ಬದುಕು ನಂಬಿಕೆಯ ಪಯಣ

ಬದುಕು ನಂಬಿಕೆಯ ಪಯಣ

 

 

 

 

 

 

 

 

 

 

ಬದುಕೊಂದು ಭರವಸೆಯ ತಾಣ
ಅದನರಿತು ಬಾಳಬೇಕು ಜಾಣ
ಜೀವನ ಎಂಬುದು ಏರಿಳಿತದ ದಿಬ್ಬಣ
ಜಾಗರೂಕತೆಯಿಂದ ಪಾರಾಗಬೇಕಣ್ಣ//

ಹರೆಯದ ಹೊಸ್ತಿಲಲ್ಲಿ ನಿನ್ನನ್ನು ನೀ ಮರೆಯದಿರು
ಮನಸು ಸಂಗಾತಿಯಾಗುವವನಿಗೆ
ಗಬಕ್ಕನೆ ಕೊಡದಿರು
ಗಟ್ಟಿ ಮನಸು ಮಿಸುಗುವ ಮುನ್ನ ಯೋಚಿಸು ಬಾರಿ ನೂರು//

ಮನಸು ಕೊಟ್ಟ ಮೇಲೆ ಕೆಟ್ಟೆ ನೆನಬೇಡ
ಕೊಟ್ಟಾಗಿ ಹೋಗಿದೆ ಬದುಕು ಪಾರುಮಾಡ
ಕಷ್ಟ ಸುಖಕೆ ಹೊಂದಿಕೊಂಡು ಹೋಗುವುದೇ ಪಾಡ//

ಬದುಕು ಸಂತಸದಿ ಪಾರಾದರೆ ಅದು ಆ ದೇವನ ಪವಾಡ
ಬದುಕಲಿ ಏನೇ ಬರಲಿ ಒಬ್ಬರಿಗೊಬ್ಬರು
ಸಹಕಾರ ದಿಂದಿರಲು
ಸುಖ ದುಃಖವನು ಎದುರಿಸಿ ಬಂದಂತೆ ಬದುಕಿ ಬಿಡ
ಆಗ ಜೀವನ ಸಂತಸದ ಗೂಡ //

ಬದುಕೆಂಬ ಕಟ್ಟಡಕೆ ನಂಬಿಕೆಯೆ
ಅಡಿಪಾಯ
ಪ್ರೀತಿ ನಂಬಿಕೆ ಎಂಬುದು ಗಟ್ಟಿಯಾದ ಗೋಡೆಯು
ಕಷ್ಟಕ್ಕೆ ಸೊರಗದೆ ಸಂತೋಷಕೆ ಭೀಗದೆ
ಸಾಗಿಸು ನಗುತ ಬದುಕೆಂಬ ದೋಣಿಯ//

ಶ್ರೀಮಂತಿಕೆ ಬಡತನ ಶಾಶ್ವತವಲ್ಲ
ಗೆಳತಿ
ಇದನರಿತು ಬಾಳಿದರೆ ಸದಾ ಸಂತೋಷದಿ ಇರತಿ
ಯಾವಕಾರಣಕ್ಕೂ ಭಯದಿ ಕಳೆದುಕೊಳ್ಳಬೇಡ ನಿನ್ನ ಮತಿ
ಹಾಕು ಗೆಳತಿ ಬದುಕಿನಲಿ ಆಸೆ ಆಡಂಬರಕೆ ಕಡಿವಾಣ ಇರಲಿ ಎಲ್ಲದಕೂ ಇತಿಮಿತಿ//

ರ.ಗು.ಸುತೆ
ಡಾ//ಸುಧಾ.ಚ.ಹುಲಗೂರ
ಧಾರವಾಡ

Don`t copy text!