ಬೇವಿನ ಬೀಜ ಜೀವನ ಸತ್ಯ

ಬೇವಿನ ಬೀಜ

ಬೇವಿನ ಬೀಜ ಜೀವನ ಸತ್ಯ

ಬೇವಿನ ಬೀಜವನ್ನು ನೆಟ್ಟರೆ ಬೇವು ಮಾತ್ರ ಬೆಳೆಯುತ್ತದೆ, ಸುಳ್ಳಿನ ನೆರಳಿನಲ್ಲಿ ಸತ್ಯ ಬೆಳೆಯುವುದಿಲ್ಲ.

ಎಳ್ಳು ಬಿತ್ತಿದರೆ ಸಾಸಿವೆ ಬೆಳೆಯುವುದಿಲ್ಲ, ಕರ್ಮವೇ ಫಲ ಎಂದು ಜಗತ್ತು ಅರಿಯುವುದಿಲ್ಲ.

ಕಲ್ಲಿನ ಮೆಟ್ಟಿಲು ಹತ್ತಿದರೆ ಗುಡ್ಡ ಶಿಖರವಾಗುವುದಿಲ್ಲ, ಶ್ರಮವಿಲ್ಲದೆ ಯಶಸ್ಸು ಸುಲಭದ ಹಾದಿಯಲ್ಲ

ನೀರು ಹರಿದರೆ ನದಿಯಾಗಿ ಹೊಳೆಯಬಹುದು, ಆದರೆ ಗಾಳಿಗೆ ತೇಲಿದ ಹಡಗು ದಿಕ್ಕಿಲ್ಲದೆ ಅಲೆದಾಡುತ್ತದೆ.

ಸ್ವಾರ್ಥದ ಹಿತವು ಸತ್ಯದ ಹಿತವಾಗಲಾರದು, ನಮ್ಮ ಗುಣವೇ ನಮಗೆ ಗುರಿಯ ಬೆಳಕಾಗಬೇಕು.

ಕಣ್ಣಾರೆ ಕಂಡ ತೋರುವುದೆಲ್ಲಾ ನಿಜವಲ್ಲ, ನಂಬಿಕೆಯ ಬೆಳಕಿನಲ್ಲಿ ಜೀವನ ಸಾಗಬೇಕು.

ಬೇವಿನ ಬೀಜ ಬಿತ್ತಿದರೆ ಕಡಲೆ ಬೆಳೆದು ಬರಲಾರದು, ನಮ್ಮ ಕರ್ಮವನ್ನೇ ನಮ್ಮ ಜೀವನದ ಬೀಜವನ್ನಾಗಿ ಬಿತ್ತಬೇಕು.

 

 

 

 

 

 

 

 

 

 

ದೀಪಾ ಪೂಜಾರಿ ಕುಶಾಲನಗರ

Don`t copy text!