿ
ಊರೂರು ಅಲೆದು
ಕೂಳಿಲ್ಲದೆ ಚಿಂದಿ ಎತ್ತಿ
ಹಸಿವಿನಿಂದ ಅದೆಷ್ಟೋ ರಾತ್ರಿ
ಉಪವಾಸ ಮಲಗಿದ
ನನ್ನವರು ಜಾಗರಣೆ
ನಿತ್ಯ ಶಿವರಾತ್ರಿ ಮಾಡುತ್ತಾರೆ.
ಖಾಸಗಿ ಬ್ಯಾಂಕ್ ನಲ್ಲಿ
ದುಡ್ಡು ಠೇವಣಿ ಇಟ್ಟು
ದುಷ್ಟ ರಾಜಕಾರಣಿಗಳ
ಮೋಸಕ್ಕೆ ಬಲಿಯಾಗಿ
ಮಲಗದೆ ಇದ್ದ ರಾತ್ರಿಯಿಡಿ
ಚಿಂತಿಸುವರು ಶಿವರಾತ್ರಿ ಮಾಡುವರು
ಕಾಡಿನ ಬುಡಕಟ್ಟು ಜನರ
ಒಕ್ಕಲೆಬ್ಬಿಸಿ ಬದುಕು ಅನಿಶ್ಚಿತ
ಮಾಡಿದ ಕ್ರೂರ ಅಧಿಕಾರಿ ವಿರುದ್ಧ
ಹಗಲಿರುಳು ಹೋರಾಟ
ಮಲಗಿಲ್ಲ ಸೂರು ಹುಡುಕುವ
ಮುಗ್ಧ ಸೋಲಿಗರ ನಿತ್ಯ ಉಪವಾಸ
ಮಳೆ ಬಿಸಿಲು ಮರೆತು
ಹೊಲದಿ ದುಡಿದು
ಬೆಂಬಲ ಸಿಗದೇ ಆತ್ಮಹತ್ಯೆ
ಮಾಡಿಕೊಳ್ಳುವ
ಚಿಂತಿಸುವ ಕಾರ್ಮಿಕರ
ಅದೆಷ್ಟೋ ರಾತ್ರಿ ಜಾಗರಣೆ
ನಿತ್ಯ ಶಿವರಾತ್ರಿ ಮಾಡುವರು
ಒಳ್ಳೆಯ ದಿನಗಳು ಬರುವವು
ಭರವಸೆಯ ಹೊತ್ತು ಬದುಕುವ
ದೇಶದ ಪ್ರಜೆಗಳು ಮತದಾರರು
ಸಾಲ ತೀರಿಸಿ ನೆಮ್ಮದಿ ಬದುಕು
ಬಾಳಬೇಕೆಂಬ ಕನಸಿಗೆ
ನಿತ್ಯ ಶಿವರಾತ್ರಿ ಜಾಗರಣೆ ಮಾಡುತ್ತಾರೆ
ಶಿವ ಮೌನಿ ಬೋಲಾ ಶಂಕರ
ಅವನಿಗೂ ಭಯ ಬಾಯಿ ಬಿಟ್ಟರೆ
ತನ್ನನ್ನೆ ರಕ್ಷಿಸಿಕೊಳ್ಳದ ಮಹಾದೇವ
ನಮ್ಮನ್ನು ಹೇಗೆ ರಕ್ಷಿಸುವ?
ಹಣ್ಣು ಹಾಲು ಬೆಣ್ಣೆ ತಿಂದು
ಜನರು ತಿಂದು ಶಿವರಾತ್ರಿ ಮಾಡುತ್ತಾರೆ
–ಡಾ ಶಶಿಕಾಂತ ಪಟ್ಟಣ ರಾಮದುರ್ಗ
ವಾಸ್ತವವನ್ನು ತೆರೆದಿಟ್ಟ ತಮ್ಮ ಕವನ ಚೆನ್ನಾಗಿದೆ ಸರ್ ಧನ್ಯವಾದಗಳು