ಸ್ಪೂರ್ತಿಯ ನೆರಳು

ಸ್ಪೂರ್ತಿಯ ನೆರಳು

ನಾರಿ ಶಕ್ತಿಗೆ ಅಂತರಾಳವೆ ಸ್ಪೂರ್ತಿ
ಅವಳ ಒಲವಿಗೆ ಆತ್ಮವಿಶ್ವಾಸವೆ ಶಕ್ತಿ
ನೋವು ನಲಿವುಗಳ ಸ್ವೀಕರಿಸಿ
ಕಷ್ಟಗಳ ನಡುವೆ
ಕಟಿಬದ್ಧ ನಿಲುವನಿಟ್ಟು
ಸಂಸಾರ ಸಮಾಜ ಬೆಳಗುವ
ಹುನ್ನಾರ ಹೊತ್ತು
ಅಪಾರ ಕಾಳಜಿಯನ್ನು ಇಟ್ಟು
ಅನುಪಮ ಪ್ರೀತಿಯ ತೊಟ್ಟು
ನೋವುಗಳ ಬದಿಗಿಟ್ಟು
ಕಷ್ಟಗಳ ಸುರಳಿಯನು ಬಚ್ಚಿಟ್ಟು
ತನ್ನ ಆಸೆ ಆಕಾಂಕ್ಷೆ ಅದುಮಿಟ್ಟು
ಬತ್ತಿಯಂತೆ ಸುಟ್ಟು
ಬೆಳಕು ಬಿತ್ತಿ ನಗುವನುಟ್ಟು
ಮಲ್ಲಿಗೆಯ ಮಕರಂದದಿ
ಮಂದಹಾಸ ಬೀರಿ
ಮನ ಮನೆ ಬೆಳಗುವ
ಅವಳ ಮನೋಭಾವ
ಮಾಮರದ ತಂಪು
ಜಗವ ತೋರುವ ತೂಗುವ
ಜಗಜನನಿ ನೀನೆ ಬಾಳ ಬಂಡಿ
ಸಾಧನೆಯ ಶಿಖರದ
ಉತ್ತುಂಗ ಶ್ರುಂಗೆ
ಸುಂದರ ಗಂಗೆ
ನೆಲ ಜಲ ಪ್ರಕೃತಿ ಸೌಂದರ್ಯದ
ಲೋಕ ಗಂಗೆ
ಎನಿತು ಹೆಸರು ಕರೆದರೂ ನಿನಗೆ
ಎಲ್ಲಾ ಸಹಿಸೋ ಶಕ್ತಿ ನಿಂಗೆ
ಅದಕಾಗಿ ನೀನು
ಅನಂತವನು ಮೀರಿದ ಮುಗಿಲು
ಬದುಕಿನ ದಾರಿಗೆ ಸ್ಪೂರ್ತಿಯ ನೆರಳು
ಹೆಣ್ಣಿವಳು ಜಗದಿ ಮೌನದ
ಕಾವ್ಯ ಹೊನಲು.

 

 

 

 

 

 

 

 

 

 

ಲಲಿತಾ ಪ್ರಭು ಅಂಗಡಿ
ಮುಂಬಯಿ

Don`t copy text!