ನಗು
ಅವಳು ಅಳುವುದನ್ನು ನಿಲ್ಲಿಸಿದ್ದಳು ಇತ್ತೀಚೆಗೆ
ಕಾರಣ
ನಗುನಗುತ್ತಲೇ ಎಲ್ಲವನ್ನು ನಿಭಾಯಿಸುತ್ತಿರುವಳು
ನೋಡಿದವರಿಗೆಕೋ ವಿಚಿತ್ರ ಅನ್ನಿಸುತ್ತಿತ್ತು
ತಾನು ಹೆಣ್ಣೆಂಬುದನ್ನು ಇಕೆ ಮರೆತಳೋ ಹೇಗೆ
ಒಂದಿಷ್ಟು ತಲೆ ತಗ್ಗಿಸಿರಬಾರದೆ ಎಂದರು
ಕಿಂಚಿತ್ತಾದರೂ ಹೆದರಿ ನಮಗೆ ಭಯಪಡಬಾರದೆ
ಆದರೇನು ಮಾಡಬಲ್ಲಳು ಇಕೆ
ಜಿರಳೆ ಕಂಡರೆ ಹಾರುವಳು
ಕತ್ತಲಾದರೆ ಭಯಪಟ್ಟು ಅದುರಿ ಹೋಗುವಳು
ಬೆನ್ನ ಹಿಂದಿನ ನಡಿಗೆಯ ಸದ್ದಿಗೆ
ಓಟ ಕೀಳುವಳು
ಇಂದೇನಾಗಿದೆ ಇಕೆಗೆ ಸುಮ್ಮನೆ ನಗುತ್ತಿರುವಳು
ನಗು ಅವಳಿಗೆ ಭೂಷಣವೇನೋ ನಿಜ
ಆದರದು ಅವಳಿಷ್ಟವಾದರೆ ಹೇಗೆ
ಅಳುವಾಗಲು ಆಕೆ ನಕ್ಕರೆ ಸಹಿಸುವುದು ಹೇಗೆ
ನೂರಾನೆ ಬಲವನ್ನೆಲ್ಲಾ ನೆಲಕೆ ಹೊಸಕಿದಂತೆ
ಅವಳ ಸಹನೆಯ ನಗು ಜ್ವಾಲಾಮುಖಿಯಂತೆ
-ಆಶಾ ಯಮಕನಮರಡಿ